ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು

ಅರಕೇರಾ,ಮಾ.೧೧- ಯಾವುದೇ ಮಗುವಿನ ಭವಿಷ್ಯವನ್ನು ಸರಿಯಾದ ಶಿಕ್ಷಣದಿಂದ ನಿರ್ಧರಿಸಲಾಗುತ್ತಿದೆ ಮತ್ತು ಸರಿಯಾದದ ಶಿಕ್ಷಣವು ಶಾಲೆಯಿಂದಲ್ಲೇ ಪ್ರಾರಂಭವಾಗುತ್ತಿದೆ.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಬದುಕು ಸುಂದರವಾಗುತ್ತದೆ. ಮೌಲ್ಯಗಳನ್ನು ಕಲಿಯಲು ಮಹಾತ್ಮರ ಜೀವನ ಚಿರಿತ್ರೆಗಳನ್ನು ಓದುವದನ್ನು ರೂಡಿಸಿಕೊಳ್ಳಬೇಕೆಂದು. ಹಿರಿಯ ಮುಖಂಡರಾದ ಕೆ.ಅನಂತರಾಜನಾಯಕರವರು ಕರೆ ನೀಡಿದರು.
ಅವರು ಅರಕೇರಾ ಪಟ್ಟಣದಲ್ಲಿನ ಸರಕಾರಿ ಆದರ್ಶವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦೨೨-೨೩ನೇ ಸಾಲಿನ ಶೈಕ್ಷಣಿಕ ಸಾಲಿನ ೧೦ ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜೀವನದ ಪ್ರಮುಖ ಘಟ್ಟ ೧೦ನೇ ತರಗತಿಯಾಗಿದ್ದು, ಶಿಕ್ಷಕರು ನೀಡುವ ಮಾರ್ಗದರ್ಶನವನ್ನು ತಪ್ಪದೇ ಪಾಳಿಸುವ ಮೂಲಕ ತಮ್ಮ ಜೀವನವನ್ನು ಸಾಥಕಪಡಿಸಿಕೊಳ್ಳಬೇಕೆಂದರು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಬೂದೇಪ್ಪ ಯಾದವ ಗ್ರಾಮ ಪಂಚಾಯತ ಅಭಿವೃದ್ದಿ ಅಧಕಾರಿಗಳು ಅರಕೇರಾ ಇವರು ಮಾತನಾಡಿ ವಿದ್ಯಾರ್ಥಿಗಳು ಭವಿಷದಲ್ಲಿ ಉತ್ತಮ ಸಾಧನೆ ಮಾಡಿ ಶಾಲಗೆ ಪೋಷಕರಿಗೆ ಒಳ್ಳೆಯ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನಿಡಿದರು. ಕಾರ್ಯಕ್ರಮದಲ್ಲಿ ಮುದಕಪ್ಪ ನಿವೃತಿ ಮುಖ್ಯೋಪಾಧ್ಯಾಯರು ಮಾತನಾಡಿದರು.ಪ್ರಾಸ್ತಾವಿಕ ಕುಮಾರಸ್ವಾಮಿ ಹಿರೇಮಠ ಮಾತನಾಡಿದರು.
ವೇದಿಕೆ ಮೇಲೆ ಎಸ್‌ಡಿಎಂಸಿ ಅಧ್ಯಕ್ಷರಾದ ಸೂಗೂರೇಶ್ವರ ಎಸ್.ಗುಡಿ, ನಾಗರಾಜನಾಯಕ ಕರ್ನಾಳ, ರವಿನಾಯಕ, ಶಾಲಾಸುದಾರಣಾ ಸಮಿತಿ ಸದಸ್ಯರುಗಳಾದ ಬಸವಲಿಂಯ್ಯಸ್ವಾಮಿ, ಪಾರೋಕ ಶಿಕ್ಷಕವೃಂದವರು, ಅತಿಥಿಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಹಾಡಿಗೆ ನೃತ್ಯಮಾಡಿದರು.