ವಿದ್ಯಾರ್ಥಿಗಳಿಗೆ ಹಾವುಗಳ ರಕ್ಷಣೆ ಕುರಿತು ಮಾಹಿತಿ ಕಾರ್ಯಕ್ರಮ

ಮಾನ್ವಿ,ಜು.೧೮- ಹಾವುಗಳು ರೈತರ ಸ್ನೇಹಿತರು, ಬೆಳೆಗಳನ್ನು ಕೀಟಗಳು, ಮಿಡತೆಗಳು, ಕಪ್ಪೆಗಳು, ಇಲಿಗಳಿಂದ ರಕ್ಷಿಸುವುದರ ಮೂಲಕ ನಮಗೆಲ್ಲಾ ಹಾವುಗಳು ನೆರವಾಗುತ್ತವೆ. ಎಂದು ಖ್ಯಾತ ಉರಗ ತಜ್ಞ ಅಪ್ಸರ್ ಹುಸೇನ್ ಹೇಳಿದರು. ಅವರು ಇಂದು ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ಹಾವುಗಳ ರಕ್ಷಣೆ ಮತ್ತು ಅವುಗಳ ಉಪಯೋಗ” ಕುರಿತ ವಿಶೇಷ ಮಾಹಿತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಪಂಚದಲ್ಲಿ ಸುಮಾರು ೨೬೦೦ ಜಾತಿಯ ಹಾವುಗಳಿವೆ. ಇವುಗಳಲ್ಲಿ ಕೇವಲ ನಾಲ್ಕಾರು ಪ್ರಬೇಧದ ಹಾವುಗಳು ಮಾತ್ರ ವಿಷಪೂರಿತವಾದವು. ಉಳಿದ ಹಾವುಗಳು ವಿಷಪೂರಿತವಲ್ಲ. ಎಮದು ಹೇಳಿದ ಅವರು ಅನವಶ್ಶವಾಗಿ ಹಾವುಗಳನ್ನು ಹಿಂಸಿಸುವುದು ಕೊಲ್ಲುವುದು ಮಾಡಬಾರದು. ಒಂದು ವೇಳೆ ನಾವು ವಾಸಿಸುವ ಪರಿಸರದಲ್ಲಿ ಹಾವುಗಳು ಕಂಡು ಬಂದರೆ ತಕ್ಷಣ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಹಾವುಗಳ ಕುರಿತ ವಿಶೇಷ ಮಾಹಿತಿ ನೀಡುವುದರ ಜೊತೆಗೆ ತಮ್ಮ ಜೊತೆಗೆ ತಂದಿದ್ದ ಹತ್ತಾಋಉ ಪ್ರಬೇಧದ ಹಾವುಗಳನ್ನು ಕೈಯಲ್ಲಿ ಹಿಡಿದು ತೋರಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೂ ಅವುಗಳನ್ನು ನೀಡಿ ಹಾವುಗಳು ನಿರುಪದ್ರವಿಗಳು ಅವುಗಳಿಗೆ ತೊಂದರೆಯಾಗದೇ ಅವು ಯಾರನ್ನೂ ಕಚ್ಚುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾನ್ವಿ ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ್, ಸಪ್ಸರ್ ಹುಸೇನ್, ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಹನುಮಂತಪ್ಪ ಬಿರಾದಾರ್, ರಮೇಶ್, ಜಗನ್ನಾಥ ಚೌದ್ರಿ, ಸಂಸ್ಥೆಯ ಕಾರ್ಯದರ್ಶಿ ಕೆ. ವಿಜಯಲಕ್ಷ್ಮಿ, ಅನೀಸ್ ಫಾತಿಮಾ ಮೆಡಂ, ಬಸವರಾಜ್, ರಹೀಂ ಪಾಷಾ, ಇದ್ದರು. ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾವುಗಳನ್ನು ಕೈಯಲ್ಲಿ ಹಿಡಿಯುವ ಮೂಲಕ ಭಯಮಿಶ್ರಿತ ಖುಷಿ ಅನುಭವಿಸಿದರು.