ವಿದ್ಯಾರ್ಥಿಗಳು ನಮ್ಮ ದೇಶದ ಶಕ್ತಿ 

ಚಳ್ಳಕೆರೆ.ನ.13: ವಿದ್ಯಾರ್ಥಿಗಳು ನಮ್ಮ ದೇಶದ ಶಕ್ತಿ ಹಾಗೂ ಆಸ್ತಿ, ತಾಲೂಕಿನ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ತಾಲ್ಲೂಕಿನಲ್ಲಿ ಶೈಕ್ಷಣಿಕ ಕೋರ್ಸ್‌ಗಳನ್ನು ತರಲಾಗಿದೆ. ಈ ಅವಕಾಶಗಳನ್ನು ಇಂದಿನ ಯುವ ಜನಾಂಗ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಚಳ್ಳಕರೆ ಶಾಸಕ ಟಿ.ರಘುಮೂರ್ತಿ ಕರೆ ನೀಡಿದರು.ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಯಲು ಸೀಮೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗಳು ಸ್ಥಾಪನೆಯಾಗುವ ಮೂಲಕ ಚಳ್ಳಕೆರೆ ತಾಲೂಕು ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿz. ಇದು ನಾವು ಹೆಮ್ಮೆ ಪಡುವ ವಿಚಾರವಾಗಿದೆ. ಈ ಜಿಟಿಟಿಸಿ ಕೇಂದ್ರದಲ್ಲಿ ಯಶಸ್ಸಿನ ವಿದ್ಯಾಭ್ಯಾಸ ಮುಗಿಸಿ ಹೊರಬರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಮ್ಮ ತಾಲೂಕು ಜಿಲ್ಲೆಗೆ ಕೀರ್ತಿ ತರುವತ್ತ ಸಾಧನೆ ಮಾಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಡಾ.ಸುರೇಂದ್ರನಾಥ್ ಡಿ.ಆರ್ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದಂತಹ ನಾನು ನಿಮ್ಮಂತಯೇ ಒಂದು ಊರಿಂದ ಮತ್ತೊಂದು ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡಿ ಪದವಿ ಪಡೆದವನು. ಅಭ್ಯಾಸ ಮಾಡುವಾಗ ಶ್ರದ್ಧೆ ಬಹಳ ಮುಖ್ಯ. ಇಂದಿನ ನಮ್ಮ ಶ್ರಮ ಮುಂದೆ ಖಂಡೀತಾ ಫಲನೀಡುತ್ತದೆ ಎಂದರು.ನನಗೆ ಪ್ರಸಕ್ತ ವರ್ಷ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕಲೆ ಮತ್ತು ಕಲಾ ಸಾಹಿತ್ಯ, ಸಂಶೋಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವುದು ಮುಂದಿನ ಹೆಜ್ಜೆಯಿಡಲು ದೈರ್ಯ ತುಂಬಿದೆ ಎಂದರೆ ತಪ್ಪಾಗಲಾರದು. ಇದರಿಂದ ಬದುಕಿನಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿದೆ. ಇಂತಹ ಕಾರ್ಯ ಜಿಟಿಟಿಸಿ ಕೇಂದ್ರವೂ ಮಾಡುತ್ತಿರುವುದು ಶ್ಲಾಘನಿಯ ಎಂದು ಹೇಳಿದರು.