ವಿದ್ಯಾರ್ಥಿಗಳಿಗೆ ಸದ್ಭಾವನೆ,ಶಿಸ್ತು ಅವಶ್ಯ : ನ್ಯಾಯವಾದಿ ಕೆ.ಪಿ.ಭೈರಜಿ

ಇಂಡಿ: ಜು.17:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವನೆ ನೀಡಿದಲ್ಲಿ ವಿದ್ಯಾರ್ಥಿಗಳು ಸುಸಂಸ್ಕøತ ನಾಗರಿಕರಾಗುತ್ತಾರೆ. ಈ ನಿಟ್ಟಿನಲ್ಲಿ ಇಂಥ ಶಿಸ್ತಿನ ಶಿಕ್ಷಣ ನೀಡಲು ಸ್ಕೌಟ್ಸ ಮತ್ತು ಗೈಡ್ಸ ಸಂಸ್ಥೆ ಸದಾ ಶ್ರಮಿಸುತ್ತಿವೆ ಎಂದು ಸೇವಾದಳದ ತಾಲೂಕು ಅಧ್ಯಕ್ಷ ನ್ಯಾಯವಾದಿ ಕೆ.ಪಿ.ಭೈರಜಿ ಹೇಳಿದರು.

ನಗರದ ಸರಕಾರಿ ಉರ್ದು ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಇಂಡಿ ತಾಲೂಕಾ ಮಟ್ಟದ ಭಾರತ ಸೇವಾದಳ ಶಿಕ್ಷಕ ಮಿಲಾಪ ಪುನಃಶ್ಚೇತನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪರಿವೀಕ್ಷಕ ಎ.ಎಸ್.ಲಾಳಸೇರಿ, ನಾಗೇಶ ಡೋಣುರ, ಪುಂಡಲೀಕ ಸಣ್ಣಾರ, ಜಿ.ಜಿ.ಬರಡೋಲ, ಎಸ್.ಬಿ.ಕಲ್ಲೋಳಿ ಮಾತನಾಡಿದರು.

ನೂತನವಾಗಿ ಆಯ್ಕೆಯಾದ ಸೇವಾದಳದ ತಾಲೂಕು ಉಪಾಧ್ಯಕ್ಷೆ ರಾಜೇಶ್ವರಿ ಕ್ಷತ್ರಿ, ಕೋಶಾಧ್ಯಕ್ಷ ಅನೀಲಪ್ರಸಾದ ಏಳಗಿ, ಕಾರ್ಯದರ್ಶಿ ಎಮ್.ಎಲ್.ಪ್ಯಾಟಿ, ಸದಸ್ಯರಾದ ಜಿ.ಜಿ.ಬರಡೋಲ, ಎಲ್.ಬಿ.ತೋಟದ, ತಾಲೂಕಾ ಸಂಘಟಕ ಎಸ್.ಬಿ.ಕಲ್ಲೊಳ್ಳಿ, ಸಂಘಟನಾ ಕಾರ್ಯದರ್ಶಿ ಅಂಬಣ್ಣ ಸುಣಗಾರ, ಎಚ್.ಕೆ.ಮಾಳಗೊಂಡ ಇವರನ್ನು ಸನ್ಮಾನಿಸಲಾಯಿತು. 40 ಸೇವಾಧಳ ಶಿಕ್ಷಕರು ಪಾಲ್ಗೊಂಡಿದ್ದರು.