ವಿದ್ಯಾರ್ಥಿಗಳಿಗೆ ವಿಷಯವಾರು ಪರೀಕ್ಷಾ ಕಾರ್ಯಾಗಾರ

ದೇವದುರ್ಗ.ಜ.೧೬- ಆಧುನಿಕ ಜಗತ್ತಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಮಾರು ಹೋಗಿರುವ ಯುವಕರು,ವಿದ್ಯಾರ್ಥಿಗಳ ಬಾಳು ಹಾಳಾಗುತ್ತಿದೆ.ಸಣ್ಣ ವಯಸ್ಸಿನಲ್ಲಿಯೇ ಆರೋಪಿಗಳಾಗುತ್ತಿರುವದು ತುಂಬಾ ಕಳವಳಕಾರಿ ಸಂಗತಿಯಾಗಿದೆ.ಈ ಬೆಳವಣಿಗೆ ನಾಗರಿಕ ಸಮಾಜಕ್ಕೆ ಕಳಂಕ ಎಂದು ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಹಿರಿಯ ಸಲಹೆಗಾರ ತಿರುಪತಿ ಸೂಗೂರ ತಿಳಿಸಿದರು.
ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಬಸವ ಪಿಯು ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಸಿದ್ದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ವಿಷಯವಾರು ಪರೀಕ್ಷಾ ಕಾರ್ಯಾಗಾರದಲ್ಲಿ ಮಾತನಾಡಿ,ಸರಕಾರದ ಹೊಸ ಶಿಕ್ಷಣದ ನೀತಿಗಳು ಶಿಕ್ಷಣ ಕ್ಷೇತ್ರದಲ್ಲಿ ಮಾರಕವಾಗಿ ರೂಪುಗೊಳ್ಳುತಿವೆ.
ಅಪರಾಧ ಪ್ರಕರಣಗಳನ್ನು ಗಮನಿಸಿದಾಗ ವಿದ್ಯಾರ್ಥಿಗಳ ಪಾಲು ಗಣನೀಯವಾಗಿ ಕಂಡುಬರುತ್ತಿದೆ.ಕಾರಣ ಉನ್ನತ ಭವಿಷ್ಯ ರೂಪಿಸಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲಿದೆ.ಪಾಲಕರು ನಿಮ್ಮ ಮೇಲೆ ಅನೇಕ ಕನಸುಗಳನ್ನು ಕಂಡುಕೊಂಡು,ಬಡತನ,ಕಷ್ಟ ಕಾರ್ಪಣ್ಯಗಳಿದ್ದರೂ ಶಿಕ್ಷಣ ಪಡೆಯುವದಕ್ಕೆ ಪ್ರೋತ್ಸಾಹ ಮಾಡುತ್ತಿದ್ದಾರೆ.ಸರಕಾರ ಕೂಡ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು,ಪ್ರಯೋಜನೆ ಪಡೆದುಕೊಂಡು ಉಪನ್ಯಾಸಕರು ಬೋಧಿಸುವ ವಿಷಯದ ಕಡೆ ಗಮನವಿಡಿ,ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಎಂದು ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಹಿರಿಯ ಸಲಹೆಗಾರ ತಿರುಪತಿ ಸೂಗೂರ ತಿಳಿಸಿದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ,ಹಿರಿಯ ಪತ್ರ್ರಕರ್ತ ನರಸಿಂಗರಾವ್ ಸರಕೀಲ್ ಉದ್ಘಾಟಿಸಿದರು.
ಸಂಸ್ಥೆ ಅಧ್ಯಕ್ಷ ವಿರುಪಾಕ್ಷಿಗೌಡ ಮುಷ್ಠೂರ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಬಾಬು ಕರಿಗುಡ್ಡ, ಶಹಪೂರ ಪಿಯು ಕಾಲೆಜು ರಾಜ್ಯ ಶಾಸ್ತ್ರ ಉಪನ್ಯಾಸಕ ಭೀಮಣ್ಣ ಅಂಚೆಸೂಗೂರ, ಸಂಸ್ಥೆಯ ಉಪನ್ಯಾಸಕ ಮಲ್ಲೇಶ್ವರಯ್ಯ, ಅಮರೇಶ ಗೋಪಾಳಪೂರ, ಯಲಪ್ಪ ಗೌಡೂರ, ಹನುಮಂತ್ರಾಯ ನಾಯಕ ಮಾತನಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಭೀಮಣ್ಣ ಅಂಚೆಸುಗೂರ,ಚರಣರಾಜರನ್ನು ಸನ್ಮಾನಿಸಲಾಯಿತು.
ಕನ್ನಡ ಉಪನ್ಯಾಸಕಿ ಬಸ್ಸಮ್ಮ ವಾರದ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿವಲಿಂಗಪ್ಪ ನಾಯಕ ಇತಿಹಾಸ, ಭೀಮಣ್ಣ ಅಂಚೆಸೂಗೂರ ರಾಜ್ಯಶಾಸ್ತ್ರ, ಮಲ್ಲಿಕಾರ್ಜುನ ಕೆ, ಸಮಾಜ ಶಾಸ್ತ್ರ, ಶಿವರಾಜ ಅಬಕಾರಿ ಶಿಕ್ಷಣಶಾಸ್ತ್ರ, ಪ್ರಭಂಜನ ಕುಲಕರ್ಣಿ ಇಂಗ್ಲೀಷ, ಶಿವುಕುಮಾರ ಬಲ್ಲಟ ಕನ್ನಡ ವಿಷಯಗಳ ಕುರಿತು ಪರೀಕ್ಷೆಗಳ ಪೂರ್ವ ಸಿದ್ಧತೆಗಾಗಿ ವಿಶೇಷ ಬೋದನೆ, ಮಾಹಿತಿ ನೀಡಿದರು.