ವಿದ್ಯಾರ್ಥಿಗಳಿಗೆ ವರ್ಕ್‌ಬುಕ್ ವಿತರಣೆ

ದೇವದುರ್ಗ.ಏ.೦೨-ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಕ್ಯಾಸ್ಕೋ ಹಾಗೂ ಬೆಂಗಳೂರಿನ ಕ್ರೈ ಸಂಸ್ಥೆ ಸಹಯೋಗದಲ್ಲಿ ಮುಷ್ಟೂರು, ಶಿವಂಗಿ, ಜಾಗೀರ್ ಜಾಡಲದಿನ್ನಿ, ಜರದಬಂಡಿ, ಕ್ಯಾದಿಗೇರಾದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ಹಾಗೂ ವರ್ಕ್‌ಬುಕ್ ಬುಧವಾರ ವಿತರಿಸಲಾಯಿತು.
ಮುಷ್ಟೂರು ಪ್ರೌಢಶಾಲೆ ಮುಖ್ಯಶಿಕ್ಷಕ ಮುತ್ತುರಾಜ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಸಂಘ, ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಶಿಕ್ಷಣ ಇಲಾಖೆ ಕೂಡ ಹಲವು ಯೋಜನೆ ರೂಪಿಸಿ ತರಬೇತಿ ನೀಡುತ್ತಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಇವುಗಳ ಸದ್ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆಯಬೇಕು ಎಂದು ಹೇಳಿದರು.
ಶಿಕ್ಷಕರಾದ ಶಿವರಾಜ ಪೂಜಾರಿ, ರಾಚಪ್ಪ, ವಿಶ್ವನಾಥ, ಶಾಂತಪ್ಪ, ಮುಖ್ಯಶಿಕ್ಷಕ ರುದ್ರಪ್ಪ ಭಜಂತ್ರಿ, ವಿಜಯಕುಮಾರ, ಪ್ರಭುಲಿಂಗಯ್ಯ, ಯೋಗೇಶ, ರಂಗನಾಥ, ರೇಣುಕಮ್ಮ, ಶ್ರುತಿ ಸಾಂಸ್ಕೃತಿಕ ವೇದಿಕೆ ತಾಲೂಕು ಸಂಚಾಲಕ ರಾಮಣ್ಣ ಎನ್.ಗಣೇಕಲ್, ಅಂಗನವಾಡಿ ಕಾರ್ಯಕರ್ತೆ ಚನ್ನಬಸಮ್ಮ ಪಾಟೀಲ್, ಚನ್ನಮ್ಮ ನಾಯಕ ಇತರರಿದ್ದರು.