ವಿದ್ಯಾರ್ಥಿಗಳು ಮೊಬೈಲ್ ನ ದಾಸರಾಗದಿರಲು ಸಲಹೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ನ.24: ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ನೀಡಿ, ಆದರೆ  ಮೊಬೈಲ್ ನ ದಾಸರಾಗಬೇಡಿ ಎಂದು ಪಿಎಸ್ಐ ವಿಜಯ ಕೃಷ್ಣ ತಿಳಿಸಿದರು.
ಕೊಟ್ಟೂರೇಶ್ವರ ಮಹಾವಿದ್ಯಾಲಯ, ರಾಜ್ಯಶಾಸ್ತ್ರ ವಿಭಾಗ ಹಾಗೂ ಪೋಲಿಸ್ ಇಲಾಖೆ ಕೊಟ್ಟೂರು ಇವರ ಸಹಭಾಗಿತ್ವದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು  ಕೊಟ್ಟೂರೇಶ್ವರ ಪದವಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
 ಈ ಕಾರ್ಯಕ್ರಮ ಉದ್ದೇಶಿಸಿ  ಪಿಎಸ್ಐ ವಿಜಯಕೃಷ್ಣ ಮಾತನಾಡಿ ವಿದ್ಯಾರ್ಥಿಗಳ ಇವತ್ತಿನ ಆಧುನಿಕ ಜಗತ್ತಿನ ಬದುಕು ಮೊಬೈಲ್ ಮಯವಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಮೊಬೈಲಿನಿಂದ ದೂರ ಇರಬೇಕು ಹಾಗೂ ವಿದ್ಯಾರ್ಥಿಗಳು ಕಾಲೇಜಿನ ಜನತೆ ಗೌರವಗಳನ್ನು ಕಾಪಾಡುವುದರ ಜೊತೆಗೆ ತಂದೆ ತಾಯಿಗಳ ಜವಾಬ್ದಾರಿಗಳನ್ನು ಸಾಕಾರಗೊಳಿಸಬೇಕೆಂದು ಕರೆ ನೀಡಿದರು.ನಂತರ  ಎಸ್ಐ ಅಬ್ಬಾಸ್  ಮಾತಾನಾಡಿ ವಿದ್ಯಾರ್ಥಿಗಳು ಕಾನೂನ ಬಗ್ಗೆ ಅರವಿರಬೇಕು ಕಾನೂನುಗಳು ಮತ್ತು ಜವಾಬ್ದಾರಿಗಳು ಒಂದು ರೀತಿಯಲ್ಲಿ ವಿದ್ಯಾರ್ಥಿಗಳು ಆಮಿಷಗಳಿಗೆ ಬಲಿಯಾಗದೆ ವಿದ್ಯಾರ್ಥಿ ಜೀವನವು ಅತ್ಯಂತ ಮಹತ್ವವಾದಂತಹ ಘಟ್ಟ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ  ಶಾಂತಮೂರ್ತಿ ಬಿ ಕುಲಕರ್ಣಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ಮತ್ತು ಸಂಯಮದಿಂದ ವರ್ತಿಸಬೇಕು ವಿದ್ಯಾರ್ಥಿಗಳ ಜೀವನ ಉತ್ತಮವಾಗಬೇಕಾದರೆ ಉತ್ತಮ ಶಿಸ್ತಿನಿಂದ ಜೀವನದ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಮತ್ತು ಅಸಭ್ಯ ವರ್ತನೆಗಳನ್ನು ತೋರಬಾರದು ಎಂದು ಕರೆ ನೀಡಿದರು.
 ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ರಾಧಾ ಸ್ವಾಮಿ ಕೆ ಪಿ ನಿರೂಪಿಸಿದರು.
 ಈ ಸಂದರ್ಭದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಜೆ ಬಿ ಸಿದ್ದನಗೌಡ.ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶಿವಕುಮಾರ್.ಬಸವರಾಜ ಬಣಕಾರ್.ಮೈಲಾರಗೌಡ. ಹನುಮಂತಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಕಲ್ಲೇಶ್ ಹಾಗೂ ಇತರರು ಉಪಸ್ಥಿತರಿದ್ದರು.