ವಿದ್ಯಾರ್ಥಿಗಳು ಪುಸ್ತಕ ಸ್ನೇಹಿಯಾಗಲಿ:ದೊಡ್ಡಮನಿ

ಕಲಬುರಗಿ,ಸೆ.21-ವಿದ್ಯಾರ್ಥಿಗಳು ಪುಸ್ತಕ ಸ್ನೇಹಿಗಳಾಗಿ ನಿರಂತರ ಅಧ್ಯಯನದ ಮೂಲಕ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ಪಡೆದು ಉನ್ನತ ಹುದ್ದೆಗಳನ್ನು ಹೊಂದಬೇಕು ಎಂದು ಎನ್.ಎಸ್.ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡ್ಡಮನಿ ಹೇಳಿದರು.
ಕಾಳಗಿ ತಾಲೂಕಿನ ರೇವಗ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ಸಾಹಿತ್ಯ-ಸಾಂಸ್ಕøತಿಕ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳನ್ನು ಉದ್ಘಾಟಸಿ ಮಾತನಾಡಿದ ಅವರು, ವಿದ್ಯಾರ್ಥಿ ಯುವಜನರ ದೃಷ್ಟಿ ಗ್ರಾಮೀಣ ಭಾರತದಲ್ಲಿ ಸರ್ವೋದಯ ಸೃಷ್ಟಿ ಯಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನಿಂದ ವರ್ಗಾವಣೆಗೊಂಡ ಉಪನ್ಯಾಸಕರಾದ ಡಾ.ಚಂದ್ರಶೇಖರ್ ದೊಡ್ಡಮನಿ, ಲೀಲಾವತಿ ಆರ್ ಪಿ, ಕಾಶಿನಾಥ್ ಮುಖರ್ಜಿ ಮುಂತಾದವರನ್ನು ಸನ್ಮಾನಿಸಲಾಯಿತು. ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರಾಜು ಗಂಗಾಧರ ವಹಿಸಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಸಂತೋಷ್ ಕುಮಾರ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದÀ ಸಿದ್ಧರಾಮ ಪುಲಾರ, ಶರೀಫ್ ಎಂಎಫ್, ಲಕ್ಷ್ಮಿ ವೇಲುಸ್ವಾಮಿ, ಗುರುನಂಜೇಶ್ವರ,ಸತೀಶ್ ಕುಮಾರ್ ಹಾಗೂ ಶರಬಸವ ಹೆಗ್ಗಡೆ ಸಹಾಯಕ ಮಲ್ಲಣ್ಣ ಮುಂತಾದವರು ಉಪಸ್ಥಿತರಿದ್ದರು.