ವಿದ್ಯಾರ್ಥಿಗಳು ಜೀವನ ಕೌಶಲ್ಯ ಅಳವಡಿಸಿಕೊಳ್ಳಿ :ವೈದ್ಯ ಬೀರೇಗೌಡ

ಕೋಲಾರ,ಜು.೧೮- ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಬದುಕುವ ಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದು ಡಾ. ಬೀರೇಗೌಡ ಅಭಿಪ್ರಾಯಪಟ್ಟರು
ನಗರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಶ್ರೀ ಚೌಡೇಶ್ವರಿ ಅಕಾಡೆಮಿ ಹಾಗೂ ಪ್ರಬುದ್ಧ ನಾಗರೀಕರ ಸ್ನೇಹ ಬಳಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ವಿದ್ಯಾರ್ಥಿಗಳನ್ನು ತುಂಬಾ ಪ್ರೀತಿಯಿಂದ ಕಾಣಬೇಕು. ಅವರ ಅಭಿರುಚಿಗಳಿಗೆ ಆದ್ಯತೆ ನೀಡಬೇಕು. ಮುಕ್ತವಾಗಿ ಅಧ್ಯಯನ ಮಾಡಲು ಪ್ರೋತ್ಸಾಹ ನೀಡಬೇಕಾದುದ್ದು ಇಡೀ ನಾಗರೀಕರ ಜವಾಬ್ದಾರಿ. ವಿಧ್ಯಾರ್ಥಿಗಳು ದೀಪದಂತೆ ಉರಿದು ಬೆಳಗಬೇಕು. ದೇಶಕ್ಕೆ ಮಾದರಿಯಾಗಬೇಕು. ಇಡೀ ಸಮಾಜ ಗುರುತಿಸುವಂತಹ ಕಾರ್ಯ ಶಾಶ್ವತವಾಗಿ ಮಾಡಬೇಕು. ಗುರು ಜವಾಬ್ದಾರಿ ಹೀಗೆಯೇ ಬಹಳಷ ಪ್ರತಿಭೆಗಳನ್ನು ಸೃಷ್ಟಿಸಬೇಕೇಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮುರುಳೀಧರ ಮಾತನಾಡಿ ಮಕ್ಕಳು ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಜ್ಞಾನ ಸಹಜವಾಗಿ ಮೈಗೂಡಿಸಿಕೊಳ್ಳುತ್ತದೆ. ಮಕ್ಕಳಿಗೆ ಭವಿಷ್ಯದ ಬಗ್ಗೆ ಸೂಕ್ತವಾದ ಮಾರ್ಗದರ್ಶನ ಅತ್ಯವಶ್ಯಕವಾಗಿ ಇಂದು ಬೇಕಾಗಿದೆ ಎಂದರು
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ನಾಗಾನಂದ ಕೆಂಪರಾಜು ಮಾತಾನಾಡಿ ವಿದ್ಯೆ ಯಾರ ಸ್ವತ್ತಲ್ಲ ಅದು ಎಲ್ಲರಿಗೂ ದಕ್ಕುವಂತದ್ದು ಆಗಾಗಿ ವಿದ್ಯಾರ್ಥಿಗಳಲ್ಲಿ ಇರುವಂತಹ ಒಳಗಿನ ಸೂಕ್ತ ಪ್ರತಿಬೆಯನ್ನು ಹೊರ ಹಾಕಲು ನಮ್ಮೆಲ್ಲರ ಪ್ರೇರಣೆ ಅತ್ಯಗತ್ಯ. ಇಂತಹ ಅಭಿನಂದನಾ ಸಮಾರಂಭಗಳನ್ನು ಏರ್ಪಡಿಸಿ ಅವರನ್ನು ಗುರುತಿಸಲ್ಪಡುವ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಿ ನಾರಾಯಾಣಪ್ಪ ಮಾತಾನಾಡಿ ಮನುಷ್ಯ ಭೂಮಿಯ ಮೇಲೆ ಸಾಧನೆ ಮಾಡಿ ಹೋಗಬೇಕು. ಆ ನಿಟ್ಟಿನಲ್ಲಿ ನಾವುಗಳು ಪರಿಶ್ರಮ ಪಡಬೇಕು. ಬದುಕನ್ನು ಅರ್ಥಪೂಣವಾಗಿ ಸಾಗಿಸಿದಾಗ ಜೀವನದಲ್ಲಿ ಸಾಧನೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಹಾಗಾಗಿ ಪ್ರತಿಯೊಬ್ಬ ತಂದೆ ತಾಯಿಗಳು ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸಕ್ಕೆ ಮುನ್ನುಡಿ ಬರೆಯಬೇಕೆಂದರು.
ವೇದಿಕೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಎಂಎಸ್ಸಿ ರಾಸಾಯನಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿ ವಿ.ರಘು ಹಾಗೂ ಗಣಿತಶಾಸ್ತ್ರದಲ್ಲಿ ವಿಭಾಗದಲ್ಲಿ ೫ನೇ ರ್‍ಯಾಂಕ್ ಪಡೆದ ಕೆ.ಲೇಖನ ಕೈಲಾಸ್ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೦೮ ಅಂಕ ಪಡೆದ ಬಿ.ದಿವ್ಯತ್ರೀ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.