ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು:ನಂದಾ ಚವ್ಹಾಣ

ಇಂಡಿ:ಮಾ.1:ವಿದ್ಯಾರ್ಥಿಗಳು ವಿಜ್ಞಾನಿಗಳ ಜೀವನ ಅವಲೋಕನ ಮಾಡುವುದರೊಂದಿಗೆ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸದಾ ಸ್ಮರಿಸಬೇಕು ಎಂದು ಮಿರಗಿ ಗ್ರಾಮದ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕಿ ನಂದಾ ಎಸ್.ಚವ್ಹಾಣ ಹೇಳಿದರು.
ಅವರು ಬುಧವಾರ ತಾಲೂಕಿನ ಮಿರಗಿ ಗ್ರಾಮದ ಶ್ರೀ ಯಲ್ಲಾಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ರಂಗೋಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.
ವಿಜ್ಞಾನವು ಜನಸಾಮಾನ್ಯರ ಅಜ್ಞಾನ ದೂರವಾಗಿಸುತ್ತದೆ.ವಿಜ್ಞಾನಿಗಳು ಸತತ ಪರಿಶ್ರಮ ತಾಳ್ಮೆಗಳಿಂದ ಸಂಶೋಧನಗಳನ್ನು ಕೈಗೊಂಡು ಸಮಾಜಕ್ಕೆ ಉಪಯುಕ್ತ ಸೇವೆಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ವಿಜ್ಞಾನಿಗಳ ಜೀವನಶೈಲಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ವಿಕಸಿತ ಭಾರತಕ್ಕೆ ದೇಶಿಯ ತಂತ್ರಜ್ಞಾನ ಬಳಕೆ ಪ್ರಸ್ತುತ ವರ್ಷದ ಘೋಷವಾಕ್ಯವಾಗಿದೆ ಎಂದು ಹೇಳಿದರು.
ಸರ್ ಸಿವಿ ರಾಮನ್ ಅವರ ಸಾಧನೆಗಳನ್ನು ಮಾತ್ರವಲ್ಲದೆ ಇತರ ವಿಜ್ಞಾನಿಗಳನ್ನೂ ಗೌರವಿಸುವ ದೃಷ್ಟಿಯಿಂದ,ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಗಳನ್ನು ಮೆಲಕು ಹಾಕಲು ವಿಜ್ಞಾನ ದಿನವನ್ನು ಶಾಲೆ,ಕಾಲೇಜುಗಳು,ವಿಶ್ವವಿದ್ಯಾಲಯಗಳ ಇತರೆ ಸಂಸ್ಥೆಗಳು ಫೆ.28 ರಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದಪ್ಪ ಖೇಡ ಅವರು,ಯುವ ಜನರಲ್ಲಿ ಸಂಶೋಧನೆ ಮತ್ತು ಅವಿಷ್ಕಾರಗಳನ್ನು ಉತ್ತೇಜಿಸಲು ವಿಜ್ಞಾನ ದಿನಾಚರಣೆ ಮಹತ್ವವನ್ನು ಪಡೆದುಕೊಂಡಿದೆ. ನಮ್ಮ ರಾಷ್ಟ್ರದ ಬೆಳವಣಿಗೆ ಮತ್ತು ಸಮೃದ್ದಿಗೆ ಅಡಿಪಾಯವಾಗಿರುವ ನಮ್ಮ ವಿಜ್ಞಾನಿಗಳ ಅದ್ಭುತ ಸಾಧನೆಗಳನ್ನು ಆಚರಿಸಲು ಇದು ಒಂದು ಸಂದರ್ಭವಾಗಿದೆ.ವಿದ್ಯಾರ್ಥಿಗಳು ಇಂದಿನ ಪ್ರಸ್ತುತ ದಿನಮಾನಗಳಿಗೆ ಸಂಬಂಧಿಸಿದಂತೆ ವಿಜ್ಞಾನ,ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿ ಯಶಸ್ವಿಸಾಧಿಸಬೇಕು ಎಂದು ಹೇಳಿದರು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಜೆ.ಎಸ್.ದೇವರಮನಿ,ಅಶ್ವಿನಿ,ನಾದ ಹಾಗೂ ವಾಲಿಕಾರ ಸೇರಿದಂತೆ ಪ್ರೌಢ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.