ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು

ದಾವಣಗೆರೆ.ನ.೨೧; ಸಾಧನೆಯ ಸಿದ್ಧಿಯಲ್ಲಿ ಕಾರ್ಯಕ್ಷೇತ್ರ ಮುಖ್ಯವಲ್ಲ ಯಾವುದೇ ಕ್ಷೇತ್ರದಲ್ಲಿ ಮನಃಪೂರ್ವಕವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.ಸಮೀಪದ ತೋಳಹುಣಸೆಯಲ್ಲಿರುವ ಎಸ್.ಪಿ.ಎಸ್.ಎಸ್ ಪಿ.ಯು ಕಾಲೇಜ್ ಹಾಗೂ ಎನ್.ಸಿ.ಸಿ. 33 ಕರ್ನಾಟಕ ಬ್ಯಾಟಾಲಿಯನ್ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಾರ್ಷಿಕ ತರಬೇತಿಯ ಸಮರೋಪ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಸ್ವಶಿಸ್ತು, ಸ್ವಾಭಿಮಾನ, ಕಾರ್ಯತತ್ಪರತೆಯಿಂದ ನಿರ್ವಹಿಸಿ ದೇಶ ಸೇವೆಗೆ ಅರ್ಪಿಸಿ ಜೀವನದ ಸಾರ್ಥಕತೆಯನ್ನು ಮೆರೆಯಬೇಕು ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಂಬೈಯಲ್ಲಿ ನಡೆದ ಬಾಂಬ್ ದಾಳಿಯ ಕಾರ್ಯ ಚರಣೆ ಹಾಗೂ ಮಯನ್ಮಾರ್‌ನಲ್ಲಿ ಭಾರತ ಸೈನ್ಯ ನಡೆಸಿದ ಸರ್ಜಿಜಿಕಲ್ ಸ್ಟ್ರೈಕ್ ದಾಳಿಯ ನೇತೃತ್ವ ವಹಿಸಿದ್ದ ಬ್ರಿಗೇಡಿಯರ್ ಸುನಿಲ್ ಶರೋನ್ ಮಾತನಾಡಿ ಎನ್.ಸಿ.ಸಿ.ಯು ಶಿಸ್ತು, ಸ್ವಾಭಿಮಾನ, ಏಕತೆ ಮೌಲ್ಯಗಳ ಸಂಕೇತವಾಗುವುದರ ಜೊತೆಗೆ ದೇಶದ ಸತ್ಪçಜೆಯಾಗಿ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಯೋಜನೆಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ರೂಪಿಸಿಕೊಳ್ಳಬೇಕು ಎಂದು ಸ್ಪೂರ್ತಿಯುತ ಮಾತಗಳನ್ನಾಡಿದರು. ನಂತರ ದೇಶದ ರಕ್ಷಣೆಗೆ ಸಂಬಂಧಿಸಿದಂತೆ ಎನ್.ಸಿ.ಸಿ ಕೆಡೆಟ್‌ಗಳು ಕೇಳಿದ ಪ್ರಶ್ನೆಗಳಿಗೆ ಸ್ಪೂರ್ತಿಯುತ ಉತ್ತರಗಳನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ದೆಹಲಿಯಲ್ಲಿ ನಡೆದ 2020 ರಲ್ಲಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಬ್ಯಾಟಾಲಿಯನ್ ನೇತೃತ್ವ ವಹಿಸದ್ದ ಕುಮಾರಿ ಶ್ರೀಶ್ಮಾ ಹೆಗಡೆ ಹಾಗೂ ಸಿಯಾಮ್ ಅವರು ನಿರ್ವಹಿಸಿದರು. ಕಾರ್ಯಕ್ರಮದ  ಶಾಲೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜೆ.ಎಸ್.ವನಿತಾ ವಂದನಾರ್ಪಣೆ  ನಿರ್ವಹಿಸಿದರು. ದಾವಣಗೆರೆ ವಲಯದ ಬ್ಯಾಟಲಿಯನ್ ಕಮಾಂಡರ್ ಆಫೀಸರ್ ಕರ್ನಲ್ ನಿಕ್ಸನ್ ಹರ್ನಾಲ್ ಮತ್ತು  ಎಸ್.ಪಿ. .ಬಿ. ರಿ಼ಷ್ಯಂತ್,  ಕಾಲೇಜಿನ ಮುಖ್ಯಸ್ಥರಾದ  ಮಂಜುನಾಥ್ ರಂಗರಾಜು ಇದ್ದರು.