ವಿದ್ಯಾರ್ಥಿಗಳು ಗಿಡ-ಮರಗಳನ್ನು ಬೆಳೆಸುವ ಹವ್ಯಾಸ ಮೈಗೂಡಿಸಿಕೊಳ್ಳಿರಿ- ಬಿಇಒ

ಕುರುಗೋಡು, ಜ.14: ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಗಿಡ-ಮರಗಳನ್ನು ಬೆಳೆಸುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕುರುಗೋಡು ಬಿಇಒ. ವೆಂಕಟೇಶ್‍ರಾಮಚಂದ್ರಪ್ಪ ಹೇಳಿದರು.
ಅವರು ಬುಧವಾರ ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಿಂಚಿನ ಸಂಚಾರ ಮಾಡಿ, ವಿದ್ಯಾಗಮ ಕಾರ್ಯಕ್ರಮದ ದಾಖಲೆಗಳನ್ನು ಪರಿಶೀಲಿಸಿದ ನಂತರ ಶಾಲಾವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಸಿನೆಡೆಸುವ ಕಾರ್ಯಕ್ರಮದಲ್ಲಿ ಬಾಗಿಯಾಗಿ ಮಾತನಾಡಿದ ಅವರು, ಹಸಿರೇ ಹುಸಿರು ಎಂಬಂತೆ ಜೀವನದಲ್ಲಿ ಗಿಡಮರಗಳಿಂದ ಜೀವನ ವರ್ಣಮಯ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಮುಖ್ಯಗುರು ಹಾಗು ಸಿಬ್ಬಂದಿವರ್ಗದವರು ಒಂದಾಗಿ ಶಾಲೆಯಲ್ಲಿ ಸ್ವಚ್ಚತೆ ಕಾಪಾಡಿಕೊಂಡು, ಗಿಡ-ಮರಗಳನ್ನು ನೆಡುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಮಾದರಿ ಹಿ. ಪ್ರಾ. ಶಾಲೆಯ ಮುಖ್ಯಗುರು ಲಕ್ಷಿಚಕ್ರವರ್ತಿ, ಮಾತನಾಡಿ, ‘ಶಾಲೆ ದೇವಾಲಯಕ್ಕೆ ಸಮಾನ’ ಎಂಬಂತೆ ಈ ಶಾಲೆಯಲ್ಲಿ ಶಿಕ್ಷಕರು ಹಾಗು ಎಸ್‍ಡಿಎಂಸಿ ಪದಾದಿಕಾರಿಗಳ ಸಹಕಾರದಿಂದ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ ಪಡೆಯುವ ಗುರಿಹೊಂದಲಾಗಿದೆ ಎಂದರು. ಬಿಆರ್‍ಪಿ.ಸುಧಾಕರ್, ಎಸ್‍ಡಿಎಂಸಿ ಅದ್ಯಕ್ಷ ಟಿ. ಕಲ್ಗುಡೆಪ್ಪ, ಸದಸ್ಯ ಗುಡಿಸಿಲಿರಾಜ, ಕುರುಗೋಡು ಕುಸ್ಮಾಸಂಸ್ಥೆಯ ಅದ್ಯಕ್ಷ ವಿಎಸ್. ಚಕ್ರವರ್ತಿ, ಶಿಕ್ಷಕ ಕೆಎಂ.ರಾಜಶೇಖರಯ್ಯ,ಸರೋಜ, ತುಳುಸೀಬಾಯಿ, ಪರಮೇಶ್ವರಪ್ಪ, ಬಿ.ಕೆಂಚನಗೌಡ, ಗುರುಮೂರ್ತಿ, ಪ್ರಭಾಕರರೆಡ್ಡಿ, ಪರಿಮಳ, ಸಾವಿತ್ರಿ, ಸವಿತ, ಇತರರು ಇದ್ದರು.