
ಭಾಲ್ಕಿ:ಸೆ.10:ಬಸವಾದಿ ಶರಣರು ತಮ್ಮ ವಚನಗಳಲ್ಲಿ ತಿಳಿಸಿದ ವೈಚಾರಿಕ ಚಿಂತನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.
ಇಲ್ಲಿಯ ನಿರ್ಮಲಾ ಹಲ್ಮಂಡಗೆ ಪಿಯು ಕಾಲೇಜಿನಲ್ಲಿ ನಡೆದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನಗಳು ಶರಣರ ಬದುಕಿನ ಜೀವನಾನುಭವದ ಅಮೃತ ವಾಣಿಗಳು. ಅವುಗಳ ಅಧ್ಯಯನದಿಂದ ಸದ್ಗುಣ, ಸನ್ನಡತೆ, ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಅಮರ ಹಲ್ಮಂಡಗೆ ಮಾತನಾಡಿದರು.
ಪತ್ರಕರ್ತ ಬಸವರಾಜ ಪ್ರಭಾ ಉಪನ್ಯಾಸ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಸಂತೋಷ ಹಡಪದ, ಶಿವಕುಮಾರ ಕಾಂಜೋಳಗೆ, ಪಾಂಡುರಂಗ ಸೇರಿದಂತೆ ಇತರರು ಇದ್ದರು.