ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಪಾಲಿಸಬೇಕು

ಕಲಬುರಗಿ:ಮಾ.27:ಕೃಷಿ ಮಹಾವಿದ್ಯಾಲಯ, ಕಲಬುರಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ,ಎಸ್ಸಿ(ಹಾನ್ಸ್) ಕೃಷಿ ವಿದ್ಯಾರ್ಥಿಗಳ ಹೊಂಗಿರಣ ಸ್ವಾಗತ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಮತ್ತು ಕನ್ನಡ ಸಂಘಗಳ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ. ಆರ್. ವೆಂಕಟ ರೆಡ್ಡಿ, ಸಹ ಪ್ರಾಧ್ಯಾಪಕರು (ಮನೋವಿಜ್ಞಾನ), ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ, ಕಲಬುರಗಿ ಇವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಮಯ ಪಾಲನೆ ಮಾಡಬೇಕು. ಕಠಿಣ ಶ್ರಮವಹಿಸಿ ದುಡಿದಾಗ ಮಾತ್ರ ಕೆಲಸದ ಪ್ರತಿಫಲ ಸಿಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಡೀನ್(ಕೃಷಿ) ರವರಾದ ಡಾ. ಸುರೇಶ ಎಸ್ ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮಾನಸಿಕವಾದ ಸಧೃಡತೆ ಇದ್ದರೆ ನಾವು ಜಗತ್ತನ್ನೇ ಗೆಲ್ಲಬಹುದು. ವಿದ್ಯಾರ್ಥಿಗಳು ಗುರು ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಶ್ರೀ ಸೋಮಶೇಖರ ರೂಳಿ, ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ, ಆಕಾಶ ವಾಣಿ ಕೇಂದ್ರ, ಕಲಬುರಗಿ, ಮುಖ್ಯ ಶಿಕ್ಷಕ ಸಲಹೆಗಾರ ಡಾ. ಬಿ. ಎಮ್. ದೊಡಮನಿ, ಶಿಕ್ಷಕರಾದ ಡಾ. ಆನಂದ ನಾಯಕ, ಡಾ. ಲೋಕೇಶ ಕೆ., ಡಾ. ಸ್ಟಿಫನ್‍ರಾಜ್, ಡಾ. ಜೈನುದ್ದಿನ್ ಮುಲ್ಲಾ, ಡಾ. ರಾಜಶೇಖರ ಟಿ. ಬಸನಾಯಕ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.