ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆ ತಿಳಿದುಕೊಳ್ಳಿ

ಧಾರವಾಡ,ನ18: ರಾಯಾಪುರದ ಎಸ್.ಜೆ.ಎಂ.ವ್ಹಿ ಮಹಾಂತ ಮಹಾವಿದ್ಯಾಯಲದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಎಸ್.ಜೆ.ಎಂ.ವ್ಹಿ.ಮಹಾಂತ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ 67ನೆಯ ಕನ್ನಡರಾಜ್ಯೋತ್ಸವದ ನಿಮಿತ್ತ “ಹಚ್ಚೇವು ಕನ್ನಡ ದೀಪ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ವಿದ್ಯಾರ್ಥಿಗಳೊಂದಿಗೆ ಹಾಡು, ಮಾತು, ಚರ್ಚೆ ಹಾಗೂ ಪುಸ್ತಕ ಪ್ರದರ್ಶನ ಮಾಡುವುದರ ಮೂಲಕ ಧಾರವಾಡದ ಕಾಲೇಜು ಶಿಕ್ಷಣ ಇಲಾಖೆಯಜಂಟಿ ನಿರ್ದೇಶಕಕೃಷ್ಣಮೂರ್ತಿ ಬೆಳೆಗೆರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಕನ್ನಡ ಬದುಕನ್ನು ಸುಂದರ ಗೊಳಿಸುತ್ತದೆ. ಬದುಕನ್ನು ಕಟ್ಟಿಕೊಡುತ್ತದೆ. ಸ್ವಾವಲಂಬಿಗಳಾಗಲು ಸ್ವತಂತ್ರವಾಗಿ ಬದುಕಲು ಮಾರ್ಗದರ್ಶನ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯಡಾ.ಶಾಂತಯ್ಯ.ಕೆ.ಎಸ್. ಅವರುಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ ಹಚ್ಚೇವು ಕನ್ನಡ ದೀಪ ಕಾರ್ಯಕ್ರಮ ಸ್ಮರಣೀಯಕಾರ್ಯಕ್ರಮಕನ್ನಡ, ಭೌಗೋಳಿಕ ಪರಿಸರವನ್ನು ಮೀರಿದ ಭಾಷೆ, ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ತಿಳಿದುಕೊಳ್ಳಬೇಕು ಎಂದರು.
ಕನ್ನಡಅನ್ನದ ಭಾಷೆಯಾಗಲಿ, ಉದ್ಯೋಗದ ಭಾಷೆಯಾಗಲಿ ಎಂದು ನುಡಿದರು.ಕಾರ್ಯಕ್ರಮದಲ್ಲಿಕನ್ನಡರಾಜ್ಯೋತ್ಸವ ನಿಮಿತ್ತ ವಿದ್ಯಾರ್ಥಿಒಕ್ಕೂಟದ ಮಹಿಳಾ ಸಂಘ ಹಾಗೂ ಸಾಂಸ್ಕøತಿಕ ಸಂಘ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ಕನ್ನಡಗೀತಗಾಯನ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕರ್ನಾಟಕÀ ವಿದ್ಯಾವರ್ಧಕ ಸಂಘ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿತು.