ವಿದ್ಯಾರ್ಥಿಗಳು ಉದ್ಯೋಗಕ್ಕೆ ಅನುಕೂಲವಾಗುವ ಕೌಶಲ್ಯ ರೂಡಿಸಿಕೊಳ್ಳಲು ಸಲಹೆ

ತುಮಕೂರು, ಜು. ೨೮- ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಕಿಲ್ ಮತ್ತು ಕೆರಿಯರ್ ಡೆವಲಪ್‌ಮೆಂಟ್ ಕೋಶದ ವತಿಯಿಂದ ಅಟouಜ ಅomಠಿuಣiಟಿg & ಆevಔಠಿs ತಾಂತ್ರಿಕತೆ ಮೇಲೆ ಎರಡು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಈ ತರಹದ ತಾಂತ್ರಿಕತೆಗಳು ಮತ್ತು ಅವುಗಳ ಕಲಿಕೆ ಉದ್ಯೋಗ ಗಳಿಕೆ ಮತ್ತು ವೃತ್ತಿ ಜೀವನಕ್ಕೆ ಅತಿ ಅವಶ್ಯಕ ಕೌಶಲ್ಯವಾಗಿದ್ದು, ವಿದ್ಯಾರ್ಥಿಗಳು ಇವುಗಳಲ್ಲಿ ಪರಿಣತಿ ಪಡೆಯುವ ಮೂಲಕ ಉತ್ತಮ ಉದ್ಯೋಗ ಪಡೆದುಕೊಳ್ಳಬಹುದು ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಮುಖ್ಯಸ್ಥ ಡಾ. ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.
ಮಾಹಿತಿ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ನಿರ್ದೇಶಕ ಎಂ.ಎಸ್.ಪಾಟೀಲ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಾಂಶುಪಾಲರಾದ ಡಾ. ನರೇಂದ್ರ ವಿಶ್ವನಾಥ್ ಮಾತನಾಡಿ, ವಿದ್ಯಾರ್ಥಿಗಳು ಸದ್ಯದ ಪಠ್ಯಕ್ರಮದೊಂದಿಗೆ ಉದ್ಯೋಗಕ್ಕೆ ಅನುಕೂಲವಾಗುವ ಕೌಶಲ್ಯವನ್ನು (Sಞiಟಟ) ಕಲಿಯಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಪ್ರೊ. ಷಣ್ಮುಖಸ್ವಾಮಿ, ಡಾ.ಚರಣ್, ಬಸವೇಶ್ ಡಿ., ಕಿರಣ್ ಜಿ. ಎಮ್, ಮಹಾಂತೇಶ್, ವೀಣಾ ಎನ್. ಡಿ. ಮತ್ತಿತರರು ಉಪಸ್ಥಿತರಿದ್ದರು.