ವಿದ್ಯಾರ್ಥಿಗಳು ಕೌಶಲ್ಯಗಳ ಅಪ್ ಡೇಟ್ ಮಾಡಿಕೊಳ್ಳಿ

ಸಂಜೆವಾಣಿ ನ್ಯೂಸ್
ಮೈಸೂರು : ಏ.30:- ಯಾವುದೇ ತಂತ್ರಜ್ಞಾನ ಬಂದರು ಅದನ್ನು ನಿರ್ವಹಿಸಲು ಮಾನವ ಅತ್ಯಗತ್ಯ. ಯಾವುದೇ ಆಧುನಿಕ ತಂತ್ರಜ್ಞಾನ ಬಂದರೂ ಯಾರು ಕೆಲಸ ಕಳೆದುಕೊಳ್ಳುವುದಿಲ್ಲ. ಹೀಗಾಗಿ, ನಿಮ್ಮ ಕೌಶಲ್ಯವನ್ನು ಅಪ್‍ಡೇಟ್ ಮಾಡಿಕೊಳ್ಳುವುದು ಅಗತ್ಯ ಎಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಆಯುಕ್ತ ಸಿ.ಶಿಖಾ ತಿಳಿಸಿದರು.
ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾಲೇಜಿನ 16ನೇ ಪದವೀಧರರ ದಿನಾಚರಣೆಯಲ್ಲಿ ಮಾತನಾಡಿದ ಅವರು, 17 ವರ್ಷಗಳ ಹಿಂದೆ ಮೊಬೈಲ್ ಎಲ್ಲರ ಕೈಯಲ್ಲೂ ಇರಲಿಲ್ಲ. ಈಗ ಎಲ್ಲರ ಬಳಿಯೂ ಮೊಬೈಲ್ ಇದೆ. 2 ಸಾವಿರ ವರ್ಷಗಳಲ್ಲಿ ಕಳೆದ 17 ವರ್ಷಗಳಲ್ಲಿ ಮಾತ್ರ ಸಾಕಷ್ಟು ತಂತ್ರಜ್ಞಾನ ಅಭಿವೃದ್ಧಿ ಆಗಿದೆ ಎಂದರು.
ಯಾವುದೇ ಕೆಲಸ ಹೆಚ್ಚ ಅಲ್ಲ, ಕಡಿಮೆಯೂ ಅಲ್ಲ. ಎಲ್ಲಾ ಕೆಲಸಗಳು ಶ್ರೇಷ್ಠ. ಆದರೆ, ನಿಮ್ಮ ಗುರಿ ಉನ್ನತ ಹುದ್ದೆಗಳತ್ತ ಇರಲಿ. ಅದಕ್ಕಾಗಿ ಕಠಿಣ ಪರಿಶ್ರಮ ಅಗತ್ಯ. ನೀವು ಒಬ್ಬರು ಕೆಲಸ ತೆಗೆದುಕೊಂಡರೇ ಆ ಸಂಬಳದಿಂದ ನಿಮ್ಮ ಕುಟುಂಬ ಜೀವನ ನಡೆಸಬಹುದು. ಆದರೆ, ನೀವು ಸ್ಟಾರ್ಟ್ ಅಪ್, ಉದ್ಯಮಿಗಳಾದರೇ ಒಂದಷ್ಟು ಜನರಿಗೆ ಕೆಲಸ ಸಿಕ್ಕಿ, ಅವರ ಕುಟುಂಬಗಳು ಜೀವನ ನಡೆಸಲು ಅನುಕೂಲವಾಗುತ್ತದೆ. ಹೀಗಾಗಿ, ನಿಮ್ಮ ಗುರಿ ಉನ್ನತವಾಗಿರಲಿ ಎಂದು ಅವರು ಕಿವಿಮಾತು ಹೇಳಿದರು.
