ವಿದ್ಯಾರ್ಥಿಗಳು ಅವಕಾಶ ಸದುಪಯೋಗಪಡಿಸಿ ಗುರಿ ಸಾಧಿಸಿ


ಗದಗ, ಅ 31: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ಕೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಎನ್.ಎಸ್.ಎಸ್.ಎ. ಮತ್ತು ಬಿ ಘಟಕ ಹಾಗೂ ಗದಗ ಜಿಲ್ಲೆಯ ರೆಡ್ ರಿಬ್ಬನ್ ಕ್ಲಬ್‍ಗಳ ಸಂಯುಕ್ತ ಆಶ್ರಯದಲ್ಲಿ ಕೆ.ಎಸ್.ಎಸ್. ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಗದಗ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಜರುಗಿತು.
ಬಸವರಾಜ ಲಾಲಗಟ್ಟಿ ಮಾತನಾಡಿ ರಸಪ್ರಶ್ನೆ ಸ್ಪರ್ಧೆಯ ಉದ್ದೇಶಗಳನ್ನು ವಿವರಿಸಿ, ಯುವಜನರಲ್ಲಿ ರಕ್ತದಾನದ ಹಾಗು ಹೆಚ್.ಐ.ವಿ. ಏಡ್ಸ್ ಬಗ್ಗೆ ಅರಿವು ಮೂಡಿಸುವುದು ಈ ರಸಪ್ರಶ್ನೆ ಸ್ಪರ್ಧೆಯ ಉದ್ದೇಶವಾಗಿದೆ. ಹೆಚ್.ಐ.ವಿ. ಏಡ್ಸ್ ನಿಯಂತ್ರಣ ಸೇವೆ, ಸೌಲಭ್ಯ, ಕಳಂಕ ಮತ್ತು ತಾರತಮ್ಯ ಹಾಗೂ ರಾಷ್ರೀಯ ಸಹಾಯವಾಣಿ, ಹೆಚ್.ಐ.ವಿ. ಏಡ್ಸ್‍ಕಾಯ್ದೆ 2017 ಹಾಗೂ ರಕ್ತದಾನದ ಬಗ್ಗೆ ರಸಪ್ರಶ್ನೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಪೆÇ್ರ. ಭಾರತಿ ಮಣ್ಣೂರ ಮಾತನಾಡಿ ಸ್ಪರ್ಧಾಳುಗಳು ಸ್ಪೂರ್ತಿಯಿಂದ ಭಾಗವಹಿಸಿ ಕಾಲೇಜಿಗೆ ಕೀರ್ತಿ ತರಬೇಕೆಂದು ಹೇಳಿದರು. ವಿದ್ಯಾರ್ಥಿಜೀವನ ಅಮೂಲ್ಯವಾದದ್ದು, ವಿದ್ಯಾರ್ಥಿಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಗುರಿ ಸಾಧಿಸಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಬಿ.ಬಿ ಗವಾನಿಯವರು ಮಾತನಾಡಿ ಸ್ಪರ್ಧೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.
ಸಮಾರಂಬದಲ್ಲಿ ಎನ್.ಎಸ್.ಎಸ್. ನೋಡಲ್ ಅಧಿಕಾರಿಗಳಾದ ಪೆÇ್ರೀ. ವಿ,ಎಸ್. ಕೊಳ್ಳಿ , ಪೆÇ್ರೀ. ಶಿವಾನಂದ ಕೊರವರ ಡಾ|| ಅರವಿಂದ ಪೂಜಾರಿ, ಡಾ. ಕೃಷ್ಣಾ ಕಾರಬಾರಿ, ಡಾ. ಡಿ.ಬಿ. ಗವಾಣಿ, ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ರವಿ ಮತ್ತು ಬಾಗವಾನ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಜಿಲ್ಲೆಯ 28 ಕಾಲೇಜಿನ ತಂಡಗಳು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಜಂಟಿಯಾಗಿ ಕೆ.ಎಲ್.ಇ ವಿದ್ಯಾರ್ಥಿನಿಯರಾದ ಕು. ದ್ಯಾಮವ್ವ ಮತ್ತು ಕು. ಭವ್ಯ , ಮುಳಗುಂದ ಮಹಾವಿದ್ಯಾಲಯದ ಕು. ಸುಧಾ ಮತ್ತು ಕು. ಅಪ್ಸರಾ ಬಾನು ; ದ್ವೀತಿಯ ಸ್ಥಾನವನ್ನು ಜಂಟಿಯಾಗಿ ಕೆ.ಎಸ್.ಎಸ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕು. ಪೂಜಾ ಮತ್ತು ಕು ಭವ್ಯಾ , ಕು ಹರೀಶ ಮತ್ತು ವಿನಯ ಕುಮಾರ ; ತೃತೀಯ ಸ್ಥಾನವನ್ನು ಜಂಟಿಯಾಗಿ ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾಥಿಗಳಾದ ಕು. ಸಂಗಮೇಶ ಮತ್ತು ಶ್ರೀರಾಜ ಹಾಗೂ ಕೆ.ಎಎಸ್.ಎಸ್ ಮಹಾವಿದ್ಯಾಯಲದ ಕು. ಲಕ್ಷ್ಮಣ ಮತ್ತು ಕು. ಬಾಲಚಂದ್ರ ಪಡೆದುಕೊಂಡರು.
ಪೆÇ್ರ. ಪಲ್ಲೇದ ಸ್ವಾಗತಿಸಿ ವಂದಿಸಿದರು. ಪೆÇ್ರೀ. ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.