ವಿದ್ಯಾರ್ಥಿಗಳು ಪಠ್ಯದ ಜತೆ ಜನಸೇವೆ ಮೈಗೂಡಿಸಿಕೊಳ್ಳಿ

ಕಲಬುರಗಿ,ಮಾ.27- ಪಠ್ಯದ ಜತೆ ಜನಸೇವೆ, ದೇಶಸೇವೆಯ ಮೂಲಕ ವಿದ್ಯಾರ್ಥಿಗಳು “ನನಗಾಗಿ ಅಲ್ಲ ಅದು ನಿಮಗಾಗಿ” ಎಂಬ ತತ್ವಸಿದ್ಧಾಂತವನ್ನು ಮೈಗೊಡಿಸಿಕೊಳ್ಳುವಂತೆ ಡಾ.ಚಂದ್ರಶೇಖರ ದೊಡ್ಡಮನಿ ಅವರು ಕರೆ ನೀಡಿದರು.
ನಗರದ ಶಹಾಬಜಾರ ಆರಾಧನಾ ಪಿಯು ಕಾಲೇಜು ಮತ್ತು ಎನ್‍ಎಸ್‍ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬರಿಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎನ್‍ಎಸ್‍ಎಸ್ ಸೇರುವ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಲ್ಲಿ ಶೇ.5ರಷ್ಟು ಮೀಸಲಾತಿ ಸಿಗುತ್ತದೆ ಇಲ್ಲಿ ನೀಡಲಾಗುವುದ ಶಿಸ್ತು, ಸಮಾಜಸೇವೆಯ ಕುರಿತಾದ ತರಬೇತಿ ಮುಂದಿನ ಜೀವನದಲ್ಲಿ ಸಮಾಜಮುಖಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಡಾ.ಸ್ನೇಹಾ ಬಿ.ನವಲೆ ಅವರು ಮಾತನಾಡಿ, ಪೌಷ್ಠಿಕ ಆಹಾರದ ಕೊರತೆಯಿಂದಾಗಿ ರಕ್ತಹೀನತೆ ಉಂಟಾಗುತ್ತದೆ. ಇದನ್ನು ತಡೆಯಲು ಹೆಚ್ಚು ತರಕಾರಿ ಹಾಗು ಹಣ್ಣು ಹಂಪಲ ಸೇವಿಸಬೇಕು ಎಂದರು.
ತಾವು ಶಾಲೆಯ ಕಡೆಯ ಸಾಲಿನ ಬೆಂಚಿನ ವಿದ್ಯಾರ್ಥಿಯಾಗಿದ್ದೇ ತಂದೆ ತಾಯಿ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಕೈಗೋಂಡ ಪರಿಣಾಮ ಇಂದು ತಮ್ಮ ಮುಂದೆ ಹಾಗೂ ನನಗೆ ಪಾಠ ಹೇಳಿಕೊಟ್ಟ ಗುರುಗಳ ಹಾಗೂ ತಂದೆ ತಾಯಿಯ ಮುಂದೆ ನಿಲ್ಲಲು ಹೆಮ್ಮೆ ಎನಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇತನಕುಮಾರ ಗಾಂಗಜೀ ವಹಿಸಿದ್ದರು. ಎನ್‍ಎಸ್‍ಎಸ್ ಅಧಿಕಾರಿ ಡಾ.ಅಂಬಾರಾಯ ಎಸ್.ಹಾಗರಗಿ, ಕುಮಾರ ಭಾಗ್ಯಶ್ರೀ ಶಟವಾಜಿ ಅವರು ಸ್ವಾಗತಿಸಿದರು, ಭೀಮರಾವ ಪಾಟೀಲ, ರಾಜಕುಮಾರ ಗಾಂಗಜಿ ಸೇರಿದಂತೆ ಹಲವುಜನ ಗಣ್ಯಮಾನ್ಯರು, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.