ವಿದ್ಯಾರ್ಥಿಗಳಿಗೆ ಸ್ಫೂರ್ತಿ, ಪ್ರೇರಣೆ ಅಗತ್ಯ: ಹಾಸಿಂಪೀರ ವಾಲಿಕಾರ

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.2: ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿ ಪ್ರೇರಣೆ ಹಾಗು ಸ್ಪೂರ್ತಿ ನಿಡುವದು ಅಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ತಿಕೋಟಾ ಪಟ್ಟಣದ ನೂತನ ಕಲಾ ಮಹಾವಿದ್ಯಾಲಯದಲ್ಲಿ ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ತಿಕೋಟಾ ತಾಲೂಕಿನ ಎಸ್ ಎಸ್ ಎಲ್ ಸಿ ಹಾಗು ಪಿ ಯು ಸಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ತಾಲೂಕಿನ ಗೌರವ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಸಿಂಪೀರ ವಾಲಿಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಸಿದ ಶಿಕ್ಷಕರ ಹಾಗು ಪಾಲಕರ ಪಾತ್ರ ಸ್ಮರಣಿಯವಾಗಿದೆ. ವಿದ್ಯಾರ್ಥಿಗಳನ್ನು ಸನ್ಮಾನಿಸುವದರಿಂದ ಅವರು ಉನ್ನತ ಶಿಕ್ಷಣದ ಕಲಿಕೆಯಲ್ಲಿ ಉತ್ಸಾಹದಿಂದ ವ್ಯಾಸಂಗ ಮಾಡುತ್ತಾರೆ ಎಂದರು.
ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮುಖ್ಯ ಅತಿಥಿಯಾಗಿ ಮಾತನಾಡಿ ತಿಕೋಟಾ ತಾಲೂಕಿನಲ್ಲಿ ಅತ್ಯಂತ ಪ್ರತಿಭಾವಂತ ಮಕ್ಕಳಿದ್ದಾರೆ. 625/621 ಅಂಕ ಪಡೆದಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವದು ಕಸಾಪ ಕ್ಕೆ ಹೆಮ್ಮೆಯ ಸಂಗತಿ ಎಂದರು.
ನೂತನ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪೆÇ್ರ ಆರ್ ಬಿ ಸಿರಸಂಗಿ ಮಾತನಾಡಿ ಇಂದು ತಿಕೋಟಾ ತಾಲೂಕ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಸಾಧನೆ ಮಾಡುತ್ತಿದೆ .ನೂತನ ತಾಲೂಕ ರಚನೆಯಾದರು ಶೈಕ್ಷಣಿಕ, ಕೃಷಿ, ರಾಜಕೀಯ, ಧಾರ್ಮಿಕ, ಸಾಂಸ್ಕøತಿಕ ಹಾಗು ಸಾಮಾಜಿಕವಾಗಿ ಬೆಳೆಯುತ್ತಿರುವದು ಅತ್ಯಂತ ಸಂತೋಷ ವಿಷಯ. ನೂತನ ಕಲಾ ಮಹಾವಿದ್ಯಾಲಯದಲ್ಲಿ ಏಳನೂರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದರು
ಎಸ್ ಎಸ್ ಎಲ್ ಸಿ ಕಲ್ಲಪ್ಪ ಕಕಮರಿ ಸ್ವಪ್ನಾ ಕಕಮರಿ ಚೈತ್ರಾ ಏಳಸಂಗ ಸುಸ್ಮೀತಾ ಕನಮಡಿ ಅಕ್ಷತಾ ಪಡತರೆ ಸಚೀನ ಸಜ್ಜನ ಸೃಷ್ಟಿ ರಾಠೋಡ ಇವರನ್ನು ಸನ್ಮಾನಿಸಲಾಯಿತು ಪಿ ಯು ಸಿ ವಿಭಾಗದಲ್ಲಿ ಸಂದೀಪ ಜಾಧವ ಸಂಗಮೇಶ ಏಳಸಂಗ ಅರವಿಂದ ಗೆಲ್ಲೊಟಿ ಇವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಎಸ್. ಬಿ. ಬಿರಾದಾರ ಗಣಪತಿ ಗಳವೆ ಚಂದ್ರಶೇಖರ ಹಿರೇಮಠ ಡಾ ಬಿ ಎಮ್ ಸಾಲವಾಡಗಿ ಸೋಮಶೇಖರ ಜತ್ತಿ ಶಿಲ್ಪಾ ಹಂಜಿ ಶೋಭಾ ಮೇಡೆದಾರ ಕವಿತಾ ಕಲ್ಯಾಣಪ್ಪಗೋಳ ವಿದ್ಯಾ ಕಲ್ಯಾಣಶೆಟ್ಟಿ ಸಂಗಮೇಶ ಜಂಗಮಶೆಟ್ಟಿ ರಾಚು ಕೊಪ್ಪ ರಜಿಯಾಬೇಗಂ ದಳವಾಯಿ ಶ್ರೀಧರ ಪತ್ತಾರ ಸುಮಲತಾ ಗಡಿಯಪ್ಪನವರ ರಾಜೇಸಾಬ ಶಿವನಗುತ್ತಿ ಸಂಗಮೇಶ ಕರೆಪ್ಪಗೋಳ ಜಿ ಪಿ ಬಿರಾದಾರ ಶಿವಾಜಿ ಮೋರೆ ಎಸ್ ಎಸ್ ಸಾತಿಹಾಳ ಬಸವರಾಜ ನಾವಿ ರುಕ್ಮಿಣಿ ಅಗಸರ ಮುಂತಾದವರು ಉಪಸ್ಥಿತರಿದ್ದರು