ಕಲಬುರಗಿ:ಸೆ.30: ವಿದ್ಯಾರ್ಥಿಗಳು ಮೊಬೈಲ್ ಬದಿಗಿಟ್ಟು ಓದಿ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೋಡಗಿಸಿಕೊಳ್ಳಬೇಕೆಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ ನೀಡಿದರು.
ಶನಿವಾರದಂದು ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಮ್ಟ್ಟದ ದಸರಾ ಕ್ರೀಡಾಕೂಟ ಉದ್ಫಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಗೇಮ್ ಆಡುವ ಬದಲಾಗಿ ದೈಹಿಕ ಸಾಮಥ್ರ್ಯ ಮತ್ತು ಬುದ್ದಿಶಕ್ತಿ ಹೆಚ್ಚಿಸುವ ದೈಹಿಕ ಕ್ರೀಡೆಗಳನ್ನು ಆಡಬೇಕು ಎಂದರು.
ಸೋಲು ಗೆಲುವು ಸಮಾನಾಗಿ ಸ್ವೀಕರಿಸಬೇಕು ಗೆದ್ದಾಗ ಅತಿಯಾಗಿ ಖುಷಿ ಪಡದೆ, ಸೋತಾಗ ಆತ್ಮ ವಿಶ್ವಾಸದೊಂದಿಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿ ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ, ರಾಜ್ ಮಟ್ಟಕ್ಕೆ ಭಾಗವಹಿಸಿ ಗೆಲುವು ಸಾಧಿಸಿ ಕಲಬುರಗಿ ಕೀರ್ತಿ ಪತಾಕೆ ಹಾರಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸಿ ಮೂಡಿಸಿದರು. ವಿಧಾನಸಭೆ ಶಾಸಕರು ಅಲ್ಲಮಪ್ರಭು ಪಾಟೀಲ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ವಿದ್ಯಾರ್ಥಿಗಳು ಕ್ರೀಡೆ ಯನ್ನು ಒಂದು ಸವಾಲಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳ ದೆ ಛಲ ವಿಶ್ವಾಸದಿಂದ ಆಟ ಆಡಬೇಕೆಂದು ಹೇಳಿದರು
ಕೀಡೆಯಲ್ಲಿ ತಮ್ಮ ಪ್ರತಿಭೆ ತೋರಿಸಬೇಕು ಇದು ಮುಂದಿನ ಜೀವನಕ್ಕೆ ಅನುಕೂಲ ಆಗಲಿದೆ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಿ ಸೋಲು ಗೆಲುವು ಸಾಮಾನಾಗಿ ಭಾಗವಹಿಸುವಿಕೆ ಮುಖ್ಯ. ಕಲಬುರಗಿ ಜಿಲ್ಲೆಗೆ ಕೀರ್ತಿ ತರುವತಂಹ ನಿಟ್ಟಿನಲ್ಲಿ ಪ್ರಯತ್ನ ಮಾಡಿಬೇಕು ವಿದ್ಯಾರ್ಥಿಗಳು ತಮ್ಮ ಪ್ರತಿಭೇಯನ್ನು ವ್ಯಕ್ತಪಡಿಸಿ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ಸಲಹೆ ನೀಡಿದರು ಕೋಕೋ, ಕಬ್ಬಡಿ,ಥ್ರೋಬಲ,ಯೋಗ ಅಥಲಟಿಕ್ಸ್ ಕ್ರೀಡಾಕೂಡಗಳು ಜರಗಿದ್ದವು. ಜಿಲ್ಲೆಯಾದ್ಯಂತ ಆಳಂದ, ಕಮಲಾಪೂರ,ಚಿಂಚೋಳಿ, ಕಾಳಗಿ,ಚಿತ್ತಾಪೂರ,ಶಹಾಪೂರ,ಅಫಜಲಪೂರ, ಜೇವರ್ಗಿ, ಸೇಡಂ, ಯಡ್ರಾಮಿ, ತಾಲೂಕಿನ ಕ್ರೀಡಾಪಟುಗಳು ಮಕ್ಕಳು ಭಾಗವಹಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಅವರು ಸ್ವಾಗತಿ ಮೈಸೂರ ಕ್ರೀಡೆಯಲ್ಲಿ ಆಟವಾಡುವ ಕ್ರೀಡಾಗಳಿಗೆ ನಮ್ಮ ಪ್ರೋತ್ಸಾಹ ಇದೆ ಎಂದರು
ಇದೇ ಸಂದರ್ಭದಲ್ಲಿ ಹಾಕಿ ತರರಬೇತಿದಾರ ಪುಟಬಾಲ್ ತರಬೇತಿದಾರ ಪ್ರವೀಣ ಕುಮಾರ ಸಂಜಯ್ ಬಾಣದ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅದ್ಯಕ್ಷ ಶಿವಪುತ್ರ ಹೂಗಾರ್, ಪ ಎಲ್ಲಾ ಶಾಲಾ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.