ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನ ಅತಿಮುಖ್ಯ

ಬೆಂಗಳೂರು,ಸೆ.೩-ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಂಗೀತ ಜ್ಞಾನ ಮೂಡಿಸುವುದು ಅತಿಮುಖ್ಯ ಎಂದು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾನ್ ಡಾ.ಸುಚೇತನ್ ರಂಗಸ್ವಾಮಿ ಅವರು ತಿಳಿಸಿದರು.
ಕಲಿಕೆಯ ಜೊತೆ ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳಲ್ಲಿ ಜ್ಞಾನ ಮೂಡಿಸುವುದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು ಎಂದು ಹೇಳಿದರು.
ನಗರದ ಕುಮಾರಕೃಪ ರಸ್ತೆಯ ಸಿಂಧಿ ಪ್ರೌಢಶಾಲೆಯಲ್ಲಿ ನಡೆದ ಶಾಲೆಯ ವಾರ್ಷಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಗೀತದಿಂದ ಏಕಾಗ್ರತೆ ಸಹನೆ ಸಂಯಮ ಕಲಿಕೆಯ ಆಸಕ್ತಿ ಹೆಚ್ಚಾಗಲಿದೆ ಎಂದರು.
ವೀಣಾವಾದನರಾಗಿಯೂ ಹೆಸರು ಪಡೆದಿರುವ ಡಾ.ಸುಚೇತನ್ ರಂಗಸ್ವಾಮಿ ಅವರು ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಾಗಲಿ ಸಾಧನೆ ಮಾಡು ಮೂಲಕ ಸಮಾಜಕ್ಕೆ ಮಾದರಿಯಾಗಬೇಕಾಗಿದೆ ಎಂದು ಹೇಳಿದರು.
ಪ್ರೌಢಶಾಲಾ ವಿದ್ಯಾರ್ಥಿಗಳ ವಾರ್ಷಿಕ ದಿನಾಚರಣೆಯು “ರಿಶ್ತೆ ಕೀ ದುನಿಯಾ – ಏಕ್ ಅನ್ಮೋಲ್ ವಿರಾಸತ್ ” ಎಂಬ ಶೀರ್ಷಿಕೆ ಅಡಿಯಲ್ಲಿ ನಡೆಯಿತು
ಸಂಬಂಧಗಳ ಪ್ರಪಂಚವು ಅಮೂಲ್ಯವಾದ ಪರಂಪರೆಯಾಗಿದೆ ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳು ತಮ್ಮ ಅಭಿನಯ ಮತ್ತು ನೃತ್ಯದ ಮೂಲಕ ಬಾಲ್ಯದ ಜೀವನವನ್ನು ನೆನೆಪಿಸುವಂತೆ ಮಾಡಿ ವಸುದೈವ ಕುಟುಂಬಕಂ ಸಂದೇಶವನ್ನು ಸಾರಿದರು. ಶಾಲೆಯ ಅಧ್ಯಕ್ಷರಾದ ಸಂಜೀವ್ ಆತ್ಮ ರಾಮ್, ಚೇರ್ಮನ್ ರಾಜನ್ ದೌಲತ್ ರಾಮ್, ದೇವಿಕ ಕಿರಣ್,ಸಿಂಧಿ ಸೇವಾ ಸಮಿತಿಯ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.