ವಿದ್ಯಾರ್ಥಿಗಳು ನೌಕರಿಗಾಗಿ ಅಲೆಯದೇ ಸ್ವಾವಲಂಬಿ ಬದುಕಿಗೆ ಗಮನ ಹರಿಸಲು ಕರೆ: ಶಂಕರಗೌಡ ಪಾಟೀಲ

ಇಂಡಿ :ಫೆ.27: ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇವಲ ನೌಕರಿಗಾಗಿ ನಿರಂತರವಾಗಿ ಅಲಿಯದೇ ಸ್ವಯಂ ಉದ್ಯೋಗ ಸೃಷ್ಠಿಸಿಕೊಳ್ಳಲು ಶಿಕ್ಷಣ ಪಡೆಯುವದರೊಂದಿಗೆ ಸ್ವಾವಲಂಬಿ ಬದುಕಿಗೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಜಿಲ್ಲಾ ಸ್ವದೇಶಿ ಜಾಗರಣಾ ಸಮಿತಿ ಸಂಚಾಲಕ ಶಂಕರಗೌಡ ಪಾಟೀಲ (ಡೊಮನಾಳ) ಕರೆ ನೀಡಿದರು.

      ತಾಲೂಕಿನ ಹಿರೇಬೇವನೂರ ಗ್ರಾಮದ ಬ.ವಿ.ವ ಸಂಘದ ಆಶ್ರಯದ  ಭಾಗ್ಯವಂತಿ ಪೌಡ ಶಾಲೆ, ಭಗವತಿ ಹಿರಿಯ ಪ್ರಾಥಮಿಕ ಶಾಲೆ, ಕೃಷ್ಣಾ ಸ್ವತಂತ್ರ ಕಲಾ ಹಾಗೂ ವಿಜ್ಞಾನ ಪ.ಪೂ ಮಹಾ ವಿದ್ಯಾಲಯದ 10 ನೇ ವರ್ಗದ ವಿದ್ಯಾರ್ಥಿ ವಿದ್ಯಾರ್ಥಿನಿಯರ, ದ್ವೀತಿಯ ವರ್ಷದ ಪ.ಪೂ ಮಹಾ ವಿದ್ಯಾ¯ಯ ಹಾಗೂ 7ನೇ ವರ್ಗದ ವಿದ್ಯಾರ್ಥಿ ವಿದ್ಯಾರ್ಥಿನಿಯರ 2022-23ನೇ ಸಾಳಿನ ಬಿಳ್ಕೊಡುವ ಸಮಾರಂಭ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕøತಿಕ ಮನರಂಜನಾ ಸಮಾರಂಭದ ಉದ್ಘಾಟನೆ, ಜ್ಯೊತಿ ಬೆಳಗಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ನಿಮಗೆ ಕಲಿಸಿದ ಶಿಕ್ಷಕರು ಸಮೇತ ಗುರು ಹಿರಿಯರಿಗೆ ಗೌರವಿಸಬೇಕೆಂದರು.
     ಸಮಾರಂಭದಲ್ಲಿ ಪಿಯುಸಿ, ಎಸ್.ಎಸ್,ಎಲ್.ಸಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿನಿ ಕುಮಾರಿ, ಗೌರಿ ಬಡಿಗೇರ, ಲಕ್ಷ್ಮಿ ನಾಟೀಕಾರ, ಅವರಿಗೆ ಶಿಕ್ಷಣ ಸಂಸ್ಥೆಯ ಪರವಾಗಿ ವೇ.ಮೂ.ದಯಾನಂದ ಹಿರೇಮಠ, ಶಿಕ್ಷಣ ಸಂಸ್ಥೆಯ ಅದ್ಯಕ್ಷ ರತನಸಿಂಗ್ ಅಂಗಡಿ, ರಾಜಕೀಯ ಹಿರಿಯ ಮುಖಂಡ ಶಂಕರಗೌಡ ಪಾಟೀಲ (ಡೊಮನಾಳ) ಜಂಟಿಯಾಗಿ ಶಾಲು ಹೊದಿಸಿ ಸನ್ಮಾನಿಸಿದರು.
     ಕಾರ್ಯಕ್ರಮದ ನಂತರ ಅಭಿನಂದನಾ ಪ್ಲಾವರ್ ಚಂದ್ರು ರಾಠೋಡ ವೇದಿಕೆಯಲ್ಲಿ ನಿರಂತರವಾಗಿ 2 ಗಂಟೆಗಳ ಕಾಲ ನಡೆದ ವಿದ್ಯಾರ್ಥಿ - ವಿದ್ಯಾರ್ಥಿನಿಯರ ನೃತ್ಯಗಳು, ಲಂಬಾಣಿ ಸಮುದಾಯದ ನೃತ್ಯಗಳು, ನೆರೆದ ಸಾರ್ವಜನಿಕರ ಮನ ರಂಜಿಸಿದವು.



