ವಿದ್ಯಾರ್ಥಿಗಳು ಕೀಳರಿಮೆಯನ್ನು ದೂರಮಾಡಿಕೊಳ್ಳಬೇಕು: ಬಲರಾಮ ಲಮಾಣಿ

ವಿಜಯಪೂರ, ನ.17- ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆಯನ್ನು ದೂರಮಾಡಿಕೊಂಡು ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಶ್ವಿಪಡೆಯುತ್ತಾರೆ ಎಂದು ಅಸಿಸ್ಟಂಟ್ ಕಮಿಷನರ್ ಬಲರಾಮ ಲಮಾಣಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪ್ರತಿಷ್ಟಿತ ಬಿ.ಎಲ್.ಡಿ.ಈ ಸಂಸ್ಥೆಯ ಎಸ್.ಎಸ್.ಪ.ಪೂ ಕಾಲೇಜಿನಲ್ಲಿ ಸಾಂಸ್ಕøತಿಕ ಹಾಗೂ ಕ್ರಿಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದ್ದು ಕ್ರಿಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ಜೀವನವನ್ನಾಧರಿಸಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸುತ್ತಾ ಕ್ರೀಯಾಶಿಲರಾಗಿ ಕಾರ್ಯ ಮಾಡಿ ದೃಡ ನಿರ್ದಾರ, ಕಠಿನಪರಿಶ್ರಮ, ನಿರಂತರ ಅದ್ಯಯನಶೀಲರಾಗಿ ಎಂದು ವಿದ್ರ್ಯಾರ್ಥಿಗಳಿಗೆಮನಮುಟ್ಟುಂತೆ ಹೇಳಿದರು
ಈ ಕಾರ್ಯಕ್ರಮದ ಸಾಂಸ್ಕøತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಹಾಸ್ಯ ಕಲಾವಿದರಾದ ಶ್ರೀ. ಬಾಗೇಶ ಮುರಡಿ ನಮ್ಮ ಬಾರತೀಯ ಸಂಸ್ಕøತಿ ಜಗತ್ತಿನಲ್ಲಿಯೆ ಶ್ರೇಷ್ಠವಾಗಿದೆ ಇದನ್ನು ಉಳಿಸಿ ಬೆಳೆಸುವ ಕರ್ತವ್ಯ ಶಿಕ್ಷಕ ಮತ್ತು ವಿದ್ಯಾರ್ಥಿಗಳದ್ದಾಗಿದೆ ವಿದ್ಯಾರ್ಥಿಗಳು ಸಹಪಠ್ಯ ಚಟುವಿಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳಬೇಕು ಮತ್ತು ತಮ್ಮ ಮಾತಿನ ಮೂಲಕ ವಿದ್ಯಾರ್ಥಿಗಳನ್ನು ಹಾಸ್ಯಗಡಲಿನಲ್ಲಿ ತೆಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ.ಎಲ್.ಡಿ.ಈ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಡಾ. ರಾಘವೇಂದ್ರ ಕುಲಕರ್ಣಿ ಮಾತನಾಡಿ ವಿದ್ಯಾರ್ಥಿಗಳು ಪಾಲಕರು, ಶೀಕ್ಷಕರನ್ನು ಅವಲಂಭಿಸದೇ ಅವರಮಾರ್ಗದರ್ಶನ ಪಡೆದು ಸ್ವ-ಪ್ರಯತ್ನ ಮಾಢಬೇಕೆಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಡಳಿತಾಧಿಕಾರಿಗಳಾದ ಪ್ರೋ. ಬಿ.ಆರ್.ಪಾಟೀಲ ಪ್ರೋ. ಆಯ್ ಎಸ್ ಕಾಳಪ್ಪನವರ ಶ್ರೀ, ಕೈಲಾಸ ಹಿರೇಮಠ ಮತ್ತು ಶ್ರೀ. ಅಗರವಾಲ ವೇದಿಕೆಮೇಲೆ ಉಪಸ್ಥಿತರಿದ್ದರು ಇದೆ ಸಂದರ್ಭದಲ್ಲಿ ಸಾಹಿತಿಗಳಾದ ಶ್ರೀ. ಕೃಷ್ಣ ಕೊಲ್ಹಾರ ಕುಲಕರ್ಣಿ, ಅನ್ನಪೂರ್ಣ ಬೋಸಲೆ ಇವರಿಗೆ ಆತ್ಮಿಯವಾಗಿ ಸನ್ಮಾನಿಸಲಾಯಿತು ಪ್ರಾಚಾರ್ಯರಾದ ಡಾ. ಜಿ.ಡಿ.ಅಕಮಂಚಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ. ಟಿ.ಎಮ್.ಪವಾರ ವ್ಹಾಯ್.ಆರ್.ಹಿಟ್ನಳ್ಳಿ , ಡಾ. ಎಮ್.ಎಸ್.ಮದಭಾವಿ, ಡಾ. ವಿ ಡಿ ಐಹೋಳಿ, ಶ್ರೀ.ಎ.ಬಿ.ಬೂದಿಹಾಳ, ಎಸ್.ಎಮ್.ನುಚ್ಚಿ, ಎ.ವಿ.ಸಾಲಕ್ಕಿ, ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಎಸ್.ಪಿ.ಶೇಗುಣಸಿ ನಿರೂಪಸಿದರು.