ವಿದ್ಯಾರ್ಥಿಗಳು ಛಲದಿಂದ  ಗುರಿಯತ್ತ ಸಾಗಬೇಕು

ದಾವಣಗೆರೆ.ಆ.೧: ಪ್ರತಿಯೊಬ್ಬರಿಗೂ  ಬೆಳೆಯುವ ಅವಕಾಶ ಹೆಚ್ಚಿರುತ್ತದೆ ಪ್ರತಿಯೊಬ್ಬರು ಬೆಳೆಯಲೇ ಬೇಕು ಎಂಬ ಆಶಾಭಾವನೆಯಿಂದ ತಮ್ಮ ಸಾಧನೆಯೆಡೆಗೆ ಪ್ರಯತ್ನಪಡುತ್ತಿರುತ್ತಾರೆ ಆದರೆ ಬೆಳೆಯುವ ರಭಸದಲ್ಲಿ ಇನ್ನೊಬ್ಬರನ್ನೂ ತುಳಿದು ಬೆಳೆಯದೆ ಎಲ್ಲರನ್ನು ತಿಳಿದುಕೊಂಡು ಬೆಳೆಯಬೇಕು ಆಗ ಉತ್ತಮ ನಾಯಕರಾಗಿ ಹೊರಹೊಮ್ಮಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮತ್ತು ವ್ಯಕ್ತಿತ್ವ ವಿಕಸನ ಭಾಷಣಕಾರರಾದ ಪ್ರೊ. ವೆಂಕಟೇಶ್ ಬಾಬು  ಹೇಳಿದರು.  ನಗರದ ಗುರುಭವನದಲ್ಲಿ ಅನಿಲ್ ಕೆರಿಯರ್ ಅಕಾಡೆಮಿ ವತಿಯಿಂದ ರಾಜ್ಯಮಟ್ಟದ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬ ಸ್ಪರ್ಧಿಯೂ ತನ್ನನ್ನು ತಾನು ಪ್ರತಿದಿನ ಹೋಲಿಕೆ ಮಾಡಿಕೊಂಡು ಹಿಂದಿನ ದಿನದ ಪ್ರಗತಿಗಿಂತ ಇಂದಿನ ದಿನದ ಪ್ರಗತಿಯು ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರು ಪ್ರಯತ್ನಪಟ್ಟರೆ ವಿಫಲವಾಗಲು ಸಾಧ್ಯವಿಲ್ಲ ಪ್ರಯತ್ನವೆಂಬುದು ನಿರ್ದಿಷ್ಟ ಕೆಲಸದಲ್ಲಿದ್ದರೆ ಸೋಲು ಅಂತೂ ಖಂಡಿತ ಬರುವುದಿಲ್ಲ ಗೆಲುವು ಬರುತ್ತದೆ ಎಂದು  ಹೇಳಿದರು. ಮಾದರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಮುಖ್ಯ ಪರೀಕ್ಷೆಗೆ ತಯಾರಾಗಿ ದಾವಣಗೆರೆಯಂಥ ನಗರದಿಂದ ಆಡಳಿತಾತ್ಮಕ ಸೇವೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿ ಸಮಾಜಕ್ಕೆ ಉತ್ತಮ ಕಾಣಿಕೆ ನೀಡುವಲ್ಲಿ  ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವಂತಪ್ಪ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿ ಪ್ರತಿಯೊಂದು ದೇಶದಲ್ಲೂ ಊರುಗಳಲ್ಲಿ ಗಂಟೆಗಳ ಸದ್ದಿನ ಬದಲು ಓದಿನ ಸದ್ದು ಗ್ರಂಥಾಲಯಗಳ ಸದ್ದು ಪುಸ್ತಕಗಳ ಸದ್ದು ಕೇಳಿಸಿದರೆ ಉತ್ತಮ ದೇಶ ನಿರ್ಮಾಣವಾಗಲು ಸಾಧ್ಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ತರದ ಡಿಜಿಟಲ್ ಲೈಬ್ರರಿ ಪುಸ್ತಕ ಮಳಿಗೆಗಳನ್ನು  ಸದುಪಯೋಗಪಡಿಸಿಕೊಂಡು ಛಲದಿಂದ ನಿಮ್ಮ ಗುರಿಯೆಡೆಗೆ ಸಾಗಿರಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ  ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸ್ಪರ್ಧಿಗಳು ಭಾಗವಹಿಸಿ ಮುಕ್ತ ಪರೀಕ್ಷೆಯನ್ನು ಬರೆದರು ವಿಜೇತರಾದ ಸ್ಪರ್ಧಿಗಳಿಗೆ ಪ್ರಥಮ ದ್ವಿತೀಯ ತೃತೀಯ ನಗದು ಬಹುಮಾನಗಳನ್ನು ಅಕಾಡಮಿಯಿಂದ ನೀಡಲಾಯ್ತು.  ಎವಿಕೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ ಬೋರಯ್ಯ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.ಅಕಾಡೆಮಿಯ ನಿರ್ದೇಶಕರಾದ ಅನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು ಬಸವರಾಜ ಅತಿಥಿಗಳನ್ನು ಸ್ವಾಗತಿಸಿದರು ಉಪನ್ಯಾಸಕರಾದ ರೇಖಾ  ಕಾರ್ಯಕ್ರಮದ ನಿರೂಪಣೆ  ಮಾಡಿ ಅತಿಥಿಗಳನ್ನು ವಂದಿಸಿದರು.ಅಕಾಡೆಮಿ ವತಿಯಿಂದ ಆರಂಭವಾದ ಡಿಜಿಟಲ್ ಲೈಬ್ರರಿ ಪುಸ್ತಕ ಮಳಿಗೆ ಮತ್ತು ಆನ್ಲೈನ್ ತರಗತಿ ಕೊಠಡಿಗಳನ್ನು ಅತಿಥಿಗಳು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಅಕಾಡೆಮಿಯ ಬಸವರಾಜ್ ಮಹಂತೇಶ್ ಹಾಗೂ ಇತರರು ಭಾಗವಹಿಸಿದ್ದರು

Attachments area