ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು: ಶಾಸಕ ಪಾಟೀಲ್

ಹುಮನಾಬಾದ್:ಜ.31:ಸರಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಡಾ. ಸಿದ್ದು ಪಾಟೀಲ್ ಹೇಳಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಪದವಿ ಪೂರ್ವ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪ್ರಥಮ ಮತ್ತು ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸರಕಾರ ಕೋಟ್ಯಾಂತರ ರೂ.ಅನುದಾನ ವೆಚ್ಚ ಮಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡುವ ಮೂಲಕ ಉತ್ತಮ ಸಾಧನೆ ಮಾಡಬೇಕು. ಜತೆಗೆ ಗುರು ಹಿರಿಯರನ್ನ ಗೌರವಿಸುವ ಮನೋಭಾವ ಮೈಗೂಡಿ ಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀಹರಿ ದೇಶಪಾಂಡೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಬೀದರ , ಶ್ರೀ ಗಂಗಾಧರ ನಿಲೂರ ತಾಲ್ಲೂಕ ಕಾರ್ಮಿಕ ಅಧಿಕಾರಿಗಳು, ಸಿಬ್ಬಂಧಿಗಳಾದ ಸುಭಾಷ ನರಬೂಳೆ, ರಾಮ, ಲಕ್ಷ್ಮಣ್ ಪೂಜಾರಿ, ರೇವಣಸಿದ್ದಪ್ಪಾ , ಮುಖಂಡರಾದ ಗಿರೀಶ್ ತುಂಬಾ, ಅನಿಲ ಪಸರ್ಗಿ , ಮಲ್ಲಿಕಾರ್ಜುನ್, ಗೋಪಾಲ, ಸೇರಿದಂತೆ ಇದ್ದರು.