ಕಲಬುರಗಿ:ಜು.24: ಭಾμÁ ಪ್ರಯೋಗಾಲಯವು ಬರವಣಿಗೆ, ಓದುವಿಕೆ ಮತ್ತು ಆಲಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಅವರ ಧ್ವನಿ ಹದಗೊಳಿಸುವ ಜ್ಞಾನವನ್ನು ಸುಧಾರಿಸಲು ಮತ್ತು ಸಂವಹನ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು ತರಬೇತಿ ನೀಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಇಂಗ್ಲಿμï ವಿಭಾಗದಲ್ಲಿ ಭಾμÁ ಮತ್ತು ಚಲನಚಿತ್ರ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಥೆ ಬರವಣಿಗೆ, ಕಥೆ ಬರೆಯುವಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಫಿಲ್ಮ್ ಲ್ಯಾಬ್ ಸಹಾಯ ಮಾಡುವಂತಾಗಬೇಕು. ಇಂಗ್ಲಿμï ವಿಭಾಗವು ಸಾಹಿತ್ಯ ಕಲಿಸುವ ಜತೆಗೆ ಭಾμÉಯನ್ನು ಕಲಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಭಾμÉ ತಿಳಿಯದ ಹೊರತು ಸಾಹಿತ್ಯಅರ್ಥವಾಗುವುದಿಲ್ಲ. ಎಲ್ಲ ಭಾμÉಗಳನ್ನು ಒಂದೇ ರೀತಿಯ ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ದೇಶದಲ್ಲಿ ಮೂರು ಭಾμÁ ಸೂತ್ರವನ್ನು ಪರಿಚಯಿಸಿದ್ದಕ್ಕಾಗಿ ನಾವು ಆಧುನಿಕ ಭಾರತದ ನಿರ್ಮಾತೃಗಳನ್ನು ಶ್ಲಾಘಿಸಬೇಕು. ನಾವು ನಮ್ಮನ್ನು ಕೇವಲ ಒಂದು ಭಾμÉಗೆ ಸೀಮಿತಗೊಳಿಸದೆ. ಎಷ್ಟು ಸಾಧ್ಯವೋ ಅಷ್ಟು ಭಾμÉಗಳನ್ನು ಕಲಿಯಬೇಕು. ರಾಜಕಾರಣಿಗಳು ಭಾμÉಯ ವಿಚಾರದಲ್ಲಿ ರಾಜಕೀಯ ಮಾಡುತ್ತಾರೆ. ಭಾμÉಯ ಹೆಸರಿನಲ್ಲಿ ಜನರನ್ನು ಧ್ರುವೀಕರಿಸಲು ವಿದ್ಯಾರ್ಥಿಗಳು ಬಿಡಬಾರದು ಎಂದು ಅವರು ಹೇಳಿದರು.
ಇಂಗ್ಲಿμï ವಿಭಾಗದ ಮುಖ್ಯಸ್ಥ ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪೆÇ್ರ. ಬಸವರಾಜ್ ಡೋಣೂರ್ ಅವರು ಮಾತನಾಡಿ, ಭಾರತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿμïನ್ನು ಒಂದು ಭಾμÉಯಾಗಿ ಕಲಿಸುವುದು ಇನ್ನೂ ಒಂದು ಸವಾಲಾಗಿದೆ. ಭಾರತೀಯ ತರಗತಿಗಳು ಅತ್ಯಂತ ವೈವಿಧ್ಯಮಯವಾಗಿವೆ ಮತ್ತು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಮಟ್ಟಗಳೆರಡರಲ್ಲೂ ಅಡೆತಡೆಗಳನ್ನು ಹೊಂದಿರುತ್ತಾರೆ ಎಂದರು.
ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲಿμï ಕಲಿಸಲು ಇಂಗ್ಲಿμï ಶಿಕ್ಷಕರಿಗೆ ಸರಿಯಾಗಿತರಬೇತಿ ನೀಡಬೇಕು. ವಿಶ್ವವಿದ್ಯಾಲಯದ ಇಂಗ್ಲಿμï ವಿಭಾಗವು ಬರವಣಿಗೆ, ಓದುವಿಕೆ ಮತ್ತು ಆಲಿಸುವಿಕೆಯಂತಹ ಭಾμÁ ಕೌಶಲ್ಯಗಳನ್ನು ಕಲಿಸಲು ಬದ್ಧವಾಗಿದೆ. ಧ್ವನಿಯನ್ನು ಮಾಡ್ಯುಲೇಟ್ ಮಾಡಲು ಮತ್ತು ಪದಗಳನ್ನು ಸರಿಯಾಗಿ ಉಚ್ಚರಿಸಲು ವಿದ್ಯಾರ್ಥಿಗಳಿಗೆ ಲ್ಯಾಂಗ್ವೇಜ್ ಲ್ಯಾಬ್‍ನಲ್ಲಿ ತರಬೇತಿ ನೀಡಲಾಗುತ್ತದೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆಯಲು ಮತ್ತುಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳನ್ನು ಮಾಡಲು ವಿದ್ಯಾರ್ಥಿಗಳು ಫಿಲ್ಮ್ ಲ್ಯಾಬ್‍ನಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಅವರು ಹೇಳಿದರು. ಡಾ ಆಶಿಶ್ ಬೆಳಮಕರ್ ಅವರು ಕಾರ್ಯಕ್ರಮ ನಿರೂಪಿಸಿದರು, ಮಹೇಂದ್ರ ಎಂ., ಅವರು ಸ್ವಾಗತಿಸಿದರು ಮತ್ತು ಡಾ ಪ್ರಕಾಶ್ ಬಾಳಿಕಾಯಿ ಅವರು ವಂದಿಸಿದರು.