ವಿದ್ಯಾರ್ಥಿಗಳು ಮಣ್ಣು- ಮರಗಳ ಮಹತ್ವ ಅರಿಯಬೇಕು :- ಡಾ.ಲಕ್ಷ್ಮಿಕಾಂತ್ ಕಿವಿಮಾತು

ಸಂಜೆವಾಣಿ ವಾರ್ತೆ

ಜಗಳೂರು.ಸೆ.೯:ವಿದ್ಯಾರ್ಥಿಗಳು ಮಣ್ಣು ಮತ್ತು ಮರಗಳ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಜಿಲ್ಲಾ ಪರಿಸರ ಅಧಿಕಾರಿ ಡಾ.ಲಕ್ಷ್ಮಿಕಾಂತ ಕಿವಿಮಾತು ಹೇಳಿದರು.ಪಟ್ಟಣದ‌ ಗುರುಭವನದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಗಣೇಶ ಮಣ್ಣಿನ ಮೂರ್ತಿ ತಯಾರಿಸುವ  ಕಾರ್ಯಾಗಾರದಲ್ಲಿ  ಅವರು ಮಾತನಾಡಿದರು.ಪ್ರಕೃತಿಯಲ್ಲಿ ಸಸಿನೆಟ್ಟರೆ ಮಣ್ಣಿನಲ್ಲಿನ ಸತ್ವವನ್ನು ಹೀರಿಕೊಂಡು ಗಾಳಿ,ಬೆಳಕು,ನೀರಿನ ಸಹಾಯದಿಂದ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯಿಂದ ಮರಳಿ ನೀರಿನ ಆವಿಕರಣ ಮಾತ್ರವಲ್ಲದೆ ಶುದ್ದ ಗಾಳಿಯನ್ನು ಮರಳಿ ಪರಿಸರಕ್ಕೆ ಒದಗಿಸುತ್ತದೆ.ಇದರಿಂದ ಜೀವ ಸಂಕುಲದ ಉಳಿವು ಸಾಧ್ಯ ಆದ್ದರಿಂದ ಮರಗಳು ದೇವರ ಸ್ವರೂಪ ಎಂದು ತಿಳಿಸಿದರು.ನಗರ ಪ್ರದೇಶಗಳಲ್ಲಿನ ಕೊಳಚೆ ನೀರು,ಘನತ್ಯಾಜ್ಯ ವಸ್ತುಗಳಿಂದ ಪರಿಸರ ಮಲೀನತೆ ಹೆಚ್ಚಾಗುತ್ತಿದ್ದು. ಸಾರ್ವಜನಿಕರಿಗೆ ಪರಿಸರ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ರಾವ್ ಮಾತ ನಾಡಿ,ವಿದ್ಯಾರ್ಥಿಗಳ ಮೇಲೆ ಶಾಲೆ ಆವರಣದ ಮುಂಬಾಗ ಕೆಲ ಕಿಡಿಗೇಡಿಗಳಿಂದ ದೌರ್ಜನ್ಯ ಗಳು,ಮನೆಯ ಸುತ್ತಮುತ್ತ ಅಪರಿಚಿತರ ಅಲೆದಾಟ, ನೆರೆಹೊರೆಯಲ್ಲಿ ಅಪಘಾತಗಳು ಸಂಭವಿಸಿದರೆ,ಕಳ್ಳತನ,ಬ್ಯಾಂಕ್ ಖಾತೆಗಳಲ್ಲಿ ಣವಂಚನೆಯಂತಹ ಘಟನೆಗಳು ಸಂಭವಿಸಿದಲ್ಲಿ ಕೂಡಲೇ ಪೋಷಕರು ಅಥವಾ ಶಿಕ್ಷಕರಿಗೆ ಮಾಹಿತಿ ತಿಳಿಸಿ ನಂತರ ಪೊಲೀಸ್ ಇಲಾಖೆ ಸಹಾಯವಾಣಿ 112 ಕ್ಕೆ ಕರೆ ಮಾಡಬೇಕು ಎಂದು ತಿಳಿಸಿದರು.ಮಣ್ಣಿನ ಗಣಪತಿ ತಯಾರಿಕೆಯ ಕಾರ್ಯಾಗಾರದಲ್ಲಿ ಭಾಗವಹಿಸಿರುವ ತಾವುಗಳು ಸ್ಪರ್ಧಾತ್ಮವಾಗಿ ಸೃಜನಶೀಲತೆಯಿಂದ ಮೂರ್ತಿ ತಯಾರಿಸಬೇಕು. ವೈಯಕ್ತಿಕ ಭಿನ್ನತೆ ಕಲಿಕೆ ಮತ್ತು ಪ್ರತಿಭೆಗಳಲ್ಲಿ ಸಹಜ ಕೀಳಿರಿಮೆ ಸಲ್ಲದು ಸವಾಲಾಗಿ ಪಡೆದುಕೊಂಡು ಆತ್ಮತೃಪ್ತಿ ಹೊಂದಬೇಕು ಎಂದರು.ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಗ್ರಾ.ಪಂ ಸದಸ್ಯ ಪ್ರಶಾಂತ್,ಆರೋಗ್ಯ ನಿರೀಕ್ಷಕ ಖಿಫಾಯತ್,ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು