ವಿದ್ಯಾರ್ಥಿಗಳು ವಾಯುಮಾಲಿನ್ಯದ ಬಗ್ಗೆ ಜಾಗೃತಿವಹಿಸಿ: ಅಂಗಡಿ

ಶಹಾಪೂರ:ಆ.21:ದಿನೆ-ದಿನೆ ಹೆಚ್ಚುತ್ತಿರುವ ಕಾರ್ಖಾನೆಗಳ ಕೆಟ್ಟಗಾಳಿ ಹಾಗೂ ವಾಹನಗಳು ಹೊರಸೂಸುವ ಮಾಲಿನ್ಯದಿಂದ ಇಂದು ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಬಸವಪ್ರಭು ವಿದ್ಯಾವರ್ಧಕ ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು. ರಂಗಂಪೇಯ ಖಾದಿ ಕೇಂದ್ರದ ಆವರಣದ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಇಂದು ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಭೂ-ವಿಜ್ಞಾನ ಮಂತ್ರಾಲಯ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ, ವಾಯುಮಾಲಿನ್ಯ ಕುರಿತಾದ ಪ್ರಬಂಧ ಮತ್ತು ಭಾಷಣ ಸ್ಪರ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಕೈಗಾರಿಕರಣ, ನಗರಿಕರಣದ ಪ್ರಭಾವದಿಂದ ಅರಣ್ಯ ನಾಶವಾಗುತ್ತಿದೆ, ಉಸಿರಾಡುವ ಗಾಳಿಕೂಡ ಹಣ ನೀಡಿ ಖರಿದಿಸುವ ಪರಿಸ್ಥಿಗೆ ಬಂದು ನಿಂತಿದೆ, ಹಿಗೆ ಮುಂದುವರೆದರೆ ಬಹಳ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ ಕಾರಣ ವಿದ್ಯಾರ್ಥಿಗಳು ವಾಯುಮಾಲಿನ್ಯದ ಬಗ್ಗೆ ಜಾಗೃತಿ ವಹಿಸಿ ಹೆಚ್ಚು ಗೀಡ, ಮರಗಳನ್ನು ಬೆಳೆಸಬೇಕಾಗಿದೆ ಎಂದು ಅಂಗಡಿ ಸಲಹೆ ನೀಡಿದರು. ಕಾರ್ಯಕ್ರಮವನ್ನು ಹಿರಿಯ ಮುಖಂಡ ಶಿವಶರಣಪ್ಪ ಹೆಡಿಗಿನಾಳ ಉದ್ಘಾಟಿಸಿದರು, ಪ್ರಬಂಧ ಮತ್ತು ಭಾಷಣ ಸ್ಪರ್ದೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯ ವೀರೆಶ ಹಳಿಮನಿ ಪ್ರಮಾಣ ಪತ್ರ ಹಾಗೂ ಗೌರವಧನ ನೀಡಿ ಪೆÇ್ರೀತ್ಸಾಹಿಸಿದರು, ಮುಖ್ಯ ಅತಿಥಿಗಳಾಗಿ ಶ್ರೀಕಾಂತ ರತ್ತಾಳ, ಬಲಭೀಮ ಪಾಟೀಲ, ರುದ್ರಪ್ಪ ಕೆಂಭಾವಿ, ಮಾನೌಯ್ಯ ರುಕ್ಮಾಪೂರ, ವೇಂಕಟೆಶ ದೇವಿಕೇರಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಭಾಷಣ ಸ್ಪರ್ದೆಯಲ್ಲಿ ಗುರುಸ್ವಾಮಿ ಪ್ರಥಮ, ಬಸನಗೌಡ ದ್ವಿತಿಯ ಸ್ಥಾನ ಪಡೆದರು, ಪ್ರಬಂಧ ಸ್ಪರ್ದೆಯಲ್ಲಿ ಆಶಾಬಿ ಪ್ರಥಮ, ರಂಗಮ್ಮ ದ್ವಿತಿಯ, ವಿದ್ಯೆ ತೃತಿಯ ಸ್ಥಾನ ಪಡೆದರು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.