ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಲು ಕರೆ

ಕುರುಗೋಡು.ಏ.4 ವಿದ್ಯಾರ್ಥಿಗಳು ಒದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು, ಅಂದಾಗ ಮಾತ್ರ ಶಿಕ್ಷಣಮಟ್ಟ ಹೆಚ್ಚಾಗಲು ಸಾದ್ಯ ಎಂದು ಹೆಸರಾಂತ ಸಾಹಿತಿ ಹೆಚ್‍ಕೆ.ವಿವೇಕಾನಂದರು ಹೇಳಿದರು.
ಅವರು ಶುಕ್ರವಾರ ಸಮೀಪದ ಗುರುದೇವವಸತಿ ಫೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈಚಾರಿಕ ಸಂವಾದ, ವಿಸ್ಮಯ ಹಾಗು ವಿನೋದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸುತ್ತಮುತ್ತಲಿನ ಪರಿಸರ ದಿನದಿಂದ-ದಿನಕ್ಕೆ ಹಾಳಾಗುತ್ತಿದೆ. ಆದ್ದರಿಂದ ಎಲ್ಲರೂ ಗಿಡ-ಮರಗಳನ್ನು ಬೆಳೆಸಿ ಉತ್ತಮ ಪರಿಸವನ್ನು ನಿರ್ಮಾಣಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಹೆಸರಾಂತ ಸಂಖ್ಯಾಶಾಸ್ರಜ್ನ ಬಸವರಾಜಶಂಕರ್‍ಉಮರಾಣಿಯವರು ಕಾರ್ಯಕ್ರಮದಲ್ಲಿ ಸೆಕೆಂಡುಗಳಲ್ಲಿ ಸಂಕಲನ, ವ್ಯವಕಲನ, ಗುಣಾಕಾರ, ಮತ್ತು ಬಾಗಾಕಾರ ಲೆಕ್ಕವನ್ನು ಹೇಗೆ ಮಾಡಬಹುದು ಎಂದು ತಮ್ಮ ಚಾಣಾಕ್ಷದಲ್ಲಿ ಪ್ರಯೋಗಿಕವಾಗಿ ತೋರಿಸಿಕೊಟ್ಟರು. ಮಾತ್ರವಲ್ಲದೆ ಹುಟ್ಟಿದ ದಿನಾಂಕ ಹೇಳಿದರೆ, ತಟ್ಟನೆ ಹುಟ್ಟಿದವಾರ ವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ತೋರಿಸಿಕೊಟ್ಟರು. ನಂತರ ಗುರುದೇವವಸತಿ ಶಾಲೆಯಲ್ಲಿ ವ್ಯಾಸಾಂಗಮಾಡುವ ವಿದ್ಯಾರ್ಥಿಗಳ ಶಿಸ್ತು, ಮತ್ತು ಸಂಸ್ಕಾರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುದೇವವಸತಿ ಪ್ರೌಢಶಾಲೆಯ ಅದ್ಯಕ್ಷ ಪಲ್ಲೇದಪೊಂಪಾಪತಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಗುರುದೇವವಸತಿ ಫೌಢಶಾಲೆಯ ಕಾರ್ಯದರ್ಶಿ ತೆಜಪ್ಪಅಣ್ನ, ರಾಮಶೇಷ್ಟಿಅಣ್ಣ, ರುದ್ರಪ್ಪಅಣ್ಣ, ಸತ್ಯನಾರಾಯಣಅಣ್ಣ, ಗುರುದೇವ ವಸತಿಫೌಢಶಾಲೆಯ ಮುಖ್ಯಗುರು ಎನ್‍ಎಂ.ವೀರೇಶ, ಶಿಕ್ಷಕ ಚಂದ್ರಹಾಸ, ಸಂತೋಷನಾಯಕ್, ಸೇರಿದಂತೆ ಗುರುದೇವವಸತಿ ಪೌಢಶಾಲೆಯ ಶಿಕ್ಷಕ-ಶಿಕ್ಷಕಿಯರು, ಊರಿನ ಸಂಘ-ಸಂಸ್ಥೆಯ ಮುಖಂಡರು, ವಿದ್ಯಾರ್ಥಿಗಳು ಇದ್ದರು.