
ತಾಳಿಕೋಟೆ:ಆ.15: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಶಿವಯೋಗಿ ಸಂಗಮಾರ್ಯ ವಿಧ್ಯಾ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಬ್ರಹ್ಮಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 5,6,7 ಮತ್ತು 8,9,10ನೇ ತರಗತಿ ಓದುತ್ತಿರುವ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದ ಪ್ರತಿಭಾವಂತ ಬಡ ವಿಧ್ಯಾರ್ಥಿಗಳಲ್ಲಿ ಒಬ್ಬರಂತೆ ಆಯ್ಕೆಗೊಳಿಸಿ ಕೆನರಾ ಬ್ಯಾಂಕಿನ ವತಿಯಿಂದ ಪ್ರತಿವರ್ಷ ನೀಡಲಾಗುವ ವಿಧ್ಯಾಜ್ಯೋತಿ ಪ್ರೋತ್ಸಾಹದನವನ್ನು ಬ್ಯಾಂಕಿನ ವ್ಯವಸ್ಥಾಪಕ ಸಿ.ಪ್ರತಾಪ ಮತ್ತು ಗುರು ಕಾಜಗಾರ ಅವರು ನೀಡಿದರು.
ಈ ಸಮಯದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ಪ್ರತಿವರ್ಷವೂ ಕೆನರಾ ಬ್ಯಾಂಕಿನ ವತಿಯಿಂದ ಬಡ ವಿಧ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕಾಗಿ ವಿಧ್ಯಾಜ್ಯೋತಿ ಪ್ರೋತ್ಸಾಹದನವನ್ನು ನೀಡುತ್ತಾ ಬರಲಾಗಿದೆ ಈ ಪ್ರೋತ್ಸಾಹದನದಿಂದ ಸಾಕಷ್ಟು ಬಡ ವಿಧ್ಯಾರ್ಥಿಗಳಿಗೆ ಅನುಕೂಲವಾಗಿದೆ ಇದರ ಸದುಪಯೋಗ ವಿಧ್ಯಾರ್ಥಿಗಳು ಪಡೆದುಕೊಂಡು ಶೈಕ್ಷಣಿಕದ ಸಾಧನೆಯ ದಾರಿಯತ್ತ ಸಾಗಬೇಕೆಂದ ಅವರು ಬಡ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಕೆನರಾ ಬ್ಯಾಂಕಿನಿಂದ ವಿಧ್ಯಾಜ್ಯೋತಿ ಪ್ರೋತ್ಸಾಹದ ಯೋಜನೆ ಹೊರತಂದಿರುವದು ಬ್ಯಾಂಕಿನ ಏಳಿಗೆಯ ಜೊತೆಗೆ ಶ್ರೇಯಸ್ಸು ಕೂಡಾ ಬ್ಯಾಂಕಿಗೆ ಸಲ್ಲುತ್ತದೆ ಎಂದರು.
ಈ ಸಮಯದಲ್ಲಿ ಪ್ರೌಢ ಶಾಲಾ ಮುಖ್ಯಗುರುಗಳಾದ ಅಶೋಕ ಕಟ್ಟಿ, ಹಾಗೂ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಸಮಸ್ತ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.