ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಬೇಕು: ಸಜ್ಜನರ್

ಹೈದರಾಬಾದ್ :ಜ.28: ಸಾಧನೆಗೆ ಆಸಾಧ್ಯವಾದದ್ದು ಯಾವುದಿಲ್ಲ, ಸಾಧಿಸಬೇಕು ಎಂಬ ಛಲ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಇಡಬೇಕು ಅಂದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಬೇಕು. ಪ್ರತಿಕ್ಷಣ ಆ ಗುರಿಯನ್ನು ನೆನಪಿಸಿಕೊಂಡು ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿ ಮೊದಲು ವಿದ್ಯಾರ್ಜನೆ ಕಡೆಗೆ ಗಮನ ಹರಿಸಿ. ಹಾಗೂ ಕನ್ನಡ ಮಾಧ್ಯಮ ಎಂಬ ಕಿಳರಿಮೇ ಇರಬಾರದು. ನಾನು ಯುಪಿಎಸ್ ಸಿ ಪರೀಕ್ಷೆ ಕನ್ನಡ ಮಾಧ್ಯಮದಲ್ಲಿಯೇ ಬರೆದು ಇಂದು ಐಪಿಎಸ್ ಅಧಿಕಾರಿಯಾಗಿರುವೇ, ನೀವು ಸಹ ಕನ್ನಡದಲ್ಲಿ ಪರೀಕ್ಷೆ ಬರೆಯಬಹುದು ಎಂದು ತೆಲಂಗಾಣ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಸಿ.ಸಜ್ಜನರ್ ಐಪಿಎಸ್ ನುಡಿದರು,
ಅವರು ಇಂದು ನಗರದ ತೆಲುಗು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಹಾಗೂ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘವು ಆಯೋಜಿಸಿದ ತೆಲಂಗಾಣ ಮತ್ತು ಗೋವಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತ ಪ್ರದಾನ ಸಮಾರಂಭವು ಉದ್ಘಾಟಿಸಿ ಮಾತನಾಡಿದರು.
ಸಜ್ಜನರ ಅವರು ಮುಂದುವರೆದು ದೇಶದಲ್ಲಿ ಇತಿಹಾಸ ಬರೆದು ಹೋಗಿರುವ ಎಲ್ಲಾ ಮಹನೀಯರು ಕೆಳಮಟ್ಟದಿಂದಲೆ ಕಷ್ಟ ಪಟ್ಟು ಓದಿ ಕೊಂಡು ಒಳ್ಳೆಯ ಜೀವನ ಮಾಡಿ ಸಾಧನೆಯ ಶೀಖರವನ್ನು ಏರಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಬಾರದು, ಇಲ್ಲಿ ಇರುವ ವಿದ್ಯಾರ್ಥಿಗಳಲ್ಲಿ ಯಾರು ಉನ್ನತ ಸಾಧನೆ ಮಾಡುತ್ತಿರೆಂಬುದು ತಿಳಿಯದು, ನಿಮ್ಮಲ್ಲಿಯೇ ಒಬ್ಬ ಅಬ್ದುಲ ಕಲಾಂ, ವಿಶ್ವೇಶ್ವರಯ್ಯ, ಮಹಾತ್ಮ ಗಾಂಧಿ, ಬಾಬಾ ಸಾಹೇಬ ಅಂಬೇಡ್ಕರ, ಸುಭಾಷ ಚಂದ್ರ ಭೋಸ, ಸ್ವಾಮಿ ವಿವೇಕಾನಂದ ಹೀಗೆ ಅನೇಕ ಸಾಧನೆ ಮಾಡಿದ ಮಹಾತ್ಮರಂತೆ ಯಾರಾದರೂ ಸಾಧನೆ ಮಾಡಬಹುದು. ಅದಕ್ಕೆ ನೀವು ಇಂದಿನಿಂದಲೇ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ತಂದೆ-ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ ತಮ್ಮ ಜೀವನ ರೂಪಿಸಿಕೊಳ್ಳಬೇಕು, ತಂದೆ-ತಾಯಿಯ ಸೇವೆ ಈಶ್ವರನ ಸೇವೆ, ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು, ಅವರಿಂದಲೇ ನಿಮ್ಮಗೆ ಈ ಪ್ರಪಂಚ ನೋಡುವ ಭಾಗ್ಯ ಸಿಕ್ಕಿದೆ ಹೀಗಾಗಿ ಪ್ರತಿಯೊಬ್ಬ ಮಕ್ಕಳು ತಂದೆ-ತಾಯಿಯಲ್ಲಿ ದೇವರನ್ನು ಕಾನಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ತೆಲಂಗಾಣ ಹಾಗೂ ಗೋವಾ ರಾಜ್ಯಗಳಲ್ಲಿ ಕನ್ನಡದ ದೀಪವನ್ನು ಬೆಳಗಿಸಿದ ಕನ್ನಡದ ಪ್ರತಿಭೆಗಳಿಗೆ ಗೌರವ ಸನ್ಮಾನ ಮಾಡುತ್ತಿರುವುದು ಅಭಿನಂದನೀಯ ಕಾರ್ಯ, ಕನ್ನಡದ ವಾತಾವರಣವೇ ಕಾಣದ ಹೊರ ರಾಜ್ಯದ ನೆಲಗಳಲ್ಲಿ ಕನ್ನಡ ಮಾಧ್ಯಮವನ್ನೇ ಶಿಕ್ಷಣವನ್ನಾಗಿಸಿಕೊಂಡು ಕನ್ನಡದ ಕೀರ್ತಿ ಪತ್ತಾಕೆಯನ್ನು ಹಾರಿಸುತ್ತಿರುವ ಎಲ್ಲಾ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಾಹಸ ಮೆಚ್ಚತ್ತಕ್ಕಂತಹದು, ಅವರಿಗೆ ಕನ್ನಡ ಮಾಧ್ಯಮವನ್ನು ಕಲಿಯಲು ಹುರಿದುಂಬಿಸುತ್ತಿರುವ ಎಲ್ಲಾ ತಂದೆ-ತಾಯಿಗಳಿಗೆ ಅಭಿನಂದನೆಗಳು,
ತೆಲಂಗಾಣ-ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡ ಭಾಷೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಗುರುತಿಸಿ ತೆಲಂಗಾಣ ಮ್ತತು ಗೋವಾ ರಾಜ್ಯದಲ್ಲಿ ಓದುತ್ತಿರುವ ಒಟ್ಟು 19 ವಿದ್ಯಾರ್ಥಿಗಳಿಗೆ ಪ್ರಶಸ್ತಿ-ವಿದ್ಯಾರ್ಥಿ ವೇತನ ನೀಡುತ್ತಿರುವ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯ ಶ್ಲಾಘನೀಯವಾಗಿದೆ. ನನ್ನ ಪರವಾಗಿ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುವೇ, ಈ ವರ್ಷದಲ್ಲಿ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ರೂ. 12000/ ದ್ವೀತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ ರೂ 11000/ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ 10000/ ಜೋತೆಗೆ ಪ್ರಮಾಣ ಪತ್ರ ನೀಡಿ ಗೌರವಿಸುತ್ತಿರವುದು ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುವೇ ಎಂದು ವಿ.ಸಿ. ಸಜ್ಜನರ ನುಡಿದರು.
ಸಮಾರಂಭದಲ್ಲಿ ವಿಶೇಷ ಉಪನ್ಯಾಕರಾಗಿ ಸಿ. ನಂಜುಂಡಯ್ಯ ಮಾತನಾಡಿದರು. ಮುಖ್ಯಅತಿಥಿಯಾಗಿ ಮುಕುಂದ ಕುಲಕರ್ಣಿ, ಮಹಾರಾಷ್ಟ್ರದ ಶ್ರೀನಿವಾಸ ತೇಲಂಗ, ಬಸವರಾಜ ಹಂಜನಾಳೆ, ಡಾ ಲಿಂಗಪ್ಪ ಗೋನಾಳ ಉಪಸ್ಥಿತರಿದರು, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ ಸಂತೋಷ ಹಾನಗಲ ಸ್ವಾಗತಿಸಿದರು, ಧರ್ಮೇಂದ್ರ ಪೂಜಾರಿ ಬಗ್ದೂರಿ ವಂದನಾರ್ಪಣೆ ಮಾಡಿದರೆ, ಪರಿಮಳಾ ದೇಶಪಾಂಡೆ ನಿರೂಪಿಸಿದರು.