ವಿದ್ಯಾರ್ಥಿಗಳು ಭವಿಷ್ಯದಲ್ಲಿ ಛಲವೊಂದಿದ್ದರೇ ಬೇಕಾದುದನ್ನು ಸಾಧಿಸಬಹುದು

ಇಂಡಿ:ಡಿ.30: ವಿದ್ಯಾರ್ಥಿಗಳು ತಯಾರಿಸಿದ ಗಣಿತ ಮಾಡೆಲ್ಸಗಳನ್ನು ನೋಡಿ ಹರ್ಷವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಪ್ರೇರೆಪಿಸಿದಲ್ಲದೆ ಭವಿಷ್ಯದಲ್ಲಿ ಉತ್ತಮ ಅಧಿಕಾರಿಯಾಗಬೇಕು ಎಂದರೆ ಛಲವೂಂದಿದ್ದರೇ ಸಾಕು ಬೇಕಾದುದನ್ನು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಎನ್.ಅಂಬಿಕಾ ಅವರು ಉನ್ನತ ಅಧಿಕಾರಿಯಾಗಿರವ ಅವರ ಸ್ಫೂರ್ತಿದಾಯಕ ಸಾಧನೆಯ ಗುರಿಯಾಗಿ ಇಟ್ಟುಕೊಳ್ಳಬೇಕು ಎಂದು ಶ್ರೀ. ಪುಂಡಲೀಕ ಮಾನವರ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ವಿಜಯಪುರ ಅವರು ಹೇಳಿದರು. ತಾಲೂಕಿನ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ, ಅಂಜುಟಗಿಯಲ್ಲಿ ಗಣಿತ ಶಾಸ್ತ್ರಜ್ಞರಾದ ಶ್ರೀನಿವಾಸ ರಾಮಾನುಜನ್ ಇವರ ಜನ್ಮ ದಿನದ ಅಂಗವಾಗಿ ಆಚರಿಸುವ ರಾಷ್ಟ್ರೀಯ ಗಣಿತ ದಿನಾಚರಣೆಯ ನಿಮತ್ಯ ಹಮ್ಮಿಕೊಂಡ ಗಣಿತ ವಸ್ತು ಪ್ರದರ್ಶನ ಹಾಗೂ ತಾಲೂಕು ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಹಾಗೂ ಶ್ರೀ. ನೀಲಕಂಠ ರೂಗಿ ಅದ್ಯಕ್ಷರು ಪಿ.ಕೆ.ಪಿ.ಎಸ್. ಅಂಜುಟಗಿ ಇವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣಿತ ವಿಷಯ ವಸ್ತು ಪ್ರದರ್ಶನ ವೀಕ್ಷಿಸಿ ವಿದ್ಯಾರ್ಥಿಗಳ ಬಗ್ಗೆ ಪ್ರಶಂಶಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ. ಜಟ್ಟೆಪ್ಪ ರವಳಿ, ಶ್ರೀ ಶಿವರಾಜ ಬಿರಾದಾರ, ಶ್ರೀ ಎಸ್. ಆರ್. ಬೆನಕಟ್ಟಿ ಇವರು ಮಾತನಾಡಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಅಧಿಕಾರಿಯಾಗಬೇಕು, ಛಲವೂಂದಿದ್ದರೇ ಬೇಕಾದುದನ್ನು ಸಾಧಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶ್ರೀ. ಶೇಖರ ನಾಯಕ ಹಾಗೂ ಅಂಜುಟಗಿ ಗ್ರಾಮದ ಮುಖಂಡರು ಮತ್ತು ಪಾಲಕರು ಉಪಸ್ಥಿತರಿದ್ದರು. ಕಳೆದ ವರ್ಷ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯರಾದ ಸುಜಾತಾ ರಾಠೋಡ ಮತ್ತು ಆರತಿ ಬಿರಾದಾರ ಇವರಿಗೆ ಸನ್ಮಾನಿಸಲಾಯಿತು. ಅತಿಥಿಗಳು ಎಲ್ಲರು ಸೇರಿ ಶಾಲೆಯ ಗಣಿತ ಶಿಕ್ಷಕರಾದ ಶ್ರೀ. ಸೈಫನ್‍ಮುಲ್ಕ ಬಿಂಗೋಳಗಿ ಇವರಿಗೆ ಸನ್ಮಾನಿಸಿ ವಸ್ತು ಪ್ರದರ್ಶನ ಹಾಗು ರಸ ಪ್ರಶ್ನೆ ಸ್ಪರ್ದೆ ಏರ್ಪಡಿಸಿದ್ದಕ್ಕೆ ಇವರನ್ನು ಪ್ರಶಂಶಿಸಿದರು.
ಗಣಿತ ರಸಪ್ರಶ್ನೆ ಸ್ಪರ್ದೆಯಲ್ಲಿ ತಾಲೂಕಿನ ಆಂಗ್ಲ ಮಾಧ್ಯಮದ 13 ಶಾಲೆಗಳು ಭಾಗವಹಿಸಿದ್ದರು, ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹತ್ತು ಸಾವಿರ ರೂ. ಗಳನ್ನು ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಅಂಜುಟಗಿ ತನ್ನ ಮಡಲಿಗೆ ಸೆರಿಸಿಕೊಂಡಿತು, ದ್ವಿತೀಯ ಬಹುಮಾನ ಐದು ಸಾವಿರ ರೂ.ಗಳನ್ನು ಆರ್.ಎಮ್.ಶಾಹಾ ಶಾಲೆ ಇಂಡಿ. ತೃತಿಯ ಬಹುಮಾನ 2,500/-ರೂ. ಗಳನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೊರ್ತಿ ಪಡೆದುಕೊಂಡಿರುತ್ತಾರೆ. ಎಲ್ಲಾ ಶಾಲೆಯ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು.
ಪ್ರಥಮ ಬಹುಮಾನವನ್ನು ಶ್ರೀ. ನೀಲಕಂಠ ರೂಗಿ, ದ್ವಿತಿಯ ಬಹುಮಾನವನ್ನು ಶ್ರೀ. ಶಿವರಾಜ ಬಿರಾದಾರ, ತೃತಿಯ ಬಹುಮಾನವನ್ನು ಬಸವರಾಜ ವಠಾರ, ಮಂಟಪ ಸೇವೆಯನ್ನು ಶ್ರೀ. ಅಬ್ದುಲ್ ಇಂಡಿಕರ, ಛಾಯಾಚಿತ್ರ ಹಾಗೂ ವಿಡಿಯೋ ರಿಕಾರ್ಡಿಂಗ ಸೇವೆಯನ್ನು ಜೇವೂರ ಫೋಟೊ ಸ್ಟುಡಿಯೋ ಇಂಡಿ, ಇವರು ನೀಡಿರುತ್ತಾರೆ.
ಶಾಲೆಯ ಪ್ರಾಂಶುಪಾಲರಾದ ಶ್ರೀ. ಚನ್ನಪ್ಪ ಸೇಠೆ, ಇವರು ಅತಿಥಿಗಳನ್ನು ಸ್ವಾಗತಿಸಿದರು, ಕಾರ್ಯಕ್ರಮದ ನಿರುಪಣೆಯನ್ನು ನಿಲಯ ಪಾಲಕರಾದ ಶ್ರೀ. ಸಂಜೀವಕುಮಾರ ಹಿರೋಳ ಅವರು ನಡೆಸಿಕೊಟ್ಟರು, ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀ. ಅರವಿಂದ ತಳವಾರ ನಡೆಸಿಕೊಟ್ಟರು, ರವಿ ಹೊಸಮನಿ ಅವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಾಲಾ ಸಿಬ್ಬಂದಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.