ವಿದ್ಯಾರ್ಥಿಗಳು ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು


ಗುಳೇದಗುಡ್ಡ,ಜು.9: ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಎರಡೂ ಮುಖ್ಯ. ಪಠ್ಯೇತರ ಚಟುವಟಿಕೆಗಳಿಂದ ಮನಸ್ಸು, ದೇಹ ಎರಡೂ ಸದೃಢಗೊಂಡು ಉತ್ತಮ ವ್ಯಕ್ತಿತ್ವ ರೂಪಿಸಲು ಸಹಾಯಕವಾಗುತ್ತದೆ ಎಂದು ವೆಂಕಟೇಶ ಕನ್ನಡ ಮಾಧ್ಯಮ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಘು ಕಾಟವಾ ಹೇಳಿದರು.
ಸ್ಥಳೀಯ ಪಿಇಟಿ ಇಂಟರ್‍ನ್ಯಾಶನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಕೆಯನ್ನು ಮುಂದುವರಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಿಇಟಿ ಗೌರವಕಾರ್ಯದರ್ಶಿ ರವೀಂದ್ರ ಪಟ್ಟನಶೆಟ್ಟಿ, ಶಾಲೆಯ ಚೇರಮನ್ ಪುರುಷೋತ್ತಮ ಝಂವರ, ಸಂಸ್ಥೆಯ ಸದಸ್ಯರಾದ ಎಸ್.ಎಸ್. ನಾಯನೇಗಲಿ, ಲಕ್ಷ್ಮೀನಿವಾಸ ಕಾಬ್ರಾ, ಅಮಾತೆಪ್ಪಾ ಕೊಪ್ಪಳ, ಪ್ರಾಚಾರ್ಯ ನಾಗರಾಜ ಬಾವಿ, ಅರುಣ ಕಾಟವಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.