ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು

ಇಂಡಿ: ಫೆ.27:ಇಂದಿನ ಮಕ್ಕಳು ತುಂಬಾ ಬುದ್ದಿವಂತರು ಪರಿಕ್ಷೇಗಳಲ್ಲಿ ಸಲಿಸಾಗಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಾರೆ. ಆದರೆ ಜೀವನ ಎಂಬುವುದು ಕೇವಲ ಹೆಚ್ಚು ಅಂಕಗಳನ್ನು ಪಡೆಯುದಕ್ಕೆ ಸೀಮಿತವಲ್ಲ. ಇದರ ಜೊತೆಗೆ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತ ಸದಸ್ಯ ಅಪ್ಪಣ್ಣ ಕಲ್ಲೂರ ಹೇಳಿದರು.
ತಾಲೂಕಿನ ತಾಂಬಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಾಸ್ಥಾನದ ಆವರಣದಲ್ಲಿ ಆಯೋಜಿಸಿದ ಶ್ರೀ ಬಸವ ವಿದ್ಯಾವರ್ಧಕ ಸಂಘ (ರಿ) ಸಂಕಲ್ಪ ಕೋಚಿಂಗ್ ಕ್ಲಾಸಸ್ ವತಿಯಿಂದ 2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಶುಭ ಕೋರುವುದು ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಂಸ್ಕಾರ ರೂಪಿಸಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯ, ಜೀವನದಲ್ಲಿ ಪರಿಕ್ಷೇಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಬೆಕು ಎಂದರು.
ಕೆ.ಜಿ.ಎಂ.ಪಿ.ಎಸ್. ಶಾಲೆಯ ಶಿಕ್ಷಕಿಯರಾದ ಎನ್.ಸಿ.ವಗ್ಗಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಜೀವನದ ಮುಂದಿನ ಗುರಿಯನ್ನು ನಿಶ್ಚಯಿಸಿ ನಿಮ್ಮ ಭವಿಷ್ಯ ಉಜ್ವಲವಾಗುವುದು. ಈಗಿನಿಂದಲೇ ಗುರಿಯನ್ನು ಇಟ್ಟುಕೊಂಡರೆ ಸತತ ಪರಿಶ್ರಮ ಪಟ್ಟರೆ ಯಶಸ್ವಿ ಖಂಡಿತ ದೊರೆಯುತ್ತದೆ. ಸತತ ಪರಿಶ್ರಮವೇ ಸಾಧನೆಗೆ ಮೂಲ ಸಾಧನೆಯ ಶಿಖರ ತಲುಪಲು ಕಠಿಣ ಪರಿಶ್ರಮ ಪಡಬೇಕು ಎಂದು ಹೇಳಿದರು.
ದಿವ್ಯ ಸಾನಿದ್ಯ ಶ್ರೀ ಷ.ಬ್ರ.ಅಭಿನವ ರಾಚೋಟೇಶ್ವರ ಶಿವಚಾರ್ಯರು ಹಿರೇಮಠ ತಡವಲಗಾ ಆರ್ಶೀವಚನ ನೀಡಿದರು.
ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ ಚಿಕ್ಕಗಸಿ, ಬಂಥನಾಳ ಶಾಲೆಯ ಮುಖ್ಯಗುರುಗಳಾದ ಎಸ್.ಡಿ.ಶರ್ಮಾ, ಡಾ.ಮಾದೇವ ಗಳೆದ, ಹೊನ್ನಪ್ಪ ಮ್ಯಾಗೇರಿ, ಬೀರಪ್ಪ ವಗ್ಗಿ, ಅಣ್ಣಾರಾಯಗೌಡ ಪಾಟೀಲ, ಅರ್ಜುನ ಚಟ್ಟರಕಿ, ಪರಸು ಬಿಸನಾಳ, ಪತ್ರಕರ್ತರಾದ ಸಿದ್ದು ಹತ್ತಳ್ಳಿ, ಲಕ್ಷ್ಮಣ ಹಿರೇಕುರಬರ, ವಿನೋದ ಸಿಂಗೆ, ಶಿಕ್ಷಕರಾದ, ಎಸ್.ಬಿ.ಬಾಗವಾನ, ಸಂತೋಷ ಸರಸಂಬಿ, ಪವನ ಹದರಿ, ಜೆಟ್ಟೆಪ್ಪ ಮಾದರ, ಸಂಜೀವ ಈಶ್ವರಪ್ಪಗೋಳ, ಸಂಗಮೇಶ ಕುಮಟಗಿ, ಶೇಖರ ಪೂಜಾರಿ, ಮಲ್ಲಿಕಾರ್ಜುನ ಕರ್ಕಟಗಿ, ಸೋಮು ಬಾಗಲಕೋಟ ಸೇರಿದಂತೆ ಮುದ್ದು ಮಕ್ಕಳು ಉಪಸ್ಥಿತರಿದ್ದರು.