ವಿದ್ಯಾರ್ಥಿಗಳಿಗೆ ಶಿಕ್ಷಣೇತರ ಚಟುವಟಿಕೆ ಅತ್ಯಗತ್ಯ

ಚಿಕ್ಕಬಳ್ಳಾಪುರ,ಮೇ.೨೩-ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿ ನೀಡಿದಾಗ ಭವಿಷ್ಯ ಭಾರತ ನಿರ್ಮಾಣವಾಗುತ್ತದೆ. ಭವಿಷ್ಯ ಭಾರತದ ನಿರ್ಮಾಣ ಯುವಕರ ಮೇಲಿದೆ ಎಂದು ಮಾಜಿ ಉಪ ರಾಷ್ಟ್ರಪತಿ ವೆಂಕಯ ನಾಯ್ಡು ಅಭಿಪ್ರಾಯಪಟ್ಟರು.
ನಗರ ಹೊರವಲಯದ ನಾಗಾರ್ಜು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಲಿಷ್ಠ ಮತ್ತು ಭವಿಷ್ಯದ ಭಾರತವನ್ನು ಬೆಳೆಸುವಲ್ಲಿ ಯುವಕರ ಕೊಡುಗೆ ಕುರಿತು ನಡೆದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎಂದರೆ ಕೇವಲ ಪದವಿಗೆ ಸಿಮೀತವಲ್ಲ, ಇತರೆ ಕ್ಷೇತ್ರಗಳಂತೆ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗಳನ್ನು ಕಾಣಲಾಗುತ್ತಿದೆ ಎಂದರು.
ಬದಲಾವಣೆಗಳಿಗೆ ತಕ್ಕಂತೆ ಉಪನ್ಯಾಕಸರು, ಪ್ರಾಧ್ಯಪಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು. ಅಗ ಅವರು ವೇಗಕ್ಕೆ ಹೊಂದಿಕೊಂಡು ಹೊಸ ಹೊಸ ಅವಿಷ್ಕಾರ, ಸಂಶೋಧನೆಗೆ ಮುಂದಾಗುತ್ತಾರೆ. ದೇಶದಲ್ಲಿ, ಸ್ಥಳೀಯವಾಗಿ ಎದುರಾಗುತ್ತಿರುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿದಾಗ ಹೊಸ ಅಲೋಚನೆಗಳೊಂದಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಹೇಳಿದರು.
ದೇಶದ ಏಕತೆಯಲ್ಲಿ ವಿವಿಧತೆಯನ್ನು ಹೊಂದಿದೆ. ಶೇ.೬೦ರಷ್ಟು ಯುವ ಶಕ್ತಿ ಹೊಂದಿರುವ ದೇಶ ಭಾರತ, ಕೃಷಿ ಪ್ರಧಾನವಾದದ್ದು ದೇಶ, ಕೃಷಿ ಕ್ಷೇತ್ರದಿಂದಲೇ ಇಂದು ಆರ್ಥಿಕ ಸುಧಾರಣೆಯನ್ನು ಕಾಣಲು ಸಾಧ್ಯವಾಗುತ್ತಿದೆ. ಕೃಷಿ ಉತ್ಪಾದನೆ, ಮಾರುಕಟ್ಟೆ, ಮಾರಾಟಗಾರ, ವರ್ತಕ ಹೀಗೆ ಒಂದೊಂದಕೊಂದು ಸಂಬಂಧಗಳು ಇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿಯನ್ನು ಯುವಕರು ಉದಾಸೀನವಾಗಿ ಕಾಣುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಾಗತೀಕ ಮಟ್ಟದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿ ಇದೆ. ಉನ್ನತ ಶಿಕ್ಷಣವು ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡುವಲ್ಲಿ ಎರಡನೇ ಸ್ಥಾನದಲ್ಲಿಯಿದೆ. ನೂತನ ಶಿಕ್ಷಣ ನೀತಿಯಿಂದ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಲಾಗುತ್ತಿದೆ. ವಿದ್ಯಾರ್ಥಿಗಳು ಮೊದಲು ಮಾತೃ ಭಾಷೆಯಲ್ಲಿ ಕಲಿಯಬೇಕು. ಆನಂತರ ಸೋದರ ಭಾಷೆಗಳಲ್ಲಿ ಕಲಿಬಹುದು. ಇದಕ್ಕೆ ನಿದರ್ಶನವೆಂದರೆ ದೇಶದ ರಾಷ್ಟ್ರಪತಿ, ಪ್ರಧಾನಿ ಹಾಗೂ ನಾನು ಯಾವುದೇ ಕಾನ್ವಮೆಂಟ್‌ಗಳಲ್ಲಿ ವಿದ್ಯೆ ಪಡೆದವರಲ್ಲ. ತಮ್ಮ ತಮ್ಮ ಮಾತೃ ಭಾಷೆಯಲ್ಲೆ ವಿದ್ಯೆ ಪಡೆದು ಉನ್ನತ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೆವೆ ಎಂದು ಹೇಳಿದರು.