ವಿದ್ಯಾರ್ಥಿಗಳು ಆದರ್ಶ ಗುಣಗಳು ರೂಡಿಸಿಕೊಳ್ಳಿ

ಮುದಗಲ್,ಆ.೦೮- ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆದರ್ಶ ಗುಣಗಳು ರೂಡಿಸಿಕೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ಜಿ. ಗುರಿಕಾರ ಹೇಳಿದರು.
ಸಮೀಪದ ಆನೆಹೊಸೂರು ಗ್ರಾಮದಲ್ಲಿ ರಾಯಚೂರು ವಿಶ್ವವಿದ್ಯಾಲಯ, ನಾಗರಾಳ ಸಜ್ಜಲಶ್ರೀ ಕಲಾ ಪದವಿ ಮಹಾವಿದ್ಯಾಲಯದ ಆಶ್ರಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಮೇರಾ ಮಿಟ್ಟಿ ಮೇರಾ ದೇಶ ಆಂದೋಲನದ ನಿಮಿತ್ತ ನಡೆದ ಸಸಿ ನೆಡುವ ಕಾರ್ಯಕ್ರಮ ಹಾಗೂ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯಲ್ಲಿರು ಆದರ್ಶಗುಣಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಗುಣಮಟ್ಟದ ಸೇವೆ ನೀಡಬೇಕೆಂದರು.
ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮ ಸಂಭ್ರಮದಿಂದ ಆಚರಣೆ ಮಾಡಬೇಕು. ದೇಶದ ಪ್ರಜಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು. ಈ ಕಾರ್ಯಕ್ರಮ ದೇಶದ ಏಕತೆ ಭಾವನೆಯನ್ನು ಮೂಡಿಸುತ್ತದೆ ಎಂದು ಸಂಗಪ್ಪ ಭಾವಿಮನಿ ಹೇಳಿದರು.
ಸಭೆ ಸಮಾರಂಭದಲ್ಲಿ ಹಾರ, ತುರಾಯಿಗಳನ್ನು ನೀಡದೆ, ಪುಸ್ತಕ ಇಲ್ಲವೇ ಗಿಡಗಳು ನೀಡಬೇಕು. ಪುಸ್ತಕಗಳು ಜ್ಞಾನ ನೀಡುತ್ತದೆ. ಗಿಡಗಳು ಪರಿಸರ ಶುದ್ಧಗೊಳಿಸುತ್ತದೆ ಎಂದು ಎಂ.ಡಿ. ಉಸ್ಮಾನ ಹೇಳಿದರು.
ಸನ್ಮಾನ ಸ್ವೀಕರಿಸಿ ನಿವೃತ್ತ ಯೋಧ ದೊಡ್ಡಪ್ಪ ವಾಲ್ಮೀಕಿ ಮಾತನಾತನಾಡುತ್ತ ಭಾರತ ದೇಶದ ಮಣ್ಣಿಗೆ ದೊಡ್ಡ ಶಕ್ತಿ ಇದೆ. ಈ ದೇಶದಲ್ಲಿ ೮ ತರಹದ ಮಣ್ಣಿನ ಗುಣಗಳನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಮೇರಾ ಮಿಟ್ಟಿ ಮೇರಾ ದೇಶ ಆಂದೋಲನ ಆರಂಭಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಆನೆಹೊಸೂರು ಗ್ರಾಮದ ನಿವೃತ್ತ ಯೋಧರಾದ ಹನಮಂತಪ್ಪ ವಾಲ್ಮೀಕಿ, ದೊಡ್ಡಪ್ಪ ನಾಯಕ, ಜಾಫರ್ ಬೆಂಡೋಣಿ, ದೊಡ್ಡಪ್ಪ ವಾಲ್ಮೀಕಿ, ಮಲ್ಲಿಕಾರ್ಜುನ ಅಂಗಡಿ, ನೂತನವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅಮೀನಬೇಗಂ ಇಸ್ಮಾಯಿಲ ಹುಬ್ಬಳ್ಳಿ, ಉಪಾಧ್ಯಕ್ಷ ಮೌನೇಶ ನಾಯಕ ಅವರಿಗೆ ಸನ್ಮಾನಿಸಿದರು.
ಸಂಗಮೇಶ ನಾಯಕ, ಪ್ರಾಂಶುಪಾಲ ಡಾ.ಶರಣಪ್ಪ ಆನೆಹೊಸೂರು, ಅಕ್ಷತಾ ಕತ್ತಿ, ಶಿಲ್ಪಾ ಕೆಂಪ ಸಂಗಪ್ಪನವರ, ಹನಮೇಶಗೌಡರ ಮಾತನಾಡಿದರು. ಡಾ. ನಾಗಪ್ಪ ಸುಗೂರು, ಬಸವಂತಗೌಡ ರಾಮತನಾಳ, ಸಂಗಪ್ಪ ಭಾವಿಮನಿ, ಗ್ಯಾನಪ್ಪ ಕಟ್ಟಮನಿ, ಸಂಜೀವಪ್ಪ ಮೂಲಿಮನಿ, ಬಂದೇನವಾಜ ಕೋಳುರು, ಲಕ್ಷ್ಮಣ ಕತ್ತಿ, ಎಂ.ಡಿ. ಉಸ್ಮಾನ, ಯಂಕಪ್ಪ ಕೆಲ್ಲೂರು, ಸಂಗೀತ ಕಡಿ, ಸುರೇಶ ಇದ್ದರು.