ವಿದ್ಯಾರ್ಥಿಗಳಿಗೆ ಸನ್ಮಾನ

ಬಾದಾಮಿ, ಮೇ19: ಕಲಿಕಾ ಹಂತದ ಮೊದಲ ಮೆಟ್ಟಿಲು ಎಸ್.ಎಸ್.ಎಲ್.ಸಿ ಪರೀಕ್ಷೆ ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ನಮ್ಮ ಬಾದಾಮಿ ತಾಲೂಕಿನ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ರೀ ಮೈಲಾರಲಿಂಗೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಮಹೇಶ ಹೊಸಗೌಡ್ರ ಹೇಳಿದರು.
ಅವರು ಪಟ್ಟಣದ ಜಯನಗರದ ಎಸ್.ಎಫ್.ಹೊಸಗೌಡ್ರ ವಲ್ರ್ಡ್ ಸ್ಕೂಲ್‍ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತರಿಗೆ ಸನ್ಮಾನಿಸಿ ಮಾತನಾಡಿದರು. ಈ ಹಿಂದೆ ದಕ್ಷಿಣ ಕರ್ನಾಟಕದ ವಿದ್ಯಾರ್ಥಿಗಳು ಟಾಪರ್ ಆಗುತ್ತಿದ್ದರು ಇಂದು ಉತ್ತರ ಕರ್ನಾಟಕದ ವಿದ್ಯಾರ್ಥಿ ಅಂಕಿತಾ ರಾಜ್ಯಕ್ಕೆ 625 ಅಂಕಗಳಿಗೆ 625 ಅಂಕಗಳನ್ನು ಪಡೆದು ಟಾಪರ್ ಆಗಿರುವುದು ಉನ್ನತ ಸಾಧನೆಯಾಗಿದ್ದು ನಮ್ಮ ಬಾದಾಮಿ ತಾಲೂಕಿನ ವಿದ್ಯಾರ್ಥಿಗಳಾದ ಮಿನಾಜ ಕುರುಡಗಿ(622), ಸಮೃದ್ಧಿ ಈರಗೌಡ್ರ (619), ಬಾನು ಬೇಗಂ ಲಾಡಕನ್ನವರ (616) , ಸಂಜೋತಾ ವಾಸ್ಟರ್ (615) , ಅರುಂಧತಿ ಹಿರೇಮಠ(613) ಹಾಗೂ ಅಂದ ವಿದ್ಯಾರ್ಥಿ ಕೃಷ್ಣ ಬನ್ನಿದಿನ್ನಿ (570) ಉತ್ತಮ ಅಂಕ ಪಡೆದು ಬಾದಾಮಿ ತಾಲೂಕಿಗೆ ಕೀರ್ತಿ ತಂದಿದ್ದು ಸಂತಸದ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್.ವೈ ಕೆಳಗಿಮನಿ, ಮುಖಂಡರಾದ ಸುಧೀಂದ್ರ ಹುನಗುಂಡಿ, ಪ್ರಕಾಶ ನಡಮನಿ, ಪತ್ರಕರ್ತ ಬಸವರಾಜ ಉಳ್ಳಾಗಡ್ಡಿ, ನಿವೃತ್ತ ಶಿಕ್ಷಕರಾದ ಎಸ್.ಜಿ ದೇಸಾಯಿ, ಪಕ್ಕೀರಪ್ಪ ಕುರಹಟ್ಟಿ, ಎಸ್.ಆರ್.ಹಂಪಿಹೊಳಿಮಠ, ಹುಲಗಪ್ಪ ಭೋವಿ, ಸಂತೋಷ ಕೆಳಗಿನಮನಿ, ಕೃಷ್ಣ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.