ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ


ಜಗಳೂರು.ನ.೧೦; ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ (ರಿ) ಜಗಳೂರು ಇದರ ವತಿಯಿಂದ ವಿರೇಂದ್ರ ಹೆಗ್ಗಡೆಯವರ ಮಾಗ೯ದಶ೯ನದಂತೆ ಕೋವಿಡ್ ಸಮಸ್ಯೆಯಿಂದ ಶಾಲೆಗಳು ಮುಚ್ಚಿರುವ ಈ ಸಂದರ್ಭದಲ್ಲಿ ಗ್ರಾಮೀಣ ಮಕ್ಕಳಲ್ಲಿ ಅಂತರ್ಜಾಲ ಶಿಕ್ಷಣದ ಮಹತ್ವವನ್ನು ತಿಳಿಸಲು ಟ್ಯಾಬ್ ಮತ್ತು ಲ್ಯಾಪ್ ಟಾಪ್ ಮುಖಾಂತರ ಮಾಡಿರುವ ಪ್ರಯತ್ನವೆ “ಜ್ಞಾನತಾಣ”
ಈ ಕಾಯ೯ಕ್ರಮದಲ್ಲಿ ಜಗಳೂರು ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರಪ್ಪ ರವರು” ಜ್ಞಾನತಾಣ” ಕಾಯ೯ಕ್ರಮ ಉದ್ಘಾಟನೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಲ್ಯಾಪ್ ಟಾಪ್ ವಿತರಣೆ ಮಾಡಿದರು.ಈ ಕಾಯ೯ಕ್ರಮದ ಮುಖ್ಯ ಅತಿಥಿಗಳಾಗಿ ಜನರ್ಧನ್ ಎಸ್ ಜಿಲ್ಲಾ ನಿರ್ದೇಶಕರು. ಜಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ವೇಂಕಟೇಶ. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಡಾ ಪಿ ಎಸ್ ಅರವಿಂದನ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಣಬೂರು ಮಠದ ಕೊಟ್ರೇಶ್ ಜಗಳೂರು ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿಗಳಾದ ಗುಣಕಾರ್ ಕೆ ಸಂಸ್ಥೆಯ ಮೇಲ್ವಿಚಾರಕರಾದ ಮಮತಾ ಜಗಳೂರು ತಾಲೂಕಿನ ಪತ್ರಕರ್ತರು ಹಾಗೂ ವಿವಿಧ ಇಲಾಖೆಯ ಗಣ್ಯರು ಹಾಗೂ ಪೋಷಕರು, ಮತ್ತು ಶಾಲಾ ವಿದ್ಯಾರ್ಥಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೊಜನೆಯ ಕಾಯ೯ಕತ೯ರು ಉಪಸ್ಥಿತರಿದ್ದರು.
೧೩