
ತಾಳಿಕೋಟೆ:ಆ.31: ವಿದ್ಯಾರ್ಥಿಯಾದವನಲ್ಲಿ ನನ್ನಲ್ಲಿ ಸಾಮಾಥ್ರ್ಯ ಇದೆ ಎಂಬ ಭಾವನೆಯೊಂದಿಗೆ ವಿಸ್ವಾಸವನ್ನು ಮೂಡಿಸಿಕೊಂಡು ಆತ್ಮ ವಿಸ್ವಾಸದೊಂದಿಗೆ ಜ್ಞಾನವನ್ನು ಮೂಡಿಸಿಕೊಂಡು ನಡೆಯುವ ಹವ್ಯಾಸಕ್ಕೆ ಮುಂದಾಗಬೇಕೆಂದು ವಿಜಯಪುರ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್.ಎಚ್.ನಾಗೂರ ಅವರು ನುಡಿದರು.
ಬುಧವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಕಲಾ ಹಾಗೂ ವಾಣಿಜ್ಯ, ವಿಜ್ಞಾನ ಮಹಾ ವಿದ್ಯಾಲಯದ ವತಿಯಿಂದ ಶ್ರೀ ವಿರಕ್ತಶ್ರೀ ಸಭಾಭವನದಲ್ಲಿ 2022-23ನೇ ಸಾಲಿನ ಕ್ರೀಡಾ ಚಟುವಟಿಕೆ, ಎನ್.ಎಸ್.ಎಸ್., ಎನ್.ಸಿ.ಸಿ. ಮತ್ತು ವಾಯ್.ಆರ್.ಸಿ. ಒಳಗೊಂಡು ವಿವಿಧ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ಅಂತಿವರ್ಷದ ವಿಧ್ಯಾರ್ಥಿಗಳ ಬಿಳ್ಕೊಡುವ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ವಿಧ್ಯಾರ್ಥಿ ಜೀವನವೆಂಬುದು ಬಹಳೇ ಮಹತ್ವದ್ದಾಗಿದೆ ಅದು ಮರಳಿ ಬರುವಂತಹದ್ದಲ್ಲಾ ಅದರಲ್ಲಿಯೇ ಪಧವಿ ಶಿಕ್ಷಣವೆಂಬುದು ಬಹಳೇ ಮುಖ್ಯವಾಗಿದೆ ಅಂತಹ ಬಧುಕನ್ನು ಕೊಡುವಂತಹ ಸಂಸ್ಥೆ ತಾಳಿಕೋಟೆಯ ವಿಧ್ಯಾ ಸಂಸ್ಥೆಯಾಗಿದೆ ಎಂದರು. ಶ್ರದ್ದೆ ಎಂಬುದು ಇರತಕ್ಕಂತಹ ಬಧುಕು ವಿಧ್ಯಾರ್ಥಿಗಳಲ್ಲಿ ಬರಬೇಕಾಗಿದೆ ಉತ್ತಮ ಅಧ್ಯಯನ ಮಾಡುವವರ ಬಧುಕು ಸಂಭ್ರಮವಾಗಿರುತ್ತದೆ ಜೀವನ ಪರ್ಯಂತ ಸಂಭ್ರಮದಿಂದ ಇರಬೇಕಾದರೆ ಉತ್ತಮ ಅಧ್ಯಯನ ಮಾಡುವದು ಅಗತ್ಯವಾಗಿದೆ ಎಂದು ಇದೇ ಸಂಸ್ಥೆಯಲ್ಲಿ ತಾವು ಶಿಕ್ಷಣ ಪಡೆದಿದ್ದರ ಕುರಿತು ಉಪಸ್ಥಿತ ವಿಧ್ಯಾರ್ಥಿಗಳಿಗೆ ವಿವರಿಸಿದ ಅಧಿಕಾರಿ ನಾಗೂರ ಅವರು ಸಾಧನೆ ಮಾಡಬೇಕೆಂಬ ಛಲದೊಂದಿಗೆ ನಾನು ಮುನ್ನಡೆದಿದ್ದೆ ಅದನ್ನೇ ಮೈಗೂಡಿಸಿಕೊಂಡು ನಡೆದೆ ಅದರಿಂದ ನನಗೆ ಸಾರ್ಥಕ ಬಧುಕು ರೂಪಿಸಿಕೊಳ್ಳಲು ಸಾಧ್ಯವಾಯಿತೆಂದು ವಿವಿರಿಸಿದ ಅವರು ಜ್ಞಾನವನ್ನು ಬೆಳೆಯುವ ರೀತಿಯಲ್ಲಿ ಬೆಳೆಸಿಕೊಳ್ಳಿ ಇದರಿಂದ ತುಂಬಾ ಗೌರವ ಸಿಗುತ್ತದೆ ಮಾತಾಪಿತರನ್ನು ಹಾಗೂ ಗುರು ಹಿರಿಯರನ್ನು ಗೌರವದಿಂದ ಕಾಣಿ ಕಾರಣ ಅವರಲ್ಲಿ ಅಜ್ಞಾನವೆಂಬುದನ್ನು ತೊಲಗಿಸುವ ಶಕ್ತಿ ಅವರಿಂದ ದೊರೆಯುತ್ತದೆ ಎಂದು ಅಧಿಕಾರಿ ನಾಗೂರ ಹೇಳಿದರು.
ಇನ್ನೋರ್ವ ವೀ.ವೀ.ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ(ಹಂಪಿ) ಅವರು ಮಾತನಾಡಿ ಇಂದಿನ ಈಮಹತ್ವದ ಕಾರ್ಯಕ್ರಮಕ್ಕೆ ಉಪನಿರ್ದೇಶಕರಾದ ನಾಗೂರ ಅವರನ್ನು ಅಹ್ವಾನಿಸಿರುವದು ಅವರು ಇಡೀ ಜೀವನದಲ್ಲಿ ಶಿಕ್ಷಣದ ಸಾಧನೆ ಕುರಿತು ಕೈಕೊಂಡು ನಡೆದಿರುವ ಪದ್ದತಿ ನಮ್ಮ ವಿಧ್ಯಾರ್ಥಿಗಳಿಗೆ ಅಗತ್ಯವಾಗಿತ್ತು ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆದು ಅಧಿಕಾರಿ ನಾಗೂರ ಅವರು ಉನ್ನತ ಸ್ಥಾನ ಮಾನ ಪಡೆದಿರುವದು ತಮ್ಮ ಸ್ವಪ್ರಯತ್ನದಿಂದಲೇ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯವಾಗಿದೆ ಕಾರಣ ವಿಧ್ಯಾರ್ಥಿಗಳು ಸಾಧನೆ ಮಾಡಿದರೆ ತಂದೆ ತಾಯಿಗಳ ಹಾಗೂ ಗುರುಗಳ ವಿಧ್ಯಾ ಸಂಸ್ಥೆಯ ಹೆಸರನ್ನು ತರುವಂತಹ ಕಾರ್ಯ ಮಾಡಬೇಕೆಂದು ಸಲಹೆ ನೀಡಿದ ಹಿರೇಮಠ ಅವರು ವಿಧ್ಯಾರ್ಥಿಗಳು ಹಿರಿಯರ ಗಳಿಕೆಯನ್ನು ಅವಲಂಬಿಸುವದು ಬೇಡಾ ವಿಧ್ಯೆಯಲ್ಲಿ ಸಾಧನೆ ಮಾಡಿ ತೋರುವದರೊಂದಿಗೆ ನಿಷ್ಠಾವಂತ ಪ್ರಮಾಣಿಕತನದ ಗಳಿಕೆ ಮಾಡಿ ತೋರಿಸಿರಿ ಎಂದು ಸಲಹೆ ನೀಡಿದರು.
ಇದೇ ಸಮಯದಲ್ಲಿ ಉಪನಿರ್ದೇಶಕರಾದ ನಾಗೂರ ಅವರಿಗೆ ಸನ್ಮಾನಿಸಿ ಶ್ರೀ ಖಾಸ್ಗತೇಶ್ವರ, ಶ್ರೀವಿರಕ್ತಶ್ರೀಗಳ ಅವರ ಬೃಹತ್ ಆಕಾರದ ಭಾವಚಿತ್ರ ನೀಡಿ ಗೌರವಿಸಲಾಯಿತು.
ಕುಮಾರಿ ಸ್ನೇಹಾ ನಾವದಗಿ ಅವರು ಮಹಾ ವಿಧ್ಯಾಲಯ ನಡೆದುಬಂದ ದಾರಿ ಹಾಗೂ ಅಲ್ಲಿಯ ವಿಧ್ಯಾರ್ಥಿಗಳ ಸಾಧನೆ, ಶಿಕ್ಷಕ ವೃಂದದವರ ಸಾಧನೆ ಕುರಿತು ವರಧಿ ವಾಚನ ಮೂಲಕ ವಿವರಿಸಿದರು.
ವಿಧ್ಯಾರ್ಥಿನಿ ಕುಮಾರಿ ಕೌಶಲ್ಯ, ರಾದಿಕಾ ಕೊಪ್ಪದ, ಚೈತ್ರಾ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ವಿವಿಧ ಕ್ರೀಡೆಯಲ್ಲಿ ಸಾಧನೆ ಮಾಡಿ ತೋರಿದ ವಿಧ್ಯಾರ್ಥಿ, ವಿಧ್ಯಾರ್ಥಿನಿಯರಿಗೆ ಹಾಗೂ ವಿವಿಧ ಪ್ರಶಸ್ತಿಯನ್ನು ಪಡೆದ ಶಿಕ್ಷಕ ವೃಂದದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ ಅವರು ಅಧ್ಯಕ್ಷತೆ ವಹಿಸಿದ್ದರು.
ವೀ.ವಿ.ಸಂಘದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಆಡಳಿತ ಮಂಡಳಿಯ ಕಾಶಿನಾಥ ಸಜ್ಜನ, ವಿಶ್ವನಾಥ ಬಿಳೇಭಾವಿ, ರಮೇಶ ಸಾಲಂಕಿ, ಚನಮಲ್ಲು ಕತ್ತಿ, ಅಶೋಕ ಜಾಲವಾದಿ, ಮೊದಲಾದವರು ಉಪಸ್ಥಿತರಿದ್ದರು.
ಸುವರ್ಣಾ ಪಾಟೀಲ ಸ್ವಾಗತಿಸಿದರು. ಕು.ತೇಜಶ್ವಿನಿ ಡಿಸಲೆ, ಹಾಗೂ ಸಿದ್ದನಗೌಡ ಅವರು ನಿರೂಪಿಸಿದರು.