ವಿದ್ಯಾರ್ಥಿಗಳು ದೇಶಪ್ರೇಮ ಮೈಗೂಡಿಸಿಕೊಳ್ಳಿ: ಡಾ. ಗವಿಸಿದ್ದಪ್ಪ ಪಾಟೀಲ್

ಕಲಬುರಗಿ:ಆ.16: ಹಂಸಿಕಾ ಏಜ್ಯುಕೇಷನಲ್& ವೆಲ್‍ಫೇರ್‍ಟ್ರಸ್ಟ್‍ರವರಅನನ್ಯಪದವಿ ಮತ್ತುಅನನ್ಯಸಮಾಜಕಾರ್ಯಸ್ನಾತಕೋತ್ತರಪದವಿ ಮಹಾವಿದ್ಯಾಲಯಅಡಿಯಲ್ಲಿ 77ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಅತಿಥಿಗಳಾಗಿ ಆಗಮಿಸಿದಂತಹ ಕನ್ನಡ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ. ಗವಿಸಿದ್ದಪ್ಪ ಪಾಟೀಲ್‍ಕೊಪ್ಪಳ ಇವರು ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮ, ದೇಶಾಭಿಮಾನ ಮಾತುಗಳ ಜೊತೆಗೆ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಕ ಮಾತುಗಳ ಮೂಲಕ ಹುರಿದುಂಬಿಸಿದರು.ಅದೇರೀತಿಯಾಗಿಇನ್ನೋರ್ವ ಅತಿಥಿಗಳಾದಂತಹ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು, ಪ್ರಾದೇಶಿಕ ನಿರ್ದೇಶಕರಾದಡಾ. ಸಂಗಮೇಶ ಹಿರೇಮಠಇವರು ವೀರಯೋಧರನ್ನು, ಹುತಾತ್ಮರನ್ನು ಸ್ಮರಿಸುತ್ತಾ, ರಾಷ್ಟ್ರಪ್ರೇಮ, ಭಾರತಾಂಬೆಯ ಪ್ರತಿಷ್ಠೆ,ಗೌರವಕುರಿತು ವಿದ್ಯಾರ್ಥಿಗಳಿಗೆ ತಮ್ಮ ವಿಚಾರವನ್ನು ಮಂಡಿಸುತ್ತ ಸಧೃಢ ಭಾರತದ ನಿರ್ಮಾಣಕ್ಕೆಕರೆ ನೀಡಿದರು.ಕಾಲೇಜಿನಅಧ್ಯಕ್ಷರಾದಂತಹ ಶ್ರೀಮತಿ ಸುಷ್ಮಾವತಿ.ಎಸ್. ಹೊನ್ನಗೆಜ್ಜಿಅವರು ಸ್ವತಂತ್ರ ಮಹಿಳಾ ಹೋರಾಟಗಾರ್ತಿಯಾದರಾಣಿ ಲಕ್ಷ್ಮೀಬಾಯಿ, ಕಿತ್ತೂರುರಾಣಿಚೆನ್ನಮ್ಮ ಅನೇಕ ವೀರ ವನಿತೆಯರ ಸಾಹಸಗಾಥೆಯನ್ನು ವಿದ್ಯಾರ್ಥಿಗಳಿಗೆ ತಮ್ಮ ಮಾತಿನ ಮೂಲಕ ಅರಿವು ಮೂಡಿಸಿದರು.ಪ್ರಾಂಶುಪಾಲರಾದಡಾ.ಶರಣು ಹೊನ್ನಗೆಜ್ಜಿಯವರುದೇಶಪ್ರೇಮ, ರಾಷ್ಟ್ರಪ್ರೇಮದಜೊತೆ ಬುದ್ಧ, ಬಸವ, ಅಂಬೇಡ್ಕರವರತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಹಾಗೂ ಪ್ರೀತಿ, ಸಹಬಾಳ್ವೆ ಸಹಕಾರದಿಂದ ಸಮಾಜದಲ್ಲಿ ಬದುಕಬೇಕೆಂದು ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನುಉಪನ್ಯಾಸಕಕಿರಣನಡೆಸಿಕೊಟ್ಟರು.ಡಾ. ಸರಿತಾ.ಎಸ್.ಕರಿಗುಡ್ಡಅತಿಥಿಗಳನ್ನು ಸ್ವಾಗತಿಸಿದರು.ಸಾಂಸ್ಕøತಿಕಕಾರ್ಯಕ್ರಮದಚಟುವಟಿಕೆಯನ್ನು ಪ್ರಭಾಕರ್ ಕೊಂಬಿನ್ ನಿರ್ವಹಿಸಿದರು.ಉಪನ್ಯಾಸಕಿಶ್ರೀಮತಿ ರಾಜೇಶ್ವರಿಕಿರಣಗಿ ವಂದಿಸಿದರು.ಈ ಸಂದರ್ಭದಲ್ಲಿಉಪನ್ಯಾಸಕಿಯರಾದಆಶಾರಾಣಿಕುಲಕೋರಿ, ಅಶ್ವಿನಿ, ಐಶ್ವರ್ಯ, ಶಿಲ್ಪಾ ಸೇರಿ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.