
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೯; ಚನ್ನಗಿರಿ ತಾಲ್ಲೂಕಿನ ಹರನಹಳ್ಳಿ ಕೆಂಗಾಪುರದ ಶ್ರೀರಾಮಲಿಂಗೇಶ್ವರ ಮಠದಲ್ಲಿ ಎರಡನೇ ಶ್ರಾವಣ ನಾಗರ ಪಂಚಮಿಯ ಹಬ್ಬದ ಅಂಗವಾಗಿ ಶ್ರೀರಾಮಲಿಂಗೇಶ್ವರ ಮಹಾಸ್ವಾಮಿಗಳು ಶ್ರೀ ರಾಮಲಿಂಗೇಶ್ವರ ಸ್ವಾಮಿ ವಿದ್ಯಾ ಸಂಸ್ಥೆಯ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಭಕ್ತಾದಿಗಳಿಗೆ ಹಾಲು ಕುಡಿಸುವ ಮೂಲಕ ಹಬ್ಬ ಆಚರಿಸಿ ಜೀವ ಜಂತುಗಳ ರಕ್ಷಣೆಗೆ ಮುಂದಾಗಿ ಎಂದು ಕರೆ ನೀಡಿದರು. ಈ ವೇಳೆ ಶಂಕ್ರನಾಯ್ಕ ವೀರಭದ್ರಪ್ಪ ಹನುಮಂತಪ್ಪ, ರವಿನಾಯ್ಕ, ಕೃಷ್ಣನಾಯ್ಕ ತಿಪ್ಪೇಶಪ್ಪ ಸ್ವಾಮಿ, ಭಜನಿನಾಯ್ಕ, ಶಾಲಾ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತಾದಿಗಳು ಪಾಲ್ಗೊಂಡಿದ್ದರು.