ವೇದಿಕೆಯಲ್ಲಿ ಡಾ, ಸಿದ್ದು ಪಲರಗೊಂಡ, ಡಾ, ರಾಜಶೇಖರ ಮಾಳಿ, ಘಂಟೆಪ್ಪಾ ಕುಂಬಾರ, ಚಿತ್ರಕಲಾ ಶಿಕ್ಷಕ ಕಾಶೀನಾಥ ತೆಲಸಂಗ, ಯುವ ರಾಜಕೀಯ ಮುಖಂಡ ರವಿಕುಮಾರ ವಗ್ಗೆ, ಪ್ರಗತಿಪರ ರೈತ ಬಸವರಾಜ ಅರ್ಜುಣಗಿ, ಬಸವರಾಜ ಸೋಲಾಪೂರ, ಉದ್ದಿಮೇದಾರ ರಮೇಶ ಗೊಳಸಾರ, ಗಾ.ಪಂ.ಸದಸ್ವಯರಾದ ಗಿರಿಮಲ್ಲಗೌಡ ಬಿರಾದಾರ, ಮಂಜುನಾಥ ಜಮಾದಾರ, ಭೂ ದಾನಿ ಪ್ರಭಾಕರಗೌಡ ಬಿರಾಧಾರ, ಗೋ ದಾನಿ ಶಂಕರಗೌಡ ಬಿರಾದಾರ, ಸಂಘದ ಕಾರ್ಯದರ್ಶಿ ರಘುವೀರ. ರ. ಅಂಗಡಿ, ನಿರ್ದೇಶಕ ಮಲ್ಲೇಶ ಪವಾರ, ಪ್ರೌಡ ಶಾಲೆಯ ಶಾಲಾ ಸಂಸತ್ತಿನ ಉಪಾದ್ಯಕ್ಷ ಬಿ.ಎನ್.ಜಂಬಗಿ, ಪ್ರೌಆಡ ಶಾಲೆಯ ಜಿ.ಎಸ್ ಅಣ್ಣುಗೌಡ. ಕಾ. ಬಿರಾದಾರ, ಕುಮಾರಿ ಐರ್ಶರ್ಯ ಮಾ.ಬಿರಾದಾರ, ಪ.ಪೂ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಜಿ.ಎಸ್ ಕುಮಾರಿ ಪ್ರಭಾವತಿ ಬಿರಾದಾರ, ವಿದ್ಯಾರ್ಥಿಗಳ ಜಿ.ಎಸ್ ಪ್ರವೀಣ.ಸಿ.ಬಿರಾದಾರ, ಉಪಸ್ಥಿತರಿದ್ದರು.
  ಮೊದಲಿಗೆ ಮುಖ್ಯೋಪಾದ್ಯಾಯ ಎಸ್.ಸಿ.ಹಿರೇಪಟ್ಟ ಸ್ವಾಗತಿಸಿದರು. ಸೋಮಶೇಖರ ಪಾತಾಳಿ ಶಾರುಖ ಶೇಖ ನಿರೂಪಿಸಿದರು.

ಪ್ರಾ. ರವಿ ದೋಡಮನಿ ವಂದಿಸಿದರು.

À್ರಗ್ರಾಮೀಣ ಪ್ರದೇಶದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕಿಗೆ ಹೆಚ್ಚಿನ ಆಸಕ್ತಿ ವಹಿಸಿದ ಬ.ವಿ.ವ. ಸಂಘದ ಅದ್ಯಕ್ಷ ರತನಸಿಂಗ್ ಅಂಗಡಿ ಅವರಿಗೆ ಶಿಕ್ಷಣ ಪ್ರೇಮಿಗಳು, ಗ್ರಾಮಸ್ಥರು ಪ್ರೋತ್ಸಾಹಿಸಲು ಮುಂದಾಗಬೇಕು.

                                   ಜಿಲ್ಲಾ ಸ್ವದೇಶಿ ಜಾಗರಣಾ ಸಮಿತಿ ಸಂಚಾಲಕ ಶಂಕರಗೌಡ ಪಾಟೀಲ (ಡೊಮನಾಳ)