ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳುವುದು ಅವಶ್ಯ

ಚನ್ನಮ್ಮನ ಕಿತ್ತೂರ,ಜು 16: ವಿದ್ಯಾರ್ಥಿಗಳು ಆಧುನಿಕ ಸ್ಪರ್ಧಾತ್ಮಕ ಸಮಾಜದಲ್ಲಿ ಕೌಶಲ್ಯ ಬೆಳಸಿಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಪ್ರಾಚಾರ್ಯ ಡಾ. ಜಿ.ಕೆ.ಭೂಮನಗೌಡರ ಹೇಳಿದರು. ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವ ಕೌಶಲ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೌಶಲ್ಯ ತರಬೇತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಯುವಕರಿಗಾಗಿ ಪ್ರಾರಂಭಿಸಿವೆ. ಅದರ ಸದುಪಯೋಗವನ್ನು ಪಡೆದುಕೋಳ್ಳಬೇಕೆಂದು ಕರೆ ನೀಡಿದರು. ಈ ಸಮಯದಲ್ಲಿ ಉಪನ್ಯಾಸಕರುಗಳು ಡಾ.ಕೆ.ಆರ್ ಮೆಳವಂಕಿ, ಪ್ರೊ. ಜಿ.ಎಸ್ ಪ್ರಭಯ್ಯನವರಮಠ, ಎಮ್.ಜಿ ಹೀರೆಮಠ, ಡಾ. ಬಿ.ಜಿ ನಂದನ್, ಪ್ರೊ. ಎ.ಕೆ ಕರೆಪ್ಪನವರ, ಎಸ್.ಡಿ.ಶಹಪೂರಮಠ ಹಾಗೂ ಪ್ರೊ. ಶ್ರೀಮತಿ.ಎಲ್.ಡಿ ಬಡಿಗೇರ ಉಪಸ್ಥಿತರಿದ್ದರು.