ವಿದ್ಯಾರ್ಥಿಗಳು ಉತ್ತಮವಾಗಿ ಓದಿ, ಊರಿಗೆ ಒಳ್ಳೆಯ ಹೆಸರು ತನ್ನಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ,15- ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ, ಏಳನೇ ಎಂಟನೇ ತರಗತಿಯ 141 ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪೆನ್ ಜೊತೆಗೆ ಶಾಲೆಯಲ್ಲಿ ಕವಾಯತು ಮಾಡಲು ರೂ.ಆರು ಸಾವಿರ ಹಣದಲ್ಲಿ ಡ್ರಮ್ ನ್ನು ಉಚಿತವಾಗಿ ನೀಡಲು ರೂಪನಗುಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಮಾಜಿ ಸದಸ್ಯರಾದ ಅಲ್ಲಂಪ್ರಶಾಂತ್ ಅವರು ಹಮ್ಮಿಕೊಂಡಿದ್ದ ಉಚಿತ ಲೇಖನ ಸಾಮಾಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಕ್ಕಳಿಗೆ ಪುಸ್ತಕ ವಿತರಿಸಿ ಮೇಲಿನಂತೆ ಹೇಳಿದರು.
ಲೇಖನ ಸಾಮಗ್ರಿಗಳನ್ನು ಸ್ವೀಕರಿಸಿ ಮಾತನಾಡಿದ ಶಾಲೆಯ ಮುಖ್ಯಗುರುಗಳಾದ ರವಿಚೇಳ್ಳಗುರ್ಕಿ  ಅಲ್ಲಂಪ್ರಶಾಂತ್ ಅವರ ಸಮಾಜಸೇವೆ ಮೆಚ್ಚುವಂತದ್ದು.ಪ್ರತಿ ವರ್ಷ ನಮ್ಮ ಶಾಲೆಗೆ ಒಂದಲ್ಲಾ ಒಂದು ಸಹಾಯ ಮಾಡುತ್ತಾ ಮಕ್ಕಳಿಗೆ ಪ್ರೇರಕರಾಗಿದ್ದಾರೆ ಎಂದು ಸ್ಮರಿಸಿದರು.
ವಿಜ್ಞಾನ ಶಿಕ್ಷಕರಾದ ಮುನಾವರ ಸುಲ್ತಾನ,ಉಮ್ಮೆಹಾನಿ, ಶಶಮ್ಮ ಮುಂತಾದವರು ಉಪಸ್ಥಿತರಿದ್ದರು.