ವೃತ್ತಿಯೊಂದಿಗೆ ಕುಟುಂಬ ಸದಸ್ಯರೊಂದಿಗೆ ಸಮಯ ವ್ಯಯಿಸಬೇಕು. ಯಾರೋ ಟೀಕೆ ಮಾಡುತ್ತಾರೆಂದು ಭಯ ಪಡಬೇಡಿ. ಟೈಮ್ ಟೇಬಲ್ ಹಾಕಿಕೊಂಡು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಗಮನ ಇಟ್ಟು ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಪ್ರತಿಜ್ಞಾ ವಿಧಿ 500 ಜೆಎಸ್‍ಎಸ್ ಮಹಿಳಾ ಕಾಲೇಜು (ಸ್ವಾಯತ್ತ) ಸರಸ್ವತಿಪುರಂ, ಮೈಸೂರು 1ನೇ ಪದವೀಧರರ ದಿನಾಚರಣೆ ಏಪ್ರಿಲ್ 20 ಬೋಧಿಸಿದರು. ಪದವೀಧರರಾದ ಎಸ್.ಯು.ಛಂಧೋಶ್ರೀ, ಆರ್.ಶಾಂಭವಿ, ಸೌಜನ್ಯ ಎಸ್. ಗಂಗಾವತಿ ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಪೆÇೀಷಕರಾದ ಡಾ.ಎಲ್. ನಂಜುಂಡಸ್ವಾಮಿ, ಎನ್.ಸಿ. ನಾಗರಾಜು ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುಎಸ್‍ಎ ಸಿಪಿಎ ಶಾಲಿನಿ ಗುಪ್ತ, ಅನುಪಮ ವಸಿಷ್ಠ ಇದ್ದರು.
21 ವಿದ್ಯಾರ್ಥಿನಿಯರಿಗೆ ಬಹುಮಾನ :
2022-23ರ ಶೈಕ್ಷಣಿಕ ವರ್ಷದಲ್ಲಿ 649 ವಿದ್ಯಾರ್ಥಿನಿಯರು ಪದವಿ ಪಡೆದರು. 329 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, 221 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ 14 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, 85 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಎಂ.ಕೆ. ಇವರಲ್ಲಿ 21 ವಿದ್ಯಾರ್ಥಿನಿಯರು ಪದಕ ಮತ್ತು ನಗದು ಬಹುಮಾನ ಪಡೆದರು. ಬಿಎನಲ್ಲಿ ಎನ್.ಲಕ್ಷ್ಮಿ, ತನ್ಮಯಿ, ಕೆ. ಪಲ್ಲವಿ, ಬಿಎಸ್ಸಿಯಲ್ಲಿ ಪಿ.ಆರ್. ಲಾವಣ್ಯ, ಎಂ. ರಂಜಿತಾ, ಕೆ. ಮೇಘಾ, ಬಿ.ಕಾಂನಲ್ಲಿ ಪಿ. ಕವನಾ, ಎಸ್.ಪಿ. ಷಾ ನಂದಿನಿ, ಎಸ್.ಯು, ಛಂಧೋಶ್ರೀ, ಬಿಬಿಎಯಲ್ಲಿ ಆರ್. ಲಾವಣ್ಯ, ಕೆ.ಎ. ನಯನ, ಎ.ಎಸ್. ಸರಸ್ವತಿ, ಬಿಸಿಎಯಲ್ಲಿ ಎಸ್. ಅನುಷಾ, ವಿ.ಪಿ. ಸುಚಿತ್ರಾ, ಎಂ. ಅನನ್ಯ ಅವರು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು. ಹಾಗೆಯೇ, ಸ್ನಾತಕೋತ್ತರ ವಿಭಾಗದಲ್ಲಿ ಎಂಎ (ಅರ್ಥಶಾಸ್ತ್ರ) ಅಂಜನಾ, ಎ.ಎಸ್. ಅನುಪಮ, ಎಂ.ಕಾಂನಲ್ಲಿ ಬಿ. ಹರ್ಷಿತಾ, ಸಿ.ಎಂ. ಭವ್ಯ, ಎಂಎಸ್ಸಿ (ರಸಾಯನಶಾಸ್ತ್ರ)ದಲ್ಲಿ ಎಂ. ವರ್ಷಾ ಮತ್ತು ಸೌಜನ್ಯ ಎಸ್. ಗಂಗಾವತಿ ಅವರು ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದರು.