ವಿದ್ಯಾರ್ಥಿಗಳು ಬಹುಮುಖ ಪ್ರತಿಭೆ ಬೆಳೆಸಿಕೊಳ್ಳುವುದು ಅಗತ್ಯ

ಶಿರಹಟ್ಟಿ,ಸೆ.17: ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಬಹುಮುಖ ಪ್ರತಿಭೆಯನ್ನು ಬೆಳೆಸಿಕೊಳ್ಳವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ವಿದ್ಯಾವಂತರಾಗುವುದರ ಜೊತೆಗೆ ಸಂಸ್ಕಾರವಂತರಾಗುವುದು ಅವಶ್ಯವಿದೆ ಎಂದು ಪಟ್ಟಣ ಸರಕಾರ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಜಿ.ಗಿರಿತಿಮ್ಮಣ್ಣವರ ಹೇಳಿದರು.
ಅವರು ಪಟ್ಟಣದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತಿಸಿ ಮತ್ತು ವಾರ್ಷಿಕ ಸಂಸ್ಕøತಿಕ ಮತ್ತು ಸಾಂಘಿಕ ಚÀಟಿವಟಿಕೆಗಳ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮತನಾಡಿದರು.
ನಮ್ಮೆ ದೇಶದಲ್ಲಿ ಮಹಾನ ಸಾಧಕರು ಸಾಧಿಸಿ ದೇಶವನ್ನು ಶ್ರೇಷ್ಠಗೊಳಿಸಿದ್ದಾರೆ. ಅವರೆಲ್ಲ ಆದರ್ಶ ಮತ್ತು ದೇಶದ ಪ್ರತಿಷ್ಠೆಯನ್ನು ವ್ಯೆಕ್ತಪಸಿಡಿಸುವ ಸಂಸ್ಕøತಿ ಮತ್ತು ಸಂಸ್ಕಾರಗಳು ಅತ್ಯಂತ ಶೇಷ್ಠವಾದವುಗಳು ಅವುಗಳನ್ನು ಪಾಲಿಸುವುದಕ್ಕಾಗಿ ಶಾಲಾ ಕಾಲೇಜು ಹಂತಗಳಲ್ಲಿ ಸಂಸ್ಕøತಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳು ಕಾಲೇಜನಲ್ಲಿ ಜರುಗುವ ಎಲ್ಲ ರೀತಿ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮುಖ ಪ್ರತಿಬೆಯನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದಿ. ಪ್ರೋ..ಬಸವರಾಜ ಸಜ್ಜನರ ಇವರ ಸ್ಮರಣಾರ್ಥ ಬಡ ವಿದ್ಯಾರ್ಥಿಗಳಿಗೆ ಬ್ಯಾಗ ಮತ್ತು ಪೆನ್ನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಾಕೀರ ಹುಸೇನ ಮುಜಾವರ, ರಾಜೇಶ್ವರಿ ಸಂಶೀ ,ಕೊಟ್ರಯ್ಯ ಹೊಂಬಾಳಿಮಠ,ಪರಿಮಳಾ ಮುಂತಾದವರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.