ವಿದ್ಯಾರ್ಥಿಗಳು ಕಾಲೇಜಿನಲ್ಲಿನ ಮೂಲ ಸೌಲಭ್ಯಗಳನ್ನು ಬಳಸಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು: ಡಾ. ಯು.ಎಸ್ ಪೂಜೇರಿ

ವಿಜಯಪುರ,ಸೆ 15: ವಿದ್ಯಾರ್ಥಿಗಳು ಸತತ ಓದು, ಪರಿಶ್ರಮ, ನಿರಂತರ ಅಧ್ಯಯನ ನಡೆಸಿ ಕಾಲೇಜಿನಲ್ಲಿರುವ ಮೂಲ ಸೌಲಭ್ಯಗಳನ್ನು ಬಳಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಯು. ಎಸ್. ಪೂಜೇರಿ ಹೇಳಿದರು.
ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಮೃತ್ ಮಹೋತ್ಸವ ವರ್ಷಾಚರಣೆ ಹಾಗೂ 2022-23 ನೇ ವರ್ಷದÀ ಬಿ.ಎ ಮತ್ತು ಬಿ.ಎಸ್ಸಿ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿ.ಎಲ್.ಡಿ.ಇ ಸಂಸ್ಥೆಯು ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಿರುವ ಹೆಮ್ಮೆಯ ಸಂಸ್ಥೆಯಾಗಿದೆ. ಇದರ ಅಡಿಯಲ್ಲಿ ನಾನಾ ಮಹಾವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯವು ಸುಂದರ ಪರಿಸರ, ಅತ್ತ್ಯುತ್ತಮ ಮೂಲ ಸೌಕರ್ಯಗಳು, ಸುಸಜ್ಜಿತ ಗ್ರಂಥಾಲಯ, ಅತ್ಯುತ್ತಮ ಆಡಳಿತ ಮಂಡಳಿ, ನುರಿತ ಬೋಧಕ ಸಿಬ್ಬಂದಿಯ ಉತ್ತಮ ಸೇವೆಯ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ಅಲ್ಲದೇ, ಕಾಲೇಜು ಉತ್ತಮ ಆರೋಗ್ಯ ರೂಪಿಸಿಕೊಳ್ಳಲು ಕ್ರೀಡಾ ವಿಭಾಗ ಹೊಂದಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು. ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಡಾ. ಯು. ಎಸ್. ಪೂಜೇರಿ ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯ ಪೆÇ್ರ. ಬಿ. ಎಸ್. ಬಗಲಿ, ಐಕ್ಯೂಎಸಿ ನಿರ್ದೇಶಕ ಡಾ. ಪಿ. ಎಸ್. ಪಾಟೀಲ, ಸಂಯೋಜಕ ಡಾ. ಕೆ. ಮಹೇಶಕುಮಾರ, ರಾಜ್ಯಶಾಸ್ತ್ರದ ಮುಖ್ಯಸ್ಥ ಡಾ. ವಾಯ್. ತಮ್ಮಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ದೊಡ್ಡಮನಿ, ಡಾ. ಮೀನಾಕ್ಷಿ ಪಾಟೀಲ, ಪೆÇ್ರ. ಬಿ. ಎಸ್. ಬೆಳಗಲಿ, ಪೆÇ್ರ. ರಶ್ಮಿ ಪಾಟೀಲ, ಪೆÇ್ರ. ಆಯ್. ಎಸ್. ಹೂಗಾರ, ಡಾ. ಎಸ್. ಎನ್. ಉಂಕಿ, ಪೆÇ್ರ. ಸುಜ್ಞಾನಿ ಬಿರಾದಾರ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.