ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

ಔರಾದ್ :ಮಾ.4: ವಿದ್ಯಾರ್ಥಿಗಳು ಬದುಕಲ್ಲಿ ಪ್ರತಿಯೊಂದನ್ನು ವಿಮರ್ಶಿಸುವ, ಪ್ರಶ್ನಿಸುವ, ಸಂಶೋಧಿಸುವ ಮೂಲಕ ವೈಜ್ಞಾನಿಕ ಜೀವನ ರೂಪಿಸಿಕೊಳ್ಳಬೇಕು ಎಂದು ಔರಾದ್ ಮಿನಿ ವಿಜ್ಞಾನ ಕೇಂದ್ರದ ಸಂಯೋಜಕ ವಿರೇಶ ಪಾಂಚಾಳ ಅಭಿಪ್ರಾಯಪಟ್ಟರು.
ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲವೂ ಸುಮ್ಮನೇ ಒಪ್ಪಿಕೊಳ್ಳುವ ಬದಲು ಅದು ಹೇಗೆ? ಏಕೆ? ಏನು? ಎಂಬಂತಹ ತರ್ಕಬದ್ಧ ಪ್ರಶ್ನೆಗಳು ಕೇಳಿ ಸತ್ಯಾಂಶಗಳು ತಿಳಿದುಕೊಳ್ಳಬೇಕು.
ನಿತ್ಯ ಪ್ರತಿಯೊಂದು ಹಂತದಲ್ಲಿ ವಿಜ್ಞಾನ ತಂತ್ರಜ್ಞಾನದ ಉಪಕರಣಗಳು ನಾವು ಉಪಯೋಗಿಸುತ್ತಿದ್ದೆವೆ. ವಿಜ್ಞಾನದ ತಳಹದಯ ಮೇಲೆ ತಂತ್ರಜ್ಞಾನ ನಿಂತಿದೆ. ತಂತ್ರಜ್ಞಾನವು ಮಕರುವ ಕ್ರಿಯಾಶೀಲತೆ, ಸೃಜನಶೀಲತೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ವಿಜ್ಞಾನ ತಂತ್ರಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದನ್ನು ಹಲವು ನಿದರ್ಶನ ಮತ್ತು ಸರಳ ಹಾಗೂ ಹಾಸ್ಯಭರಿತ ಪ್ರಯೋಗಗಳ ಮೂಲಕ ಮಾಡಿ ಮಕ್ಕಳಿಗೆ ಮನರಂಜಿಸಿದರು.
ಶಾಲೆಯ ವಿಜ್ಞಾನ ಶಿಕ್ಷಕ ಬಿ.ಎಂ ಅಮರವಾಡಿ ಮಾತನಾಡಿ, ಸರ್ ಸಿವಿ ರಾಮನ್ ಅವರ ಅಪೂರ್ವ ಸಾಧನೆ ರಾಮನ್ ಇಫೆಕ್ಟ್ ವಿವರ ಜಗತ್ತಿದೆ ತಿಳಿಸಿದ ದಿನದ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸುತ್ತೆವೆ. ರಾಮನ್‍ರು ನೋಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿಯಾಗಿದ್ದಾರೆ. ಒಂದು ದೇಶದ ಅಭಿವೃದ್ಧಿ ಅಲ್ಲಿಯ ಜನ ಬಳಸುವ ನೈತಿಕ ವಿಜ್ಞಾನದ ಅಡಿಪಾಯವಾಗಿದೆ. ಜೀವನದಲ್ಲಿ ಎಲ್ಲದಕ್ಕೂ ಋಣಾತ್ಮಕವಾಗಿ ಯೋಚಿಸುವ ಮನುಷ್ಯ ವಿಜ್ಞಾನಕ್ಕೆ ಹತ್ತಿರವಿದ್ದೂ ಸಹ ಬಹುದೂರ ನಿಂತಿದ್ದಾನೆ. ಚಿಂತೆಗಳು ಬಿಟ್ಟು ಚಿಂತನೆ ಮಾಡುತ್ತಲೇ ವೈಜ್ಞಾನಿಕವಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಶಾಲೆಯಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸೀಮಾ, ಸಾಕ್ಷಿ, ಆರತಿ, ಸದಾನಂದ, ಕೇದಾರ್, ಇಮಾನವೆಲ್, ಪ್ರಜ್ವಲ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಜೈಸಿಂಗ್ ಠಾಕೂರ್, ಅಂಕುಶ ಪಾಟೀಲ್, ರೂಪಾ, ಸಿದ್ದೇಶ್ವರಿ ಸ್ವಾಮಿ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು. ಸೀಮಾ ನಿರೂಪಿಸಿ, ಸಾಕ್ಷಿ ಸ್ವಾಗತಿಸಿ, ಆರತಿ ವಂದಿಸಿದಳು.