ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ಸಲ್ಲಿಸಬೇಕು:ಡಾ.ಹೊಸಮನಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.11: ವಿದ್ಯಾರ್ಥಿಗಳು ಹೆತ್ತ ತಂದೆ-ತಾಯಿಗಳಿಗೆ, ಗುರುಗಳಿಗೆ ವಯಸ್ಕರಿಗೆ ಗೌರವ ಭಾವನೆ ಸಲ್ಲಿಸಬೇಕು. ಇವತ್ತಿನ ಯುವಕರ ಮನಸ್ಸು ಹರಿಯುವ ಹೊಳೆಯಂತೆ ಸದಾ ಹರಿಯುತ್ತಿರುತ್ತದೆ. ಅದಕ್ಕೆ ಗೋಡೆಯನ್ನು ಕಟ್ಟಿ ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟು ಅಮೂಲ್ಯ ಮುತ್ತುಗಳಾಗಿ ಬೆಳೆಯಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕøತಿಕ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ನಮ್ಮ ಇಲಾಖೆಯು ಸದಾ ಮಕ್ಕಳ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತದೆ. ಅದರಂತೆ ವಿದ್ಯಾರ್ಥಿಗಳು ತಮ್ಮ ಪಠ್ಯೇತರ ಚಟುವಟಿಕೆಗಳಿಗೆ ಸಕ್ರೀಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ತೋರಿ ಕಾಲೇಜಿ, ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರಬೇಕೆಂದು ಕರೆ ನೀಡಿದರು.
ಸಾಂಸ್ಕøತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಗೋಪಾಲ ಹೂಗಾರ ಹಾಗೂ ಗೋಪಾಲ ಇಂಚಗೇರಿ ಮಾತನಾಡಿ ತಮ್ಮ ಜುಗಲಬಂದಿ ಹಾಸ್ಯದ ಮೂಲಕ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದರು. ಗೋಪಾಲ ಇಂಚಗೇರಿ ಮಾತನಾಡಿ ನೆಮ್ಮದಿ ಜೀವನಕ್ಕೆ ನಗು ಅತ್ಯವಶ್ಯಕ ಉತ್ತಮ ಆರೋಗ್ಯಕ್ಕೆ ಪ್ರತಿಯೊಬ್ಬರು ನಗಲೆಬೇಕು ಎಂದು ಹೇಳಿದರು.
ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿದ ಎಸ್.ಎಸ್. ಕೋರಿ ಮಾತನಾಡಿ ಇಂದಿನ ದೈನಂದಿನ ಜೀವನಕ್ಕೆ ಕ್ರೀಡೆ ಅವಶ್ಯಕವಾಗಿದ್ದು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸಾಮಾಜಿಕ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ಎಸ್.ಎಸ್. ಮಹಾವಿದ್ಯಾಲಯ ಫುಟಬಾಲ ಕ್ರೀಡೆಯ ಕಾಶಿಯಾಗಿದ್ದು ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ತೋರಿದ್ದಾರೆ. ಅದು ನಿಮಗೆಲ್ಲ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯಅತಿಥಿಗಳಾದ ಬಿ.ಆರ್. ಪಾಟೀಲ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿಗಳಾದ ಪ್ರೊ. ಐ.ಎಸ್. ಕಾಳಪ್ಪನವರ ಮಾತನಾಡಿ ಆರೋಗ್ಯವೇ ಭಾಗ್ಯ, ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಥಿತಿ ಇರುತ್ತದೆ. ಆದ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿಯು ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಪ್ರಾಚಾರ್ಯರಾದ ಡಾ. ಜೆ.ಡಿ. ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿ.ಎಂ. ಪವಾರ, ವಾಯ್.ಆರ್. ಹಿಟ್ನಳ್ಳಿ, ಬಿ.ವಾಯ್. ಕಾಸನೀಸ, ಸಿದ್ದು ಬಿರಾದಾರ, ಬಿ.ಟಿ. ಅಂಗಡಿ, ಎ.ಆರ್. ಪೊದ್ದಾರ,ಜೆ.ಎ. ಬಿರಾದಾರ, ಎ.ಎನ್. ಹಳ್ಳೂರ, ವಾಣಿ ಮಠ, ಎಂ.ಟಿ. ದೊಡಮನಿ, ಎಸ್.ಟಿ. ತೇಲಕರ, ಎಸ್.ಆರ್. ಭೂಯ್ಯಾರ, ಎಸ್.ಎಂ. ನಾಯ್ಕೋಡಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಾಜಿ ಕಬಾಡೆ ಹಾಗೂ ಸಂಜನಾ ನರಸಲಗಿ ನಿರೂಪಿಸಿದರು. ಅಜಯ ರಾಠೋಡ ಹಾಗೂ ಶಮಾ ಜಾಧವ ಸ್ವಾಗತಿಸಿದರು. ಶಶಿಕಾಂತ ನಗರೆ ಹಾಗೂ ಸುಪ್ರಿತಾ ಚವ್ಹಾಣ ವಂದಿಸಿದರು.