ವಿದ್ಯಾರ್ಥಿಗಳು, ಗುರುಗಳನ್ನು ಗೌರವದಿಂದ ಕಾಣಬೇಕು

ದೇವದುರ್ಗ.ಮಾ.೨೫-ವಿದ್ಯಾರ್ಥಿಗಳು ವಿದ್ಯಾಭ್ಯಾಸ ಜತೆ ಗುರಿಯಿಂದ ಬೇನ್ನತ್ತಿದಾಗ ಸಾಧನೆ ಯಾಶಸ್ವಿ ಕಾಣಲು ಸಾಧ್ಯ ಎಂದು ಕಪಿಲ ಸಿದ್ದರಾಮೇಶ ಶಿಖರ ಮಠ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯ ಪ್ರಥಮ ವರ್ಷದ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸ್ವಾಗಮ ಸಮಾರಂಭ ಕಾರ್‍ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳ ಕಲಿತ ಶಾಲಾ ಕಾಲೇಜು ಅಕ್ಷರ ಜ್ಞಾನ ನೀಡಿದ ಗುರುಗಳನ್ನು ಗೌರವದಿಂದ ಕಾಣಬೇಕು ಎಂದರು. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಶರಣರು, ಸಂತರು ನೆಲೆಸಿದ ಭೂಮಿಯಲ್ಲಿ ವಿದ್ಯಾರ್ಥಿಗಳು ಅಂತಹ ಮಹಾನೀಯರ ಆದರ್ಶಗಳು ಜೀವಕ್ಕೆ ಮೈಗೊಂಡಿಸಿಕೊಳ್ಳಬೇಕು. ಕಲಿತಷ್ಟು ಕಡಿಮೆ ಎನ್ನುವ ಕಾಲಘಟದಲ್ಲಿ ವಿದ್ಯಾರ್ಥಿಗಳು ಕಲಿಯಬೇಕಾದಿದ್ದು, ಬಹಳಷ್ಟು ಇದೆ ಎಂದರು. ಬಡತನದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕು ಎಂದು ಕನಸು ಕಾಣವಂತ ಪಾಲಕರ ಆಸೆ ನನಸಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯಬೇಕು ಎಂದು ಹೇಳಿದರು. ಯುವಕ ಮತ್ತು ಯುವತಿಯರು ಅತಿ ಹೆಚ್ಚು ಮೊಬೈಲ್ ಬಳಿಕೆ ಮಾಡದಂತೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ತಿರುಪತಿ ಸೂಗೂರು ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ಗುರುಗಳ ಮಾರ್ಗದಲ್ಲೇ ನಡೆಯಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಂತ ಮಹಾನಾಯಕರ ಆದರ್ಶ ಗುಣಗಳು ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವಕ್ಕೆ ಅಳವಡಿಸಿಕೊಂಡು ಯಾಶಸ್ವಿ ಕಡೆ ನಡೆಯಬೇಕು ಎಂದು ಹೇಳಿದರು.
ನೂತನ ಕನ್ನಡ ಹಂಪಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಕೊಪ್ಪರು, ನಾಗರಾಜ ಅಕ್ಕರಕಿ, ಶರಣಗೌಡ ಸುಂಕೇಶ್ವರಹಾಳ ಅವರಿಗೆ ಸನ್ಮಾನಿಸಿ ಗೌರವಿಸಿದರು. ಕೃತಿ ಸಾಹಿತ್ಯದೊಳಗಣ ಚಿಗುರು ಸಾಹಿತ್ಯ ಕೃತಿ ಪ್ರಶಸ್ತಿ ವಿಜೇತ ಉಪನ್ಯಾಸಕ ಮುನಿಯಪ್ಪ ನಾಗೋಲಿ ಅವರಿಗೆ ವಿಶೇಷ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ವಿರುಪಾಕ್ಷಪ್ಪಗೌಡ ಮುಷ್ಟೂರು, ಶಿವಗೇನಿ ನಾಯಕ ಪ್ರಾಚಾರ್ಯರು, ಮುಖ್ಯಶಿಕ್ಷಕ ಹುಸೇನ್ ಪೀರ, ಕಿಸನ್ ಪವಾರ, ಶರಣಯ್ಯಸ್ವಾಮಿ, ರಮೇಶ ರಾಮನಾಳ, ಬಾಬು ಅಲಿ, ರಾಮಣ್ಣ ಕರಡಿಗುಡ್ಡ, ರವಿ ರಾಯಚೂರಕರ್ ಸೇರಿ ಇತರರು ಇದ್ದರು.