ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಬೇಕು : ಪತ್ರಕರ್ತ ಅಬ್ದುಲಜಬ್ಬಾರ ಚಿಂಚಲಿ

ಅಥಣಿ :ಫೆ.9: ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ಜೊತೆಗೆ ಕ್ರೀಡೆಗಳು ಮುಖ್ಯವಾಗಿದ್ದು, ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮಥ್ರ್ಯ ಹೆಚ್ಚುತ್ತದೆ. ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಶಕ್ತಿಗಿಂತ ಕೌಶಲ್ಯ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಿಲ್ಲ ಒಂದು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದ ಪತ್ರಕರ್ತ ಅಬ್ದುಲಜಬ್ಬಾರ ಚಿಂಚಲಿ ಹೇಳಿದರು.
ಅವರು ಪಟ್ಟಣದ ಮುರುಗೇಂದ್ರ ಶಿವಯೋಗಿ ವೀರಶೈವ ವಿದ್ಯಾಪೀಠ ಶಾಲೆಯಲ್ಲಿ 20 ನೇ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಬಹುಮಾನ ವಿತರಣೆ ಮಾಡಿ ಮಾತನಾಡುತ್ತಿದ್ದರು. ಮಕ್ಕಳು ಕ್ರೀಡೆಗಳನ್ನ ಆಡುವುದನ್ನು ಮರೆತು ಮೊಬೈಲ್ ಬಳಕೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಮೊಬೈಲ್ ಬಿಟ್ಟು ಕ್ರೀಡೆಗಳತ್ತ ಗಮನ ಹರಿಸಬೇಕು. ಗೆಲುವಿನ ಸಂಭ್ರಮದೊಂದಿಗೆ ಸೋಲನ್ನು ಎದುರಿಸುವ ಛಲ ಕ್ರೀಡೆಗಳು ಕಲಿಸುತ್ತವೆ. ಹೀಗಾಗಿ, ಬಾಲ್ಯದಿಂದಲೇ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಮಕ್ಕಳು ಉತ್ತಮ ಆರೋಗ್ಯ ಮತ್ತು ಸದೃಢತೆಗಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ. ಭಾಗವಹಿಸುವುದು ಮುಖ್ಯ’ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೌಢಶಾಲೆಯ ವ್ಯವಸ್ಥಾಪಕಿ ಟಿ ವಿ ಬೆಳಂಕ್ಕಿ ಮಾತನಾಡಿ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಪರಿಶ್ರಮ ವಹಿಸಿ ಶ್ರದ್ಧಾ-ಭಕ್ತಿಯಿಂದ ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಪಡೆದು ಮುಂದೆ ಉನ್ನತ ವ್ಯಾಸಂಗ ಪೂರೈಸಿ ಉನ್ನತ ಹುದ್ದೆಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ವ್ಯವಸ್ಥಾಪಕಿ ಎಸ್ ಬಿ ಅಪ್ಪಾಜಿಗೋಳ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು. ಶಾಲೆಗೆ ಹಾಗೂ ತಂದೆ-ತಾಯಿಗಳಿಗೆ ಕೀರ್ತಿ ತರಬೇಕು ಎಂದರು.
ಈ ಸಂದರ್ಭದಲ್ಲಿ ಯಾಸ್ಮೀನ್ ಚಿಂಚಲಿ. ಶಾಲೆಯ ಶಿಕ್ಷಕ / ಶಿಕ್ಷಕಿಯರಾದ ಎಸ್ ಎಮ್ ತೇರದಾಳ. ಎ ಬಿ ಸಾಬಣ್ಣವರ. ಆರ್ ವಾಯ್ ನಾಗಠಾಣ. ಎ ಎ ಪುರಾಣಿಕಮಠ. ಎಸ್ ಟಿ ಸನದಿ. ರಾಜು ಪಾಟೀಲ.ಸಚಿನ ನಡುವಿನಮನಿ. ಪ್ರಸಾದ ಇಂಗಳೇಶ್ವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸಂತೋಷ ಸನದಿ ಸ್ವಾಗತಿಸಿದರು. ಸಂಗೀತಾ ತೇರದಾಳ ನಿರೂಪಿಸಿದರು. ರಾಜಶ್ರೀ ನಾಗಠಾಣ ವಂದಿಸಿದರು.

ಮುರುಘೇಂದ್ರ ಶಿವಯೋಗಿ ವಿದ್ಯಾಪೀಠ ಶಾಲೆಯು ಪಟ್ಟಣದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ಕಳೆದ 20 ವರ್ಷಗಳಿಂದ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ನುರಿತ ಶಿಕ್ಷಕ ವೃಂದದಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಶಾಲೆಯ ಅಭಿವೃದ್ಧಿ ವಿಷಯದಲ್ಲಿ ಆಡಳಿತ ಮಂಡಳಿಯವರು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